ಪೋಲಿಸರಿಗೆ ಅಂಬಾಸಿಡರ್ ಕಾರ್ ಬೇಡವಂತೆ!!

Maruti Suzuki SX4
ಐಕಾನಿಕ್ ಅಂಬಾಸಿಡರ್ ಕಾರ್ ಯಾಕೋ ದೆಹಲಿ ಪೋಲಿಸರಿಗೆ ಸಾಕೆನಿಸಿದೆ. ಹಳೆಯ ಅಂಬಾಸಿಡರ್ ಕಾರ್ ಬದಲಿಗೆ ಹೆಚ್ಚು ವೇಗ ಮತ್ತು ಮಾಡರ್ನ್ ಆಗಿರುವ ಮಾರುತಿ ಸುಜುಕಿ ಎಸ್ಎಕ್ಸ್4 ಕಾರಿನಲ್ಲಿ ದೆಹಲಿ ಪೋಲಿಸರು ಸವಾರಿ ಹೊರಡಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಆರಂಭದಲ್ಲಿ ಸುಮಾರು ಒಂದು ಡಜನಿನಷ್ಟು ಎಸ್ಎಕ್ಸ್4 ಕಾರನ್ನು ಖರೀದಿಸಲಾಗಿದೆ.

"ಸುಲಭ ನಿರ್ವಹಣೆ ಮತ್ತು ಇಂಧನ ದಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮಾರುತಿ ಎಸ್ಎಕ್ಸ್4ನಂತಹ ಕಾರ್ ಗಳನ್ನು ಖರೀದಿಸುವ ಪ್ರಕ್ರಿಯೆ ಆರಂಭಿಸಿದ್ದೇವೆ" ಎಂದು ದೆಹಲಿ ಪೋಲಿಸ್ ಕಮಿಷನರ್ ಬಿ ಕೆ ಗುಪ್ತಾ ಹೇಳಿದ್ದಾರೆ. ಈ ಪ್ರಸ್ತಾಪವನ್ನು ಬಹಳಷ್ಟು ದಿನಗಳ ಹಿಂದೆಯೇ ಗೃಹ ಸಚಿವಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಈಗ ಆ ಪ್ರಸ್ತಾಪಕ್ಕೆ ಅನುಮತಿ ದೊರಕಿದ್ದು ಬಿ ಕೆ ಗುಪ್ತಾ ಅಂತಹ ಕಾರ್ ಪಡೆದವರಲ್ಲಿ ಮೊದಲಿಗರಾಗಿದ್ದಾರೆ.

ಇಂಧನ ದಕ್ಷತೆ, ನಿರ್ವಹಣಾ ವೆಚ್ಚ, ಆರಾಮದಾಯಕತೆ ಮತ್ತು ವೇಗ ಎಂಬ ನಾಲ್ಕು ಮಾನದಂಡಗಳನ್ನಿಟ್ಟುಕೊಂಡು ನೂತನ ಮಾರುತಿ ಎಸ್ಎಕ್ಸ್ 4 ಖರೀದಿಸಲಾಗಿದೆ ಎಂದು ಅಂಬಾಸಿಡರ್ ಕೈಬಿಟ್ಟದಕ್ಕೆ ಸೃಷ್ಟಿಕರಣವನ್ನು ಗುಪ್ತಾ ನೀಡಿದ್ದಾರೆ. ದೆಹಲಿ ಪೋಲಿಸರಿಗೆ ನೀಡಿದ ಎಸ್ಎಕ್ಸ್4 ಕಾರಿನಲ್ಲಿ ಸುರಕ್ಷತೆಯ ದೃಷ್ಟಿಯಿಂದ ರೇಡಿಯೋ ಟ್ಯಾಗ್ ಅಳವಡಿಸಲಾಗಿದೆ. ಉಳಿದಂತೆ ಪೋಲಿಸರಿಗೆ ನೀಡಿದ ಎಸ್ಎಕ್ಸ್ 4 ಕಾರಿಗೂ, ಕಂಪನಿಯ ಇತರ ಸಾಮಾನ್ಯ ಜನತೆಗೆ ನೀಡಿದ ಕಾರಿಗೂ ಬೇರಾವ ಫೀಚರ್ ಗಳ ವ್ಯತ್ಯಾಸವಿಲ್ಲ.

More from DriveSpark

Article Published On: Saturday, March 12, 2011, 11:45 [IST]
English summary
Delhi Police has decided to replace its current fleet of Ambassador cars with the faster and more modern Maruti Suzuki SX4. The four basic things kept in mind while choosing a replacement for Ambassador were fuel economy, maintenance cost, comfort and speed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+