ಮರ್ಸಿಡಿಸ್ ಬೆಂಝ್ ಗೆ 125ರ ಸಂಭ್ರಮ

Mercedes Benz
ಜಾಗತಿಕ ಮಾರುಕಟ್ಟೆಯಲ್ಲಿ ಐಷಾರಾಮಿ ವಾಹನ ಮಾರುಕಟ್ಟೆಗೆ ಹೊಸ ಭಾಷ್ಯ ಬರೆದ ಕಂಪನಿ ಬೆಂಝ್. ಇದು ವಿಶ್ವದ ಮೊದಲ ವಾಹನ ಕಂಡು ಹುಡುಕಿದ ಕಂಪನಿ ಕೂಡ ಹೌದು. ಲಕ್ಷುರಿ ವಾಹನ ತಯಾರಿಕಾ ಕಂಪನಿ ಜಗತ್ತಿಗೆ ಮೊದಲ ವಾಹನ ಪರಿಚಯಿಸಿ ಸುಮಾರು 125 ವರ್ಷ ಸಂದಿದ್ದು, ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟಯಲ್ಲಿ 125ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ.

125 ವರ್ಷದ ಹಿಂದೆ ಕಾರ್ಲ್ ಬೆಂಝ್ ಎಂಬಾತ ಜಗತ್ತಿನ ಮೊದಲ ವಾಹನಕ್ಕೆ ಪರವಾನಿಗೆ ಪಡೆಯುವ ಮೂಲಕ ಮರ್ಸಿಡಿಸ್ ಶಕೆ ಆರಂಭವಾಗಿತ್ತು. "ಈಗ ಕಂಪನಿಯು ವಾಹನ ಲೋಕದ ಸುಮಾರು ಶೇಕಡಾ 80ರಷ್ಟು ಡೊಮೈನ್ ಹೆಸರುಗಳಿಗೆ ಪರವಾನಿಗೆ ತನ್ನದಾಗಿಸಿಕೊಂಡಿದೆ. ಮುಂದಿನ ದಿನಗಳಲ್ಲೂ ಕಂಪನಿ ಗ್ರಾಹಕರಿಗೆ ಇಷ್ಟವಾಗುವಂತಹ ವಿನೂತನ ಬ್ರಾಂಡ್ ವಾಹನಗಳನ್ನು ಪರಿಚಯಿಸುವುದನ್ನು ಮುಂದುವರೆಸಲಿದೆ" ಎಂದು ಮರ್ಸಿಡಿಸ್ ಬೆಂಝ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಹೇಳಿದ್ದಾರೆ.

ದೇಶದ ಮೊದಲ ಲಕ್ಷುರಿ ವಾಹನ ತಯಾರಿಕಾ ಕಂಪನಿಯಾಗಿ ಭಾರತದಲ್ಲಿ ಬೆಂಝ್ 1995ರಲ್ಲಿ ವಹಿವಾಟು ಆರಂಭಿಸಿತ್ತು. ಕಂಪನಿಯು ಕಳೆದ ವರ್ಷ 24 ಹೊಸ ಕಾರ್ ಗಳನ್ನು ಪರಿಚಯಿಸಿತ್ತು. 2010ರ ಜನವರಿ-ಡಿಸೆಂಬರ್ ಆರ್ಥಿಕ ವರ್ಷದಲ್ಲಿ ಕಂಪನಿಯ ಮಾರಾಟ ಶೇಕಡಾ 80ರಷ್ಟು ಏರಿಕೆ ಕಂಡಿದೆ.

Article Published On: Thursday, February 3, 2011, 16:11 [IST]
English summary
English Summary: Luxury vehicle manufacturer Mercedes-Benz India celebrated the 125th birthday of the first automobile. Benz recently celebrated its 125 year existence in the automobile industry worldwide.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+