ವಾಹನ ಮಾರಾಟ: ಫೆಬ್ರವರಿ ರಿಪೋರ್ಟ್ ಕಾರ್ಡ್ ಇಲ್ಲಿದೆ

Auto Sales Feb 2011
ಫೆಬ್ರವರಿಯಲ್ಲಿ ದೇಶದ ವಾಹನ ಕಂಪನಿಗಳ ಮಾರಾಟ ಗಣನೀಯವಾಗಿ ಏರಿಕೆ ಕಂಡಿವೆ. ದೇಶದ ಬೃಹತ್ ಕಾರ್ ತಯಾರಿಕಾ ಕಂಪನಿ ಮಾರುತಿ ಸುಜುಕಿ ಕಳೆದ ತಿಂಗಳು 1,11,645 ಯೂನಿಟ್ ವಾಹನ ಮಾರಾಟ ಮಾಡಿದ್ದು ಕಳೆದ ವರ್ಷದ ಇದೇ ತಿಂಗಳ 96,650 ಕಾರ್ ಮಾರಾಟಕ್ಕೆ ಹೋಲಿಸಿದರೆ ಶೇ. 15.51ರಷ್ಟು ಏರಿಕೆ ಕಂಡಿದೆ. ಇದೇ ಅವಧಿಯಲ್ಲಿ ಕಂಪನಿಯ ದೇಶಿಯ ಮಾರಾಟ 1,01,543 ಯೂನಿಟ್ ಗೆ ತಲುಪಿ ಶೇ. 19.79ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷದ ಫೆಬ್ರವರಿಯಲ್ಲಿ ಕಂಪನಿಯ ದೇಶಿಯ ಮಾರಾಟ 84,765 ಯೂನಿಟಾಗಿತ್ತು. ಆದರೆ ಕಂಪನಿಯ ರಫ್ತು ವಹಿವಾಟು ಶೇ. 15ರಷ್ಟು ಇಳಿಕೆ ಕಂಡಿದೆ.

ಫೋರ್ಡ್ ಇಂಡಿಯಾ: ಫಿಗೊ ಕಾರಿನ ನೆರವಿನಿಂದ ಫೆಬ್ರವರಿ ತಿಂಗಳಲ್ಲಿ ಫೋರ್ಡ್ ಇಂಡಿಯಾ ಒಟ್ಟು 9,293 ಕಾರ್ ಮಾರಾಟ ಮಾಡಿದ್ದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 3 ಪಟ್ಟು ಏರಿಕೆ ಕಂಡಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಕಂಪನಿಯು 3,223 ಕಾರ್ ಮಾರಾಟ ಮಾಡಿತ್ತು. ದೇಶದಲ್ಲಿ ಕಳೆದ ವರ್ಷ ಸುಮಾರು 76 ಸಾವಿರ ಫಿಗೊ ಕಾರ್ ಮಾರಾಟಗೊಂಡಿರುವುದಾಗಿ ಫೋರ್ಡ್ ಪ್ರಕಟಣೆಯಲ್ಲಿ ತಿಳಿಸಿದೆ.

ಹ್ಯುಂಡೈ ಮೋಟರ್ ಇಂಡಿಯಾ: ಫೆಬ್ರವರಿಯಲ್ಲಿ ದೇಶದ ಎರಡನೇಯ ಬೃಹತ್ ವಾಹನ ತಯಾರಿಕಾ ಕಂಪನಿ ಹ್ಯುಂಡೈ ಮೋಟರ್ ಇಂಡಿಯಾ 52,007 ಕಾರ್ ಮಾರಾಟ ಮಾಡಿದ್ದು ಕಳೆದ ವರ್ಷದ ಇದೇ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ. 4.77ರಷ್ಟು ಇಳಿಕೆ ಕಂಡಿದೆ. ಕಳೆದ ಫೆಬ್ರವರಿಯಲ್ಲಿ ಕಂಪನಿ 54,610 ಕಾರ್ ಮಾರಾಟ ಮಾಡಿತ್ತು. ಆದರೆ ದೇಶದಲ್ಲಿ ಕಂಪನಿ ಸುಮಾರು 32,629 ಕಾರ್ ಮಾರಾಟ ಮಾಡಿದ್ದು ಕಳೆದ ವರ್ಷದ ಫೆಬ್ರವರಿಗೆ ಹೋಲಿಸಿದರೆ ಶೇ. 5.25ರಷ್ಟು ಏರಿಕೆ ದಾಖಲಿಸಿದೆ.

ಟಾಟಾ ಮೋಟರ್ಸ್: ಫೆಬ್ರವರಿ ತಿಂಗಳಲ್ಲಿ ಟಾಟಾ ಮೋಟರ್ಸ್ ಸುಮಾರು 77,543 ಯೂನಿಟ್ ವಾಹನ ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ತಿಂಗಳ 69,427 ಯೂನಿಟ್ ಮಾರಾಟಕ್ಕೆ ಹೋಲಿಸಿದರೆ ಶೇ. 11.69ರಷ್ಟು ಏರಿಕೆ ಕಂಡಿದೆ. ಕಂಪನಿಯು ದೇಶದಲ್ಲಿ ಸುಮಾರು 31,909 ಯೂನಿಟ್ ಪ್ರಯಾಣಿಕ ವಾಹನ ಮಾರಾಟ ಮಾಡಿದ್ದು, ಶೇ. 18.25ರಷ್ಟು ಏರಿಕೆ ಕಂಡಿದೆ. ಇದೇ ಸಮಯದಲ್ಲಿ ಕಂಪನಿಯ ನ್ಯಾನೊ ಕಾರ್ ಮಾರಾಟ ಭರ್ಜರಿ ಏರಿಕೆ ಕಂಡಿದೆ. ಫೆಬ್ರವರಿಯಲ್ಲಿ ಕಂಪನಿಯ ಅಗ್ಗದ ಸಣ್ಣ ಕಾರ್ ನ್ಯಾನೊ ಮಾರಾಟ 8,262 ಯೂನಿಟ್ ತಲುಪಿದ್ದು, ಕಳೆದ ವರ್ಷದ ಫೆಬ್ರವರಿಗೆ ಹೋಲಿಸಿದರೆ ಶೇ. 101ರಷ್ಟು ಏರಿಕೆ ಕಂಡಿದೆ.

ಇದನ್ನೂ ಓದಿ: ಜನವರಿಯಲ್ಲಿ ವಾಹನ ಕಂಪನಿಗಳಿಗೆ ಶುಕ್ರದೆಸೆ

ಇತರ ಕಂಪನಿಗಳು: ಫೆಬ್ರವರಿ ತಿಂಗಳಲ್ಲಿ ವೋಕ್ಸ್ ವ್ಯಾಗನ್ ಕಂಪನಿಯು ದೇಶದಲ್ಲಿ 7,077 ಕಾರ್ ಮಾರಾಟ ಮಾಡಿದೆ. ಮಹೀಂದ್ರ ಕಂಪನಿ ಕೂಡ ಸುಮಾರು 33,378 ಯೂನಿಟ್ ವಾಹನ ಮಾರಾಟ ಮಾಡಿದ್ದು ಕಳೆದ ವರ್ಷದ ಫೆಬ್ರವರಿಗೆ ಹೋಲಿಸಿದರೆ ಶೇ. 20ರಷ್ಟು ಏರಿಕೆ ದಾಖಲಿಸಿದೆ. ಇದೇ ಅವಧಿಯಲ್ಲಿ ನಿಸ್ಸಾನ್ ಇಂಡಿಯಾ ಕೂಡ ಸುಮಾರು 2,081 ವಾಹನ ಮಾರಾಟ ಮಾಡಿದ್ದು ಕಳೆದ ಫೆಬ್ರವರಿಯ 44 ವಾಹನ ಮಾರಾಟಕ್ಕೆ ಹೋಲಿಸಿದರೆ ಭರ್ಜರಿ ಏರಿಕೆಯಾಗಿದೆ.

ಫೆಬ್ರವರಿ ತಿಂಗಳಲ್ಲಿ ಟಿವಿಎಸ್ ಮೋಟರ್ ಸುಮಾರು 1.77 ಲಕ್ಷ ಟೂ-ವೀಲರ್ ಮತ್ತು ತ್ರಿ-ವಿಲರ್ ಮಾರಾಟ ಮಾಡಿದ್ದು ಕಳೆದ ವರ್ಷದ ಇದೇ ತಿಂಗಳ 1.42 ಯೂನಿಟ್ ಮಾರಾಟಕ್ಕೆ ಹೋಲಿಸಿದರೆ ಗಣನೀಯವಾಗಿ ಏರಿಕೆ ಕಂಡಿದೆ. ಕಳೆದ ತಿಂಗಳು ಸ್ಕೋಡಾ ಆಟೋ ಇಂಡಿಯಾ 2,512 ಯೂನಿಟ್ ವಾಹನ ಮಾರಾಟ ಮಾಡಿದ್ದು ಕಳೆದ ವರ್ಷದ ಫೆಬ್ರವರಿಯ 1805 ಯೂನಿಟ್ ಮಾರಾಟಕ್ಕೆ ಹೋಲಿಸಿದರೆ ಶೇ. 39.17ರಷ್ಟು ಏರಿಕೆ ಕಂಡಿದೆ.

More from DriveSpark

Article Published On: Wednesday, March 2, 2011, 10:45 [IST]
English summary
Indian Auto Industries continue good sales. Maruti Suzuki India reported a 15.51 percent jump in sales during February, 2011, to 1,11,645 units. Car maker Ford India reported a nearly three-fold jump in its February sales. Hyundai Motor India has reported a 4.77 per cent decline in total sales. Sales of the Tata Nano, stood at 8,262 units sales during the month, a 101 per cent increase vis-a-vis the corresponding period of the previous year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+