ಬಿಡದಿಯಲ್ಲಿ ಕಿರ್ಲೊಸ್ಕರ್ ಹೊಸ ಘಟಕ, 500 ಕೋಟಿ ಹೂಡಿಕೆ

ಟಿಕೆಎಪಿ ನೂತನ ಎಂಜಿನ್ ಘಟಕ ನಿರ್ಮಿಸಿದರೆ ಕಂಪನಿಯು 2012ರ ಮೂರನೇ ತ್ರೈಮಾಸಿಕದಿಂದ ವರ್ಷಕ್ಕೆ ಸುಮಾರು 1 ಲಕ್ಷ ಎಂಜಿನ್ ತಯಾರಿಸುವಂತಾಗಲಿದೆ. ಇದರೊಂದಿಗೆ ಕಂಪನಿಯು 2013ರ ಆರಂಭಕ್ಕೆ ಸುಮಾರು2.4 ಲಕ್ಷ ಟ್ರಾನ್ಸ್ ಮಿಷನ್ ತಯಾರಿಸುವ ಗುರಿಯನ್ನೂ ಹೊಂದಿದೆ. ಇದರಿಂದಾಗಿ ಟೊಯೊಟಾ ಎಟಿಯೋಸ್ ಗೆ ದೇಶದಲ್ಲಿಯೇ ಸಮರ್ಥವಾಗಿ ಬಿಡಿಭಾಗಗಳನ್ನು ಪೂರೈಸಲು ನೆರವಾಗಲಿದೆ. ಈ ಯೋಜನೆಗೆ ಕರ್ನಾಟಕ ಸರಕಾರದ ಉನ್ನತ ಮಟ್ಟದ ಸಮಿತಿಯಿಂದ ಕಳೆದ ತಿಂಗಳು ಅನುಮೋದನೆಯನ್ನೂ ಪಡೆಯಲಾಗಿದೆ.
"ನೂತನ ಯೋಜನೆಯಿಂದ ಟಿಕೆಎಪಿಯಲ್ಲಿ 500ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಪೂರೈಕೆ ದಾರರು ಸೇರಿದಂತೆ ಹಲವು ಪರೋಕ್ಷ ಉದ್ಯೋಗಗಳು ಇದರಿಂದ ಉಂಟಾಗಲಿದೆ" ಎಂದು ಟಿಕೆಎಪಿ ವ್ಯವಸ್ಥಾಪಕ ನಿರ್ದೇಶಕ ಹಿಶಾಸಿ ಸುಜುಕಿ ಅಭಿಪ್ರಾಯಪಟ್ಟಿದ್ದಾರೆ. ಟಿಕೆಎಪಿ ಮೂಲಕ ಕಂಪನಿಯು ಹೆಚ್ಚು ಸ್ಥಳೀಕರಣಕ್ಕೆ ಕಂಪನಿಯು ಒತ್ತು ನೀಡುತ್ತಿದೆ. ಇದರಿಂದಾಗಿ ಭಾರತ, ಥೈಲಾಂಡ್ ಮತ್ತು ಅರ್ಜೆಂಟೀನಾ ಗ್ರಾಹಕರಿಗೆ ಅತ್ಯುತ್ತಮವಾಗಿ ಸೇವೆ ನೀಡಲು ಸಾಧ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.
ಕಂಪನಿಯು ಇನ್ನೋವಕ್ಕೆ "ಆಕ್ಸೆಲ್" ನ್ನು ಭಾರತದಲ್ಲಿಯೇ ಉತ್ಪಾದಿಸುತ್ತದೆ. ಬಿಡದಿ ಘಟಕದಲ್ಲಿ ಟಿಕೆಎಪಿ ಕಂಪನಿಯು ವರ್ಷಕ್ಕೆ ಸುಮಾರು 50 ಸಾವಿರದಷ್ಟು ಆಕ್ಸೆಲ್(ಕಾರಿನ ಹಿಂದಿನ ಮತ್ತು ಮುಂದಿನ)ಗಳನ್ನು ತಯಾರಿಸುತ್ತಿದೆ. ಜೊತೆಗೆ 1.7 ಲಕ್ಷದಷ್ಟು ಮ್ಯಾನುಯಲ್ ಟ್ರಾನ್ಸ್ ಮಿಷನ್ ಗಳನ್ನು ಉತ್ಪಾದಿಸುತ್ತದೆ.


Click it and Unblock the Notifications







