ಬಿಎಂಡಬ್ಲ್ಯು ಸಿಕ್ಸ್ ಸೀರಿಸ್: ಕೆಲವೇ ವಾರಗಳಲ್ಲಿ ರಸ್ತೆಗೆ

BMW 6 series 2011
ಮುಂದಿನ ತಲೆಮಾರಿನ ನೂತನ ಸಿಕ್ಸ್ ಸೀರಿಸ್ ಕಾರ್ ಕೊನೆಗೂ ಭಾರತದಲ್ಲಿ ಇನ್ನೂ ಕೆಲವೇ ವಾರಗಳಲ್ಲಿ ರಸ್ತೆಗಿಳಿಯಲಿದೆ. ನೆಕ್ಸ್ಟ್ ಜನರೇಷನ್ 6-ಸೀರಿಸ್ ಕುರಿತು ಕಾರ್ ಪ್ರೇಮಿಗಳಲ್ಲಿ ಈಗಾಗಲೇ ಹೊಸ ಹೈಪ್ ಕ್ರಿಯೆಟ್ ಆಗಿತ್ತು. 2011ರ ಕಾರ್ ಕೆಲವೇ ವಾರಗಳಲ್ಲಿ ರಸ್ತೆಗಿಳಿಯುವುದಾಗಿ ಮೂಲಗಳು ಸ್ಪಷ್ಟಪಡಿಸಿವೆ. ನೂತನ ಕಾರ್ ಗಳು ನೋಡಲು ಕಂಪನಿಯ ಕಳೆದ ದಶಕದ ಝಡ್9 ಗ್ರಾನ್ ಟೋರಿಸ್ಮೊ ಹೊಸ ಅವತಾರದಂತಿವೆ.

5-ಸೀರಿಸ್ ಗಳಿಗೆ ಹೋಲಿಸಿದರೆ ನೂತನ ಕಾರ್ ಗಳು ಸಾಕಷ್ಟು ಹೊಸ ಫೀಚರ್ ಗಳೊಂದಿಗೆ ಬರಲಿವೆ. ಎಲ್ಇಡಿ ಕೊರೊನಾ ಲೆನ್ಸ್ ಹೊಂದಿರುವ ಟೆಕ್ನಿಕಲ್ ಹೆಡ್ ಲ್ಯಾಂಪ್ ಗಳು ಗಮನ ಸೆಳೆಯುತ್ತವೆ. ನೂತನ ಕಾರಿನ ಗ್ರಿಲ್, ಬಂಪರ್, ಬಾನೆಟ್ ವಿನ್ಯಾಸ ಆಕರ್ಷಕವಾಗಿದ್ದು ಇಷ್ಟವಾಗುವಂತಿದೆ. ಬಾನೆಟ್ ಸ್ಟೀಲ್ ಬಾಡಿ ಹೊಂದಿರಲಿದೆ. ಎಲ್ ಇಡಿ ಗ್ರಾಫಿಕ್ಸ್ ಸಮೀಪ ಎಲ್ ಆಕಾರದ ಲ್ಯಾಂಪ್ ಗಳಿವೆ. ಇಂಥದ್ದೇ ಗ್ರಾಫಿಕ್ಸ್ 5-ಸೀರಿಸ್ ಕಾರಿನಲ್ಲೂ ಇವೆ. ಕಾರಿನ ಗಾತ್ರ 5-ಸೀರಿಸ್ ನಷ್ಟೇ ಇರಲಿದೆ ಎಂದು ಕೆಲವು ವರದಿಗಳು ತಿಳಿಸಿವೆ.

ಮುಂದಿನ ತಲೆಮಾರಿನ 6-ಸೀರಿಸ್ ನಲ್ಲಿ ಹಿಂದಿನ ಇಂಟಿರಿಯರ್ ಸ್ಥಳಾವಕಾಶ ಹೆಚ್ಚಿಸಲು ವೀಲ್ ಬೇಸ್ ಜಾಸ್ತಿ ಮಾಡಲಾಗಿದೆ. ಹಳೆಯ ಬಿಎಂಡಬ್ಲ್ಯು ಕಾರ್ ಗಳಲ್ಲಿ ಇರುವಂತೆ ಡ್ಯಾಷ್ ಬೋರ್ಡ್ ವಿನ್ಯಾಸವಿದೆ. ಚಾಲಕನಿಗೆ ಆರಾಮದಾಯಕತೆ ಒದಗಿಸಲು ಪೂರಕವಾಗಿದೆ. 8-ಸ್ಪೀಡ್ ಆಟೋ ಗೇರ್ ಬಾಕ್ಸ್ ಮತ್ತು ಎರಡು ಡೈರೆಕ್ಟ್ ಇಂಜೆಕ್ಸನ್ ಅಳವಡಿಸಿರುವ ಪೆಟ್ರೋಲ್ ಎಂಜಿನ್ ಇದೆ. ನೂತನ ಕಾರ್ ಉತ್ತಮ ಇಂಧನ ದಕ್ಷತೆಯನ್ನೂ ಹೊಂದಿದೆ. ಇದು ಪ್ರತಿಲೀಟರ್ ಗೆ ಸುಮಾರು 14.88 ಕಿ.ಮೀ.ಯಾಗಿದೆ. ಪ್ರತಿಗಂಟೆಗೆ ಗರಿಷ್ಟ 250 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ.

More from DriveSpark

Article Published On: Monday, March 14, 2011, 12:33 [IST]
English summary
Finally BMW has come out with the launch of its next generation 6-Series in a couple of weeks time. The entry will mark a new sensation and style for the segment and the car will resemble its siblings like 5-Series both in design and in performance.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+