ಭಾರತಕ್ಕೆ ಬರೋದಿಲ್ಲವಂತೆ ಕಿಯಾ ಮೋಟರ್ಸ್

Kia Motors
ಕೊರಿಯಾದ ವಾಹನ ತಯಾರಿಕಾ ಕಂಪನಿ ಕಿಯಾ ಮೋಟರ್ಸ್ ಭಾರತದಲ್ಲಿ ವಹಿವಾಟು ನಡೆಸುವ ಯೋಜನೆಯಿಂದ ಹಿಂದೆ ಸರಿದಿದೆ. ಕಿಯಾ ಮೋಟರ್ಸ್ ಎಂಬುದು ಹ್ಯುಂಡೈನ ಅಂಗಸಂಸ್ಥೆಯಾಗಿದೆ. ಕಿಯಾ ಇತ್ತೀಚೆಗೆ ಭಾರತ ಪ್ರವೇಶಿಸುವ ಯೋಜನೆಯನ್ನು ಪ್ರಕಟಿಸಿತ್ತು. ಆದರೂ ಕಂಪನಿ ಚೀನಾ, ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ವಹಿವಾಟು ವಿಸ್ತರಿಸಿಕೊಳ್ಳಲಿದೆ.

ಅಮೆರಿಕದಲ್ಲಿ ಕಿಯಾ ಮೋಟರ್ಸ್ ಸ್ವಂತ ಘಟಕವೊಂದನ್ನು ಹೊಂದಿದೆ. ಕಂಪನಿಯು ಸದ್ಯ ಈ ಹಿಂದೆ ವಹಿವಾಟು ನಡೆಸುತ್ತಿದ್ದ ದೇಶಗಳಲ್ಲಿ ವಹಿವಾಟು ವಿಸ್ತರಿಸುವ ಯೋಜನೆ ಹೊಂದಿರುವುದಾಗಿ ಕಂಪನಿಯ ವಕ್ತಾರರು ಹೇಳಿದ್ದಾರೆ. ಜಾಗತಿಕವಾಗಿ ಸುಮಾರು 10 ಲಕ್ಷ ಕಾರ್ ಉತ್ಪಾದಿಸುವ ಗುರಿ ಹೊಂದಿರುವುದಾಗಿ ಅವರು ಹೇಳಿದ್ದಾರೆ.

ಸೂಕ್ತ ಸಮಯದಲ್ಲಿ ಭಾರತದ ವಾಹನ ಮಾರುಕಟ್ಟೆಯನ್ನು ಪ್ರವೇಶಿಸುವುದಾಗಿ ಅವರು ಹೇಳಿದ್ದಾರೆ. ಇದು ಸ್ಪೋರ್ಟ್ ವರ್ಷನ್ ಕಾರ್ ಮಾರುಕಟ್ಟೆಯಲ್ಲಿ ಜನಪ್ರಿಯ ಬ್ರಾಂಡಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಸರಿಯಾಗಿ ತಳವೂರಿದ ನಂತರ ಕಂಪನಿ ಭಾರತಕ್ಕೆ ಪ್ರವೇಶಿಸುವ ಯೋಜನೆ ಹೊಂದಿದೆ. ಹ್ಯುಂಡೈ ಭಾರತಕ್ಕೆ ಪ್ರವೇಶಿಸಿದಂದಿನಿಂದ ಕಿಯಾ ಮೋಟರ್ಸ್ ಇಲ್ಲಿಗೆ ಬರುವ ಕುರಿತು ಗಾಸೀಪ್ ಗಳಿದ್ದವು. ಕಳೆದ ಏಪ್ರಿಲ್-ಜನವರಿ ಅವಧಿಯಲ್ಲಿ ಹ್ಯುಂಡೈ ಮೋಟರ್ಸ್ ಮಾರಾಟ 2.95 ಲಕ್ಷ ಯೂನಿಟ್ ಗೆ ತಲುಪಿದ್ದು ಶೇ. 17ರಷ್ಟು ಏರಿಕೆ ಕಂಡಿತ್ತು.

More from DriveSpark

Article Published On: Wednesday, March 9, 2011, 12:17 [IST]
English summary
Having assessed the incapable potential for its vehicles in the Indian market, the Korean sibling of Hyundai, Kia Motors is withdrawing its entry plan. Instead, the company is on the verge of expanding its operations in China, the US and Europe.
Read more on ಕಾರು car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+