ಹೆಸರಿನಲ್ಲೇನಿದೆ? ಫೆರಾರಿ ಮತ್ತು ಫೋರ್ಡ್ ಕಾಳಗ ಅಂತ್ಯ

ಅಂತಿಮವಾಗಿ ಫೆರಾರಿ ಕಂಪನಿಯು ಹಳೆಯ ಹೆಸರನ್ನು ಎಫ್ 150ನೇ ಇಟಲಿಯ(F150th Italia) ಅಂತ ಬದಲಾಯಿಸಿದೆ. "ಪಿಕ್ ಅಪ್ ಟ್ರಕ್ ನೊಂದಿಗೆ ಫಾರ್ಮುಲಾ ಒನ್ ಕಾರೊಂದು ಸಮಸ್ಯೆಯಲ್ಲಿ ಸಿಲುಕಬಾರದೆಂಬ ಉದ್ದೇಶದಿಂದ ಹಳೆಯ ಹೆಸರನ್ನು ಬದಲಾಯಿಸಲಾಗಿದೆ" ಎಂದು ಇಟಲಿ ಫೆರಾರಿ ತಂಡ ತಿಳಿಸಿದೆ. ಫಾರ್ಮುಲಾ ಒನ್ ಸೀಸನ್ ಆಸ್ಟ್ರೇಲಿಯಾದಲ್ಲಿ ಮಾರ್ಚ್ 27ರಿಂದ ಆರಂಭವಾಗಲಿದೆ.
"ಹಳೆಯ ಹೆಸರನ್ನು ಬದಲಾಯಿಸಲು ಒಂದಿಷ್ಟು ತೊಡಕಗಾಗಿರುವುದು ನಿಜ. ಇಲ್ಲಿ ಎಫ್ ತೆಗೆದರೆ ಸಾಕಾಗುವುದಿಲ್ಲ. ಯಾಕೆಂದರೆ ಅದು ಪೂರ್ತಿ ಇಟಲಿ ಹೆಸರಾಗುವುದಿಲ್ಲ. ಅದಕ್ಕಾಗಿ ಇಟಲಿಯ ಸಂಕೇತವಾದ "th" ಕೂಡ ಬಳಕೆ ಮಾಡಲಾಗಿದೆ' ಎಂದಿದ್ದಾರೆ. ಕಳೆದ ವರ್ಷ ನಡೆದ ಸ್ಪರ್ಧೆಯಲ್ಲಿ ಫೆರಾರಿ ಡ್ರೈವರ್ ಗಳಾದ ಬ್ರೆಜಿಲ್ ನ ಪಿಲಿಪ್ ಮಾಸ್ಸಾ ಮತ್ತು ಸ್ಪೈನ್ ನ ಅಲೊನೊಸೊ ಎರಡನೇ ಸ್ಥಾನ ಪಡೆದಿದ್ದರು.


Click it and Unblock the Notifications







