ಪೊರ್ಷ್ ಹೊರತಂದಿದೆ ಐದು ಐಷಾರಾಮಿ ಕಾರ್

Porsche India
ಜರ್ಮನಿಯ ಲಕ್ಷುರಿ ಕಾರ್ ತಯಾರಿಕಾ ಕಂಪನಿ ಪೊರ್ಷ್, ಸೂಪರ್ ಲಕ್ಷುರಿ ಕಾರ್ ಕಂ ಸ್ಪೋರ್ಟ್ಸ್ ಕಾರ್ ಮಾಡೆಲ್ ಗಳನ್ನು ಚೆನ್ನೈನಲ್ಲಿ ಹೊರತಂದಿದೆ. ಇಲ್ಲಿ ಬಾಕ್ಸಾಟರ್ ಎಸ್, ಕೆಮಾನ್ ಎಸ್, ಪೋರ್ಷ್ 011, ಪನಾಮೆರಾ ಮತ್ತು ಸಿಯೆನಾ ಎಂಬ 5 ಮಾದರಿಗಳು ಗ್ರಾಹಕರಿಗೆ ದೊರಕಲಿದೆ. ಆದರೆ ಯಾರಾದರೂ ಕಾರ್ ಪಡೆಯಲು ಉದ್ದೇಶಿಸಿದರೆ ಸುಮಾರು 500 ದಿನ ಕಾಯುವುದು ಮಾತ್ರ ಅನಿವಾರ್ಯವಾಗಿದೆ.

ದೇಶದ ವಾಹನ ಮಾರುಕಟ್ಟೆಗೆ ಪೋರ್ಷ್ ಪ್ರವೇಶಿಸಿದ್ದು 2003ರಲ್ಲಿ. ಆ ಸಮಯದಲ್ಲಿ ಮೊದಲ ಶೋರೂಂನ್ನು ನವದೆಹಲಿಯಲ್ಲಿ ಆರಂಭಿಸಿತ್ತು. ನಂತರ ಕಂಪನಿಯು ತನ್ನ ಮಾರುಕಟ್ಟೆಯನ್ನು ವಿಸ್ತರಿಸಿದ್ದು, ಈಗ ಚೆನ್ನೈ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಪ್ರಸಕ್ತ ವರ್ಷ ದೇಶದಲ್ಲಿ ಸುಮಾರು 500 ಕಾರ್ ಮಾರಾಟದ ಗುರಿಯನ್ನು ಕಂಪನಿ ಹೊಂದಿದೆ. ಮುಂದಿನ ಕೆಲವು ತಿಂಗಳಲ್ಲಿ ದೇಶದ ವಾಹನ ಮಾರುಕಟ್ಟೆಗೆ ಹೈಬ್ರಿಡ್ ಸೂಪರ್ ಕಾರ್ ಪರಿಚಯಿಸುವ ಯೋಜನೆಯನ್ನೂ ಹೊಂದಿದೆ.

ಭಾರತದಲ್ಲಿ ಕಂಪನಿಯು ಕಳೆದ ವರ್ಷ ಕೇವಲ 130 ಕಾರ್ ಮಾರಾಟ ಮಾಡಿದೆ. ಆದರೆ ಕಳೆದ ತಿಂಗಳು ಪೆಬ್ರವರಿ ಅಂತ್ಯದ ವೇಳೆಗೆ ಇದರ ಸಂಖ್ಯೆ 217ಕ್ಕೆ ಮುಟ್ಟಿದೆ ಎಂದು ಕಂಪನಿಯ ಮಾರಾಟ ವಿಭಾಗದ ನಿರ್ದೇಶಕರು ಹೇಳಿದ್ದಾರೆ. ಸದ್ಯ ಕಂಪನಿ ಚೆನ್ನೈನಲ್ಲಿ ಹೊರತಂದಿರುವ ಮಾರಾಟ ಕೇಂದ್ರವು ಭಾರತದಲ್ಲಿ ಕಂಪನಿಯ ನಾಲ್ಕನೇಯದ್ದಾಗಿದೆ. ಈ ಮಾರಾಟ ಕೇಂದ್ರವು ದಕ್ಷಿಣ ಭಾಗದಲ್ಲಿರುವ ಎರಡನೇ ಬೃಹತ್ ಕೇಂದ್ರವೂ ಹೌದು. ಅಂದಹಾಗೇ ಕಂಪನಿ ಪರಿಚಯಿಸಿರುವ ಕಾರ್ ದರಗಳು ಸುಮಾರು 59 ಲಕ್ಷ ರೂ.ನಿಂದ 2.50 ಕೋಟಿ ರೂ.ವರೆಗಿದೆ.

More from DriveSpark

Article Published On: Friday, March 4, 2011, 11:36 [IST]
English summary
German luxury car-maker Porsche Unveiled its five models — Boxster S, Cayman S, 911, Panamera and Cayenne in Chennai. All the models have multi-variants and the company has 37 variants. The car that was introduced in the Chennai market was priced between Rs.59 lakh and Rs.2.50 crore.
Read more on ಕಾರು car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+