ಇದು ಮಾರುತಿ ಸುಜುಕಿಯ ಮೂರನೇ ಘಟಕ

ಕಂಪನಿಯು ನಿರ್ಮಿಸಲು ಉದ್ದೇಶಿಸಿದ ಘಟಕವು ಗುರ್ ಗಾಂವ್ ಘಟಕಕ್ಕಿಂತ ಎರಡು ಪಟ್ಟು ದೊಡ್ಡದಿರಲಿದೆ. ಅಂದರೆ ಸುಮಾರು 600 ಎಕರೆಯಷ್ಟು ಪ್ರದೇಶದಲ್ಲಿ ಮಾರುತಿ ಮೂರನೇ ಘಟಕ ನಿರ್ಮಿಸಲಿದೆ. ರೋಹ್ಟಕ್ ಘಟಕಕ್ಕಾಗಿ ಕಂಪನಿಯು ಸುಮಾರು 1 ಸಾವಿರ ಕೋಟಿ ರೂ. ವಿನಿಯೋಗಿಸಲಿದೆ. ನೂತನ ಘಟಕದಲ್ಲಿ ಉತ್ಪಾದನೆ ಆರಂಭವಾದ ನಂತರ ಕಂಪನಿಯ ಒಟ್ಟು ವಾರ್ಷಿಕ ವಾಹನ ಉತ್ಪಾದನೆ ಸುಮಾರು 20 ಲಕ್ಷ ಯೂನಿಟ್ ಗೆ ತಲುಪಲಿದೆ.
ಗುರ್ ಗಾಂವ್ ಮತ್ತು ಮಾನೆಸರ್ ಘಟಕದಲ್ಲಿ ಕಂಪನಿಯು ವರ್ಷಕ್ಕೆ ಸುಮಾರು 12 ಲಕ್ಷ ಕಾರ್ ಉತ್ಪಾದಿಸುತ್ತಿದೆ. ರೋಹ್ಟಕ್ ನಲ್ಲಿ ಸುಮಾರು 6 ಲಕ್ಷ ಯೂನಿಟ್ ಉತ್ಪಾದಿಸುವ ನಿರೀಕ್ಷೆಯಿದೆ. ಈ ಕುರಿತು ಕಂಪನಿಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗವು ಪರಿಶೀಲಿಸುತ್ತಿದ್ದು ನೂತನ ಮೂರನೇ ಘಟಕದ ಕುರಿತು ಸ್ಪಷ್ಟ ಚಿತ್ರಣ ಈ ವರ್ಷದೊಳಗೆ ದೊರಕಬಹುದೆಂದು ಕಂಪನಿ ತಿಳಿಸಿದೆ. ಇದರೊಂದಿಗೆ ಕಂಪನಿಯು ತನ್ನ ಮಾನೆಸರ್ ಘಟಕದ ವಿಸ್ತರಣಾ ಯೋಜನೆಗಳಿಗಾಗಿ ಸುಮಾರು 2 ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಯೋಜಿಸಿದೆ.


Click it and Unblock the Notifications







