ಹಲೋ ಲಿವಾ, ಜೂನ್ ಗೆ ಬಾ! ಎಟಿಯೋಸ್ ಹವಾ ಮುಗಿದಿಲ್ಲ

2010ರ ಡಿಸೆಂಬರ್ ನಲ್ಲಿ ಕಂಪನಿ ಹೊರತಂದ ಎಟಿಯೋಸ್ ಸೆಡಾನ್ ಗೆ ಬೇಡಿಕೆ ಅತ್ಯುತ್ತಮವಾಗಿದೆ. ಆದರೆ ಸೆಡಾನ್ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಲಿವಾವನ್ನು ಒಂದಿಷ್ಟು ತಡವಾಗಿ ಹೊರತರಲಿದೆ. ಬೆಂಗಳೂರಿನ ಘಟಕದಲ್ಲಿ ಏಪ್ರಿಲ್ ನಿಂದ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಗ್ರಾಹಕರಿಗೆ ವೈಟಿಂಗ್ ಪಿರೇಡ್ ಕಡಿಮೆ ಮಾಡಲು ಕಂಪನಿ ಬಯಸಿದೆ. ಈಗಾಗಲೇ ಸುಮಾರು 26,500 ಎಟಿಯೋಸ್ ಕಾರಿಗೆ ಗ್ರಾಹಕರು ಆರ್ಡರ್ ಮಾಡಿದ್ದು ಕಂಪನಿ ಕೇವಲ 5 ಸಾವಿರ ಕಾರ್ ಪೂರೈಕೆ ಮಾಡಿದೆ.
ಇದಕ್ಕಾಗಿ ತನ್ನ ಬೆಂಗಳೂರಿನ ಘಟಕದಲ್ಲಿ ಕಿರ್ಲೊಸ್ಕರ್ ನೊಂದಿಗಿನ ಜಂಟಿ ಉದ್ಯಮದ ನೆರವಿನಿಂದ ಎಟಿಯೋಸ್ ಸೆಡಾನ್ ಕಾರ್ ಉತ್ಪಾದನೆಯನ್ನು ಎರಡು ಪಟ್ಟು ಹೆಚ್ಚಿಸಲು ಉದ್ದೇಶಿಸಿದೆ. ಅಂದರೆ ಮುಂದಿನ ತಿಂಗಳಿನಿಂದ ಪ್ರತಿತಿಂಗಳು ಸುಮಾರು 5 ಸಾವಿರ ಯೂನಿಟ್ ಗಳಷ್ಟು ಉತ್ಪಾದಿಸಲು ಯೋಜಿಸಿದೆ. ಕಂಪನಿಯು ತನ್ನ ಬೆಂಗಳೂರಿನ ಎರಡನೇ ಘಟಕದಲ್ಲಿ ವಾರ್ಷಿಕ 70 ಸಾವಿರ ಯೂನಿಟ್ ಎಟಿಯೋಸ್ 1.5 ಲೀಟರ್ ಪೆಟ್ರೋಲ್ ಆವೃತ್ತಿ ಉತ್ಪಾದನೆಗಾಗಿ ಸುಮಾರು 3,200 ಕೋಟಿ ರೂ. ಹೂಡಿಕೆ ಮಾಡಲು ನಿರ್ಧರಿಸಿದೆ. ಕಂಪನಿಯ ಮೊದಲನೆಯ ಘಟಕವು ವಾರ್ಷಿಕ 80 ಸಾವಿರ ಯೂನಿಟ್ ಉತ್ಪಾದನೆ ಸಾಮರ್ಥ್ಯ ಹೊಂದಿದೆ.
ಲಿವಾ 1.2 ಲೀಟರ್ ಪೆಟ್ರೋಲ್ ಕಾರನ್ನು ಜೂನಿನಲ್ಲಿ ದೇಶದ ರಸ್ತೆಗಿಳಿಯಲಿದೆ. ಕಂಪನಿಯು ಸೆಡಾನ್ ಕಾರ್ ಎಟಿಯೋಸ್ ಗೆ ಸುಮಾರು 4.96 ಲಕ್ಷ ರೂ.ನಿಂದ 6.86 ಲಕ್ಷ ರೂ.ನಲ್ಲಿ ನೀಡುತ್ತಿದೆ. ಕಮಾಡಿಟಿ ದರಗಳ ಏರಿಕೆಯಿಂದ ವಾಹನ ದರ ಕಡಿಮೆ ಮಾಡುವ ಅವಕಾಶವಿಲ್ಲವೆಂದು ಕಂಪನಿ ಹೇಳಿದೆ. ಭಾರತದ ಮಾರುಕಟ್ಟೆಯಲ್ಲಿ ಸುಮಾರು 70 ಸಾವಿರ ಯೂನಿಟ್ ಕಾರ್ ಮಾರಾಟದ ಗುರಿಯನ್ನು ಕಂಪನಿ ಹೊಂದಿರುವುದಾಗಿ ಅವರು ಹೇಳಿದ್ದಾರೆ. ಕಳೆದ ಜನವರಿಯಲ್ಲಿ ಕಂಪನಿ ಹೊರತಂದ ಫಾರ್ಚುನರ್ ಕಾರ್ ಗಳು ಸುಮಾರು 4 ಸಾವಿರ ಯೂನಿಟ್ ನಷ್ಟು ಬುಕ್ಕಿಂಗ್ ಆಗಿವೆ. ಇದಕ್ಕೆ ವೈಟಿಂಗ್ ಪಿರೇಡ್ ಸುಮಾರು 3ರಿಂದ 4 ತಿಂಗಳು ಎಂದು ಅವರು ತಿಳಿಸಿದ್ದಾರೆ.


Click it and Unblock the Notifications







