ಕಿಝಾಷಿ ಅಭಿಯಾನ ಸುರು, ಟಿವಿ ಜಾಹೀರಾತಿಗೆ ಬಹುಪಾಲು

ಜನರೆಲ್ಲ ವಿಶ್ವಕಪ್ ಕ್ರಿಕೆಟ್ ನಲ್ಲಿ ಮಗ್ನರಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಮಾರುತಿ ಕಿಝಾಷಿ ಅಭಿಯಾನಕ್ಕೆ ಹೆಚ್ಚಿನ ಒತ್ತು ನೀಡಿದೆ. ಒಟ್ಟಾರೆ ಕಂಪನಿಯು ಕಿಝಾಷಿ ಅಭಿಯಾನಕ್ಕೆ ಸುಮಾರು 8 ಕೋಟಿ ರೂ. ವಿನಿಯೋಗಿಸುತ್ತಿದೆ. ಇದರಲ್ಲಿ ಬಹುಪಾಲು ಅಂದರೆ ಸುಮಾರು 5ರಿಂದ 7 ಕೋಟಿ ರೂ. ಟಿವಿ ಜಾಹೀರಾತಿಗೆ ವಿನಿಯೋಗಿಸಲಾಗುತ್ತಿದೆಯಂತೆ. ಸದ್ಯದ ವಿಶ್ವಕಪ್ ಸೀಸನ್ ನಲ್ಲಿ ಜನರ ಚಿತ್ತವೆಲ್ಲ ಟೆಲಿವಿಷನ್ ಮೇಲಿರುವುದರಿಂದ ಕಂಪನಿಯು ಟಿವಿ ಜಾಹೀತಾತಿಗೆ ಹೆಚ್ಚು ಗಮನ ನೀಡಿದೆ.
ಕಿಝಾಷಿ ಬಗ್ಗೆ ಒಂದಿಷ್ಟು: ಕಿಝಾಷಿ 2.4 ಲೀಟರ್ ಎಂಜಿನ್ ಹೊಂದಿದ್ದು, ಲಕ್ಷುರಿ ಸ್ಪೋರ್ಟ್ಸ್ ಲಕ್ಷುರಿ ಕಾರ್ ಸೆಗ್ಮೆಂಟ್ ಕಾರಿನಂತೆ ಭಾಸವಾಗುತ್ತದೆ. ಇದರಲ್ಲಿ ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್, ಕ್ರೂಸ್ ಕಂಟ್ರೊಲ್, ಇಬಿಡಿ ಮತ್ತು 10 ಹಂತದ ಸೀಟ್ ಹೊಂದಾಣಿಕೆ ಫೀಚರ್ ಗಳಿವೆ. ನೂತನ ಕಿಝಾಷಿ ಮ್ಯಾನುಯಲ್ ಟ್ರಾನ್ಸ್ ಮಿಷನ್ ಆವೃತ್ತಿ ದರ ಸುಮಾರು 16.5 ಲಕ್ಷ ರೂಪಾಯಿ. ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಸೆಡಾನ್ ಕಾರ್ ದರ 17.5 ಲಕ್ಷ ರೂ ರೂ.
ಕಿಝಾಷಿ ಮ್ಯಾನುಯಲ್ ಆವೃತ್ತಿಯಲ್ಲಿ 7.8 ಸೆಕೆಂಡ್ ನಲ್ಲಿ ಸೊನ್ನೆಯಿಂದ 100 ಆಕ್ಸಿಲೆರೇಷನ್ ಪಡೆಯಬಹುದಾಗಿದೆ. ಆದರೆ ಸಿವಿಟಿ ಆವೃತ್ತಿಯಲ್ಲಿ 8.8 ಸೆಕೆಂಡ್ ಬೇಕಾಗುತ್ತದೆ. ಮ್ಯಾನುಯಲ್ ಆವೃತ್ತಿ ಸೆಡಾನ್ ಕಾರ್ ಪ್ರತಿಗಂಟೆಗೆ 215 ಕಿ.ಮೀ. ವೇಗ ಹೊಂದಿದೆ. ಸಿವಿಟಿ ಆವೃತ್ತಿ ಪ್ರತಿಗಂಟೆಗೆ 205 ಕಿ.ಮೀ ವೇಗ ಹೊಂದಿದೆ. ಮೈಲೇಜ್ ವಿಷಯಕ್ಕೆ ಬಂದರೆ ಸಿವಿಟಿ ಆವೃತ್ತಿ ಪ್ರತಿಲೀಟರ್ ಗೆ 12.53 ಕಿ.ಮೀ. ಸಾಗುತ್ತದೆ. ಕಿಝಾಷಿ ಮ್ಯಾನುಯಲ್ ಆವೃತ್ತಿ ಪ್ರತಿಲೀಟರ್ ಗೆ 12.45 ಮೈಲೇಜ್ ನೀಡುತ್ತದೆ.


Click it and Unblock the Notifications







