ಟಾಟಾ ಘಟಕದಲ್ಲಿ ಸರತಿ ಸಾಲಿನಲ್ಲಿ ಫ್ರೀಲಾಂಡರ್ ಕಾರ್

ಪ್ರಸಕ್ತ ವರ್ಷದಿಂದಲೇ ಇಂಗ್ಲೆಂಡ್ ನ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ನಿಂದ ಸಿಕೆಡಿ ಮೂಲಕ ಆಮದು ಮಾಡಿಕೊಂಡು ಫ್ರೀಲಾಂಡರ್ ಕಾರ್ ಗಳನ್ನು ಭಾರತದ ಘಟಕದಲ್ಲಿ ಒಟ್ಟುಗೂಡಿಸಲಿದೆ. ಭಾರತದ ಮಾರುಕಟ್ಟೆಯಲ್ಲಿ ಜಾಗ್ವಾರ್ ಆಂಡ್ ಲ್ಯಾಂಡ್ ರೋವರ್ ಕಾರ್ ಗಳಿಗೆ ಅತ್ಯುತ್ತಮ ಬೇಡಿಕೆ ಕಂಡು ಬಂದ ಹಿನ್ನಲೆಯಲ್ಲಿ ಕಂಪನಿಯು ಈ ನಿರ್ಧಾರಕ್ಕೆ ಬಂದಿದೆ. ಆದರೆ ನೂತನ ಫ್ರೀಲಾಂಡರ್ ಕಾರ್ ಗಳಿಂದ ಈ ಘಟಕ ದೂರವುಳಿಯಲಿದೆ ಎಂದು ಕಂಪನಿ ತಿಳಿಸಿದೆ.
ಭಾರತದಲ್ಲಿ ಟಾಟಾ ಮೋಟರ್ಸ್ ಸುಮಾರು 200 ಲ್ಯಾಂಡ್ ರೋವರ್ ಕಾರ್ ಗಳನ್ನು ಮಾರಾಟ ಮಾಡಿದೆ. ಹೀಗಾಗಿ ಕಂಪನಿಯು ಮಾರುಕಟ್ಟೆ ಪಾಲನ್ನು ಒಟ್ಟುಗೂಡಿಸಲು ಮತ್ತು ಲಾಭ ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಕಂಪನಿಯು ಫ್ರೀಲಾಂಡರ್ 2 ಕಾರ್ ಕೂಡ ಹೊರತರಲು ನಿರ್ಧರಿಸಿದೆ ಎಂದು ಜಾಗ್ವಾರ್ ಆಂಡ್ ಲ್ಯಾಂಡ್ ರೋವರ್ ನ ಜಾಗತಿಕ ವಹಿವಾಟು ನಿರ್ದೇಶಕರು ಹೇಳಿದ್ದಾರೆ. ಚೀನಾದ ನಂತರ ಕಂಪನಿಗೆ ಭಾರತ ಪ್ರಮುಖ ಮಾರುಕಟ್ಟೆಯೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.


Click it and Unblock the Notifications








