ಹೋಂಡಾ ಸಿಯೆಲ್ ಕಾರ್ ದರ ಏರಿಕೆ

"ಕಮಾಡಿಟಿ ದರಗಳು ಕಳೆದ ಕೆಲವು ತಿಂಗಳಿನಿಂದ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಈ ಹಿನ್ನಲೆಯಲ್ಲಿ ಮುಂದಿನ ತಿಂಗಳಿನಿಂದ ಕಾರ್ ದರಗಳನ್ನು ಶೇ. 2-3ರಷ್ಟು ಹೆಚ್ಚಿಸಲಿದ್ದೇವೆ" ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ. ಆದರೂ ಐಷಾರಾಮಿ ಸೆಡಾನ್ ಕಾರ್ ಅಕಾರ್ಡ್ ದರ ಹೆಚ್ಚಿಸಲಾಗುವುದಿಲ್ಲ ಎಂದು ಕಂಪನಿ ತಿಳಿಸಿದೆ.
ಕಂಪನಿಯ ಈ ನಿರ್ಧಾರದಿಂದ ಸೆಡಾನ್ ಕಾರ್ "ಹೋಂಡಾ ಸಿಟಿ", ಹ್ಯಾಚ್ ಬ್ಯಾಕ್ "ಜಾಝ್", ಪ್ರಿಮಿಯಂ ಸೆಡಾನ್ "ಸಿವಿಕ್" ಮತ್ತು ಎಸ್ ಯುವಿ "ಸಿಆರ್-ವಿ" ಕಾರ್ ದರಗಳು ದುಬಾರಿಯಾಗಲಿವೆ. ಕಂಪನಿ ಹೊರತರಲಿರುವ ನೂತನ "ಬ್ರಿಯೊ" ಮಾದರಿಯನ್ನು ಪೂರ್ವಭಾವಿಯಾಗಿ ಮಾರ್ಚ್ 17ರಂದು ಅನಾವರಣಗೊಳಿಸಲು ಕಂಪನಿ ನಿರ್ಧರಿಸಿತ್ತು. ಆದರೆ ಜಪಾನ್ ನಲ್ಲಿ ಸಂಭವಿಸಿದ ಭೂಕಂಪ ಮತ್ತು ಸುನಾಮಿ ಹಿನ್ನಲೆಯಲ್ಲಿ ಇದನ್ನು ಮುಂದೂಡಲಾಗಿದೆ.


Click it and Unblock the Notifications







