ಲಂಬೊರ್ಗಿನಿಯ ಹೊಸ ಸೂಪರ್ ಕಾರ್ ನೋಡಬನ್ನಿ

aventador
ಕಾರ್ ಅಂದ್ರೆ ಹೀಗಿರಬೇಕು ಅಂತ ಎಲ್ಲರೂ ಶಹಬ್ಬಾಸ್ ಅನ್ನುವಷ್ಟು ಸೂಪರ್ ಆಗಿದೆ ಲಂಬೊರ್ಗಿನಿಯ ನೂತನ ಅವೆಂಟಡೊರ್ ಎಲ್ ಪಿ 700-4 ಸೂಪರ್ ಕಾರ್. ಹಳೆಯ ಮುರ್ಸಿಲೊಗೊ ಸ್ಥಾನಕ್ಕೆ ಅವೆಂಟಡೊರ್ ಬರಲಿದ್ದು ಕಂಪನಿಯು ನೂತನ ಕಾರನ್ನು ಜಿನಿವಾ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಿದೆ. ಇದು ಈ ವರ್ಷ ಹೆಚ್ಚು ಜನರು ನಿರೀಕ್ಷೆ ಮಾಡುತ್ತಿದ್ದ ಕಾರ್. ಇದು ನಿಜಕ್ಕೂ ಹೆಚ್ಚು ಜನರು ಇಷ್ಟಪಡುವಂತಹ ದೊಡ್ಡದಾದ ಕೆಟ್ಟ ಗೂಳಿ. ನೂತನ ಎಂಜಿನ್ ಮತ್ತು ಚಾಸೀಸ್ ನೊಂದಿಗೆ ಬಂದಿರುವ ಅವೆಂಟರ್ ಅಂದದ ಕಾರಾಗಿದೆ.

ನೂತನ ಕಾರ್ ನೋಡಲು ಮುರ್ಸಿಲಾಗೊ ಕಾರಿನ ಕಲರ್ ಫುಲ್ ಆವೃತ್ತಿಯಂತೆ ಕಾಣುತ್ತಿದೆ. ಆದರೆ ನಿಜವಾಗಿ ಹೇಳಬೇಕೆಂದರೆ ಇದು ಮುರ್ಸಿಲಾಗೊಗಿಂತ ಭಿನ್ನ ಕಾರ್. ಕೆಲವು ಬೋಲ್ಟ್, ನಟ್ ಹೊರತು ಪಡಿಸಿ ಲಂಬೊರ್ಗಿನಿಯ ಬೇರೆ ಯಾವ ಬಿಡಿಭಾಗ ಮತ್ತು ವಿನ್ಯಾಸವನ್ನು ಇದರಲ್ಲಿ ಬಳಸಿಕೊಳ್ಳಲಾಗಿಲ್ಲ. ಹೈಟೆಕ್ ಚಾಸೀಸ್ ಇದರ ವಿಶೇಷತೆ.

ಲಂಬೊರ್ಗಿನಿ ಫ್ಯಾಕ್ಟರಿಯಿಂದ ಹೊರಬಂದ ಅವೆಂಟಡೊರ್ 2011ರ ವರ್ಷದ ಹೊಸ, ವಿನೂತನ, ಆಕರ್ಷಕ ಕಾರೆಂಬುದರಲ್ಲಿ ಎರಡು ಮಾತಿಲ್ಲ. ಚಾಸೀಸ್ ವಿನ್ಯಾಸ, ಕಾರಿನ ಹಿಂದಿನ ಮತ್ತು ಮುಂಭಾಗದ ಅಲ್ಯುಮಿನಿಯಂ ಫ್ರೇಮ್ ಎಲ್ಲವೂ ಆಕರ್ಷಕವಾಗಿದೆ. ಈ ದೊಡ್ಡ ಗೂಳಿಯ ತೂಕ ಸುಮಾರು 1,575 ಕೆ.ಜಿ. ಅಷ್ಟೇ. ಅಂದ್ರೆ ಮುರ್ಸಿಲಾಗೊ ಎಲ್ ಪಿ 640-4ಕ್ಕಿಂತ 90 ಕೆ.ಜಿ ಕಡಿಮೆ ಭಾರವಿದೆ. ನೂತನ ಅವೆಂಟಡೊರ್ ಎಲ್ ಪಿ 700-4 ಕಾರಿನ ದರವನ್ನೂ ಕಂಪನಿ ಇನ್ನೂ ಸ್ಪಷ್ಟಪಡಿಸಿಲ್ಲ.

ಲಂಬೊರ್ಗಿನಿ ಮುರ್ಸಿಲಾಗೊ: ಲಂಬೊರ್ಗಿನಿ ಕಂಪನಿಯ ಹಳೆಯ ಗೂಳಿಯ ಹೆಸರು ಮುರ್ಸಿಲಾಗೊ. ಇದು 6.5 ಲೀಟರ್, 12 ಸಿಲಿಂಡರ್ ಎಂಜಿನ್ ಹೊಂದಿದೆ. ಇದು 8 ಸಾವಿರ ಆರ್ ಪಿಎಂಗೆ 631 ಹಾರ್ಸ್ ಪವರ್ ನೀಡುತ್ತದೆ. ಲಂಬೊರ್ಗಿನಿ ಗೂಳಿ ಕಾರ್ ಪ್ರತಿಗಂಟೆಗೆ 340 ಗರಿಷ್ಠ ವೇಗ ಹೊಂದಿದೆ. ಭಾರತದಲ್ಲಿ ಇದರ ದರ ಸುಮಾರು 3 ಕೋಟಿ ರೂ. ಆಗಿದೆ.

More from DriveSpark

Article Published On: Saturday, March 5, 2011, 13:18 [IST]
English summary
Lamborghini launched Aventador LP700-4 at the 2011 Geneva Motor Show. This is super car to replace the Murcielago.
Read more on ಕಾರು car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+