ಫೋಕ್ಸ್ ವ್ಯಾಗನ್ ತೆಕ್ಕೆಗೆ ಬಿದ್ದ ಪೋರ್ಷ್

ಫೋರ್ಷ್ ಮತ್ತು ಫೋಕ್ಸ್ ವ್ಯಾಗನ್ ಮೈತ್ರಿ ಇಂದು ನಿನ್ನೆಯದ್ದಲ್ಲ. ಅವು ಬಹಳಷ್ಟು ದಶಕಗಳ ಹಿಂದೆಯೇ ಜೊತೆಯಾಗಿದ್ದವು. ತನ್ನ ಮೊದಲ ಪೋರ್ಷ್ ಕಾರಿಗೆ ಐಕಾನಿಕ್ ಫೋಕ್ಸ್ ವ್ಯಾಗನ್ ಕಾರಾದ ಬೀಟಲ್ ನ ಬಿಡಿಭಾಗಗಳನ್ನೇ ಬಳಕೆ ಮಾಡಿಕೊಂಡಿತ್ತು. 2009ರಲ್ಲಿ ಒಂದಿಷ್ಟು ತೊಂದರೆ ಅನುಭವಿಸಿದ ನಂತರ ಫೋಕ್ಸ್ ವ್ಯಾಗನ್ ಹಿಡಿತಕ್ಕೆ ಪೋರ್ಷ್ ಸಿಲುಕಿಕೊಂಡಿತ್ತು. ಸಾಕಷ್ಟು ಸಾಲ ಮತ್ತು ಒಟ್ಟಾರೆ ಕಾರ್ ಮಾರಾಟದಲ್ಲಿ ಪೋರ್ಷ್ ಸಾಕಷ್ಟು ಹಿನ್ನಡೆ ಅನುಭವಿಸಿತ್ತು.
ಈಗ ಫೋಕ್ಸ್ ವ್ಯಾಗನ್ ಕಂಪನಿಯು ಪೋರ್ಷ್ ನ ಮೆಜಾರಿಟಿ ಷೇರನ್ನು ತನ್ನದಾಗಿಸಿಕೊಂಡಿದೆ. ಪೂರ್ಣ ಪ್ರಮಾಣದ ಸ್ವಾಧೀನ ಪ್ರಕ್ರಿಯೆ 2012ರಲ್ಲಿ ಕೊನೆಗೊಳ್ಳುವ ನಿರೀಕ್ಷೆಯಿದೆ. ಪೋರ್ಷ್ ಸ್ಪೋರ್ಟ್ಸ್ ವರ್ಷನ್ ಮಾರಾಟ ಮತ್ತು ವಿತರಣೆ ಪ್ರಕ್ರಿಯೆಯಲ್ಲಿ ಪಿಎಚ್ಎಸ್ ಪ್ರಮುಖ ಪಾತ್ರ ವಹಿಸುತ್ತದೆ. ಪಿಎಚ್ಎಸ್ ಎಂಬುದು ವಿಶ್ವದ ಹೆಚ್ಚು ದಕ್ಷತೆಯ ಮತ್ತು ಲಾಭಕರ ಆಟೋಮೊಬೈಲ್ ಟ್ರೆಡಿಂಗ್ ಕಂಪನಿಯಾಗಿದೆ ಎಂದು ಫೋಕ್ಸ್ ವ್ಯಾಗನ್ ಚೇರ್ಮನ್ ಅಭಿಪ್ರಾಯಪಟ್ಟಿದ್ದಾರೆ.
ಕಂಪನಿಯನ್ನು ಸ್ವಾಧೀನ ಪಡಿಸಿಕೊಂಡರೂ ಪಿಎಚ್ ಎಸ್ ತನ್ನ ಐಡೆಂಟೆಟಿ ಉಳಿಸಿಕೊಳ್ಳಲಿದೆ ಎಂದು ಫೋಕ್ಸ್ ವ್ಯಾಗನ್ ಮಾರಾಟ ವಿಭಾಗದ ನಿರ್ದೇಶಕರು ಹೇಳಿದ್ದಾರೆ. ಪಿಎಚ್ ಎಸ್ ತನ್ನದೇ ಕಾರ್ಯತಂತ್ರ ಮತ್ತು ಐಡೆಂಟೆಟಿಯೊಂದಿಗೆ ಈ ಹಿಂದಿನಂತೆ ವಹಿವಾಟು ಮುಂದುವರೆಸಲಿದೆ. ಈಗ ಫೋಕ್ಸ್ ವ್ಯಾಗನ್ ಪೋರ್ಷ್ ನ ಶೇ. 49.9ರಷ್ಟು ಪಾಲು ಹೊಂದಿದ್ದು, ಉಳಿದ ಪಾಲನ್ನು ಕಂಪನಿಯು ಶೀಘ್ರದಲ್ಲಿ ಕಬಲಿಸುವ ನಿರೀಕ್ಷೆಯಿದೆ.


Click it and Unblock the Notifications







