ಹ್ಯುಂಡೈನಿಂದ ಉಚಿತವಾಗಿ ಕಾರ್ ಕೇರ್ ಕ್ಲಿನಿಕ್ ಸೇವೆ

Hyundai Free Car Care Clinic
ಹ್ಯುಂಡೈ ಗ್ರಾಹಕರು ಒಂದೇ ಕಲ್ಲಿಗೆ ಹಲವು ಹಣ್ಣು ಉದುರಿಸಬಹುದು. ಉಚಿತವಾಗಿ ಕಾರ್ ಕೇರ್, ವಾರೆಂಟಿ ಹೆಚ್ಚಳ ಸೇರಿದಂತೆ ಹಲವು ಲಾಭಗಳನ್ನು ಪಡೆಯಬಹುದಾಗಿದೆ. ದೇಶದ್ಯಾಂತ ಸುಮಾರು 500 ಹ್ಯುಂಡೈ ವರ್ಕ್ ಶಾಪ್ ಗಳಲ್ಲಿ 10 ದಿನಗಳ ಕಾಲ ಫ್ರೀ ಕಾರ್ ಕೇರ್ ಕ್ಲಿನಿಕ್ ಸೇವೆಯನ್ನು ಹ್ಯುಂಡೈ ಮೋಟರ್ಸ್ ಆರಂಭಿಸಿದೆ. ಇದು ಮಾರ್ಚ್ 14ರವರೆಗೆ ನಡೆಯಲಿದೆ.

ಎಂಜಿನ್, ಟ್ರಾನ್ಸ್ ಮಿಷನ್, ಎಲೆಕ್ಟ್ರಿಕಲ್ ಸಿಸ್ಟಮ್ ,ಬಾಡಿ, ಎಸಿ, ಎಕ್ಸ್ ಟಿರಿಯರ್ ಇತ್ಯಾದಿ ಪ್ರಮುಖ 80 ಪಾಯಿಂಟ್ ಗಳನ್ನು ಉಚಿತವಾಗಿ ಕಾರ್ ಕೇರ್ ಕ್ಲಿನಿಕ್ ನಲ್ಲಿ ಪರಿಶೀಲಿಸಲಾಗುತ್ತದೆ. ಇದರೊಂದಿಗೆ ಹ್ಯುಂಡೈ ಗ್ರಾಹಕರು ಕಾರಿನ ಬಿಡಿಭಾಗಗಳು, ಕೆಲವು ಆಕ್ಸೆಸರಿಗಳಿಗೆ ಶೇ. 10ರಷ್ಟು ವಿನಾಯಿತಿ ಪಡೆಯಲಿದ್ದಾರೆ. ಇಷ್ಟೇ ಅಲ್ಲ ವ್ಯಾರೆಂಟಿ ಹೆಚ್ಚಳ ಸೇರಿದಂತೆ ಹಲವು ಮೌಲ್ಯ ವರ್ಧಿತ ಸೇವೆಗಳನ್ನೂ ಪಡೆಯಲಿದ್ದಾರೆ. ಕಂಪನಿಯು ತನ್ನ ಬೃಹತ್ ಸಂಖ್ಯೆಯ ಗ್ರಾಹಕರ ಕಾರುಗಳನ್ನು ಉಚಿತವಾಗಿ ಚೆಕ್ ಅಪ್ ಮಾಡೋ ಹತ್ತನೆಯ ಕಾರ್ಯಕ್ರಮ ಇದಾಗಿದೆ.

ಇಷ್ಟೇ ಅಲ್ಲದೇ ಕಂಪನಿಯು ಲೇಬರ್ ಚಾರ್ಜಿನಲ್ಲಿ ಸುಮಾರು ಶೇ. 20ರಷ್ಟು ವಿನಾಯಿತಿಯನ್ನು ಗ್ರಾಹಕರಿಗೆ ನೀಡಲಿದೆ. ಈ ಇವೆಂಟ್ ನಲ್ಲಿ ಸ್ಪಾನ್ಸರ್ ಆಗಿರುವ ಶೆಲ್, ಸ್ಕಾರ್ಚ್ ಕಾರ್ಡ್ ನೀಡಲಿದೆ. ಇದರಿಂದ ಗ್ರಾಹಕರು ಶೇ. 20ರಷ್ಟು ವಿನಾಯಿತಿಯಲ್ಲಿ ಆಯಿಲ್ ಇತ್ಯಾದಿಗಳನ್ನು ಖರೀದಿಸಬಹುದು. ಈ ಕಾರ್ಡ್ ಹೊಂದಿರುವ ಗ್ರಾಹಕರಲ್ಲಿ ಅದೃಷ್ಟಶಾಲಿಗಳಿಗೆ ಹಾಂಕಾಂಗ್ ಉಚಿತ ಹಾಲಿಡೇ ಟ್ರಿಪ್ ಯೋಗವೂ ಇದೆಯಂತೆ. ಈ ಕ್ಯಾಂಪ್ ನಲ್ಲಿ ಭಾಗವಹಿಸುವ ಮೂಲಕ ಪ್ರತಿದಿನ ಆಕರ್ಷಕ ಗಿಫ್ಟ್ ಮತ್ತು ಬಹುಮಾನವನ್ನೂ ಪಡೆಯಬಹುದೆಂದು ಕಂಪನಿ ತಿಳಿಸಿದೆ.

More from DriveSpark

Article Published On: Saturday, March 5, 2011, 16:58 [IST]
English summary
Hyundai Motor India (HMIL) in order to extend the advantage of its excellent services and free check-up to a larger number of customers. HMIL today announced its 10th nationwide Free Car Care Clinic.
Read more on ಕಾರು car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+