ಭಾರತ ವಿದೇಶಿ ಹೂಡಿಕೆ ವಿರೋಧಿ? ಆಡಿ ಸಿಡಿಮಿಡಿ

Audi AG
ಜಾಗತಿಕವಾಗಿ ಭಾರತಕ್ಕೆ ಹೂಡಿಕೆ ಸ್ನೇಹಿ ರಾಷ್ಟ್ರವೆನ್ನುವ ಇಮೇಜಿದೆ. ಆದರೆ ಕೆಲವು ದಿನದ ಹಿಂದೆ ಕೇಂದ್ರ ಸರಕಾರದ ಬಜೆಟ್ ಇಂತಹ ಇಮೇಜನ್ನು ಅಳಿಸಿಹಾಕುವುದೇ? ಯಾಕೆಂದರೆ ಬಜೆಟ್ ನಲ್ಲಿ ಸಿಕೆಡಿ ಘಟಕಗಳಿಗೆ ಅಬಕಾರಿ ಸುಂಕ ಜಾಸ್ತಿ ಮಾಡಿರುವುದಕ್ಕೆ ಲಕ್ಷುರಿ ಕಾರ್ ತಯಾರಿಕಾ ಕಂಪನಿ ಆಡಿ ಎಜಿ ಸಿಡಿಮಿಡಿಗೊಂಡಿದ್ದು ಇಂತಹ ಪ್ರಶ್ನೆಯೊಂದನ್ನು ಹುಟ್ಟು ಹಾಕಿದೆ. ಕಂಪ್ಲಿಟ್ಲಿ ನಾಕಾಡ್ ಡೌನ್ (ಸಿಕೆಡಿ) ಘಟಕ ಅಂದ್ರೆ ವಿದೇಶದಿಂದ ವಾಹನ ಬಿಡಿಭಾಗಗಳನ್ನು ತಂದು ಜೋಡಿಸುವ ವಾಹನ ಎಂದು ಅರ್ಥಮಾಡಿಕೊಳ್ಳಬಹುದು.

ಕೇಂದ್ರ ಬಜೆಟ್ ನಲ್ಲಿ ಹೇಳಲಾದ ಹೊಸ ನೀತಿಯ ಕುರಿತು ಸದ್ಯ ಆಡಿ ಸ್ಪಷ್ಟನೆ ಬಯಸಿದೆ. ಇಷ್ಟೊಂದು ಸುಂಕ ವಿಧಿಸಿದರೆ ಭಾರತದಲ್ಲಿ ಕಂಪನಿಯ ಕಾರ್ಯತಂತ್ರಗಳನ್ನು ಮುಂದಿನ ದಿನಗಳಲ್ಲಿ ಬದಲಾಯಿಸುವ ಅನಿವಾರ್ಯತೆ ಉಂಟಾಗಲಿದೆ ಎಂದು ಆಡಿ ಕಂಪನಿ ಹೇಳಿದೆ. ಆಡಿ ಇಂಡಿಯಾ ತನ್ನ ಎ4 ಮತ್ತು ಎ6 ಮತ್ತು ಸ್ಪೋರ್ಟ್ ಯುಟಿಲಿಟಿ ವಾಹನ ಕ್ಯೂ5 ಕಾರ್ ಗಳನ್ನು ಮಹಾರಾಷ್ಟ್ರದ ಫೋಕ್ಸ್ ವ್ಯಾಗನ್ ಘಟಕದಲ್ಲಿ ಜೋಡಿಸುತ್ತಿದೆ. ಇಂತಹ ಕಾರ್ ಗಳಿಗೆ ಶೇ. 10ರಷ್ಟು ಅಬಕಾರಿ ಸುಂಕ, ಇತರ ಲೆವಿ ಸುಂಕ ಶೇ. 30ರಷ್ಟು, ಒಟ್ಟಾರೆ ಶೇ. 40ರಷ್ಟು ಸುಂಕ ವಿಧಿಸಲಾಗಿದೆ.

"ಹೊಸ ಸಿಕೆಡಿ ನೀತಿ ಕುರಿತೂ ಇನ್ನೂ ಸ್ಪಷ್ಟವಾಗಿಲ್ಲ ಮತ್ತು ನಮಗೆ ಯಾವುದೇ ಸ್ಪಷ್ಟನೆ ದೊರಕಿಲ್ಲ. ಬಜೆಟ್ ನಲ್ಲಿ ಹೇಳಲಾದ ಸಿಕೆಡಿ ನೀತಿ ಬದಲಾಯಿಸಿದರೆ ಮಾತ್ರ ಇಲ್ಲಿ ವಹಿವಾಟು ನಡೆಸಬಹುದು. ಇಲ್ಲಿ ಬಿಡಿಭಾಗಗಳನ್ನು ತಯಾರಿಸಲು ಬೃಹತ್ ಹೂಡಿಕೆ ಮಾಡುವುದು ಕಷ್ಟ" ಎಂದು ಆಡಿ ಎಜಿ ಬೋರ್ಡ್ ಸದಸ್ಯ ಪೀಟರ್ ಸ್ಕಾವರ್ಜೆಬ್ಯೂವರ್ ಹೇಳಿದ್ದಾರೆ. ಸದ್ಯದ ನೀತಿ ಕುರಿತು ಆಡಿ ನಿಲುವೆನೂ ಎಂಬ ಪತ್ರಕರ್ತರ ಪ್ರಶ್ನೆಗೆ " ನಮ್ಮಲ್ಲಿ ಹಲವು ಆಯ್ಕೆಗಳಿವೆ ಆದರೆ ಇಲ್ಲಿನ ಸಮಸ್ಯೆಗೆ ಇನ್ನು ಯಾವುದೇ ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗಿಲ್ಲ" ಎಂದರು.

ಸ್ಥಳೀಯ ವಾಹನ ಕಂಪನಿಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ 2011-12ರ ಸಾಲಿನ ಬಜೆಟ್ ನಲ್ಲಿ ಸಿಕೆಡಿ ನೀತಿಯನ್ನು ಪರಿಷ್ಕರಿಸಲಾಗಿತ್ತು. "ದ್ವಿಚಕ್ರ ವಾಹನ ಸೇರಿದಂತೆ ಸಿಕೆಡಿ ವಾಹನಗಳಿಗೆ ಅಬಕಾರಿ ಸುಂಕ ಹೆಚ್ಚಿಸಲಾಗುವುದು. ಅಂದರೆ ಎಂಜಿನ್ ಅಥವಾ ಗೇರ್ ಬಾಕ್ಸ್, ಟ್ರಾನ್ಸ್ ಮಿಷನ್ ಮೆಕಾನಿಸಂ ಅಥವಾ ಚಾಸೀಸ್ ಯಾವುದೇ ಭಾಗವನ್ನು ಜೋಡಿಸಿದರೂ ಸುಂಕ ವಿಧಿಸುವುದಾಗಿ ಬಜೆಟ್ ನಲ್ಲಿ ಹೊಸ ಸಿಕೆಡಿ ನೀತಿ ಕುರಿತು ಹೇಳಲಾಗಿತ್ತು.

ಈಗ ಪೂರ್ಣಪ್ರಮಾಣದಲ್ಲಿ ನಿರ್ಮಿಸಿ ಆಮದು ಮಾಡುವ ವಾಹನಕ್ಕೆ ಶೇ. 60ರಷ್ಟು ಅಬಕಾರಿ ಸುಂಕ, ವ್ಯಾಟ್ ಸೇರಿದಂತೆ ಇತರ ಎಲ್ಲ ಸುಂಕಗಳೂ ಸೇರಿ ಪೂರ್ಣ ಪ್ರಮಾಣದ ವಾಹನ ಆಮದಿಗೆ ಶೇ. 110ರಷ್ಟು ವೆಚ್ಚವಾಗುತ್ತಿದೆ. ನೂತನ ನೀತಿಯಿಂದಾಗಿ ಇಲ್ಲಿ ವಿದೇಶಿ ಕಂಪನಿಗಳು ಹೂಡಿಕೆ ಮಾಡುವ ಕುರಿತು ಹಲವು ಬಾರಿ ಯೋಚಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

More from DriveSpark

Article Published On: Wednesday, March 9, 2011, 14:12 [IST]
English summary
The new definition of CKD units introduced in Indian Budget for 2011-12, German luxury carmaker Audi AG said it may have to review its business strategy in India in the coming years. These car company attract a custom duty of 10% besides other levies of about 30%, totaling to about 40% duty.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+