ಮಾರುತಿ ಕಣ್ಣಲ್ಲಿ ಕೋಟಿ ನವಿಲುಗರಿ, ಇಂದಿರಾ ಗಾಂಧಿ ನೆನಪು

Indira Gandhi and M800
ಮಾರುತಿ ಕಣ್ಣಲ್ಲಿ ಕೋಟಿ ನವಿಲುಗರಿ ರೆಕ್ಕೆ ಬಿಚ್ಚುತ್ತಿದೆ. ಯಾಕೆಂದರೆ ಕಂಪನಿಯ ಕಾರ್ ಉತ್ಪಾದನೆ ಈಗಾಗಲೇ ಒಂದು ಕೋಟಿ ಗಡಿ ದಾಟಿದೆ. ಮುಂದಿನ 6-7 ವರ್ಷಗಳಲ್ಲಿ ಮತ್ತೆ ಕಾರ್ ಉತ್ಪಾದನೆ ಮತ್ತೊಂದು ಕೋಟಿ ಗಡಿ ದಾಟುವ ನಿರೀಕ್ಷೆಯಲ್ಲಿ ದೇಶದ ಬೃಹತ್ ಕಾರ್ ಉತ್ಪಾದಕ ಕಂಪನಿ ಮಾರುತಿ ಸುಜುಕಿಯಿದೆ. ಕಂಪನಿಯು ಶೀಘ್ರದಲ್ಲಿ ಮಾನೆಸರ್ ಘಟಕದಲ್ಲಿ ಎರಡು ಹೊಸ ಘಟಕ ನಿರ್ಮಿಸಲು ನಿರ್ಧರಿಸಿದೆ. ಇದಕ್ಕಾಗಿ ಸುಮಾರು 3,625 ಕೋಟಿ ರೂ. ಹೂಡಿಕೆ ಮಾಡುವುದಾಗಿ ಕಂಪನಿ ತಿಳಿಸಿದೆ.

ಡಿಸೆಂಬರ್ 14, 1983ರಲ್ಲಿ ಅಂದರೆ ಸುಮಾರು 27 ವರ್ಷಗಳ ಹಿಂದೆ, ತನ್ನ ಗುರ್ ಗಾಂವ್ ಘಟಕದಲ್ಲಿ ಕಂಪನಿಯು ಮೊದಲ ಮಾರುತಿ 800 ಕಾರ್ ಹೊರತಂದಿತ್ತು. ಅಲ್ಲಿಂದ ಆರಂಭವಾದ ಕಂಪನಿಯ ಭರ್ಜರಿ ಮಾರಾಟ ಈಗ ಹಲವು ಲಕ್ಷಗಳನ್ನು ದಾಟಿದೆ. ಇಂಟ್ರೆಸ್ಟಿಂಗ್ ವಿಷಯವೆಂದರೆ ಕಂಪನಿ ಉತ್ಪಾದಿಸಿದ ಮೊದಲ ಮಾರುತಿ 800 ಕಾರ್ ನ್ನು ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು ಕಂಪನಿಯ ಚೇರ್ಮನ್ ಆರ್ ಸಿ ಭಾರ್ಗವ್ ಗೆ ಹಸ್ತಾಂತರಿಸಿದ್ದರು.

ಕಂಪನಿಯು ಒಂದು ಕೋಟಿ ಕಾರ್ ಉತ್ಪಾದನೆಗೆ 27 ವರ್ಷ ತೆಗೆದುಕೊಂಡಿತ್ತು. ಆದರೆ ಇನ್ನು ಮುಂದಿನ ಒಂದು ಕೋಟಿ ಉತ್ಪಾದನೆಗೆ ಅಷ್ಟು ಕಾಯುವ ಅವಶ್ಯಕತೆಯಿಲ್ಲ. ಮುಂದಿನ 6-7 ವರ್ಷಗಳಲ್ಲಿ ಮತ್ತೆ ಒಂದು ಕೋಟಿ ಕಾರ್ ಉತ್ಪಾದಿಸುವುದಾಗಿ ಕಂಪನಿ ತಿಳಿಸಿದೆ.

"ಮಾನೆಸರ್ ನಲ್ಲಿ ಹೊಸ ಎರಡು ಘಟಕಗಳನ್ನು ನಿರ್ಮಿಸಲಿದ್ದೇವೆ. ಮಾರುಕಟ್ಟೆಯಲ್ಲಿ ಕಂಪನಿಯ ಕಾರ್ ಗಳಿಗೆ ಬೇಡಿಕೆ ಗಮನಾರ್ಹವಾಗಿ ಏರಿಕೆ ಕಾಣುತ್ತಿದೆ. ಇದರಿಂದಾಗಿ ಕಂಪನಿಯ ಮಾರಾಟ ಶೀಘ್ರದಲ್ಲಿ ಒಂದು ಕೋಟಿ ದಾಟಲಿದೆ. ಸುಮಾರು 2017-18ರ ಸಮಯದಲ್ಲಿ ಕಂಪನಿಯ ಉತ್ಪಾದನೆ ಕೋಟಿ ದಾಟಲಿದೆ. ನಾವು ಇದನ್ನು ಸಾಧಿಸಿಯೇ ಸಾಧಿಸುತ್ತೇವೆ" ಎಂದು ಮಾರುತಿ ಸುಜುಕಿ ಇಂಡಿಯಾ ಚೇರ್ಮನ್ ಆರ್ ಸಿ ಭಾರ್ಗವ ಹೇಳಿದ್ದಾರೆ.

ಈಗ ಎಂಎಸ್ಐ ನಲ್ಲಿ ಶೇ. 54,2ರಷ್ಟು ಪಾಲು ಸುಜುಕಿ ಮೋಟರ್ ಕಾರ್ಪೊರೇಷನ್ ತೆಕ್ಕೆಯಲಿದೆ. ಗುರ್ ಗಾಂವ್ ಘಟಕ ವಾರ್ಷಿಕ 8.5 ಲಕ್ಷ ವಾಹನ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಮಾನೆಸರ್ ನಲ್ಲಿ 3.5 ಲಕ್ಷ ಕಾರ್ ಉತ್ಪಾದಿಸಲಾಗುತ್ತದೆ. ಒಟ್ಟಾರೆ ಕಂಪನಿಯ ವಾರ್ಷಿಕ ಕಾರ್ ಉತ್ಪಾದನೆ ಸುಮಾರು 12 ಲಕ್ಷ ಯೂನಿಟ್ ಆಗಿದೆ. 2010ರ ಆಕ್ಟೋಬರ್ ನಿಂದ ಕಂಪನಿ ಪ್ರತಿತಿಂಗಳು 1.1 ಲಕ್ಷ ವಾಹನ ಉತ್ಪಾದಿಸುತ್ತಿದ್ದು ಶೇ. 10ರಷ್ಟು ಏರಿಕೆ ಕಂಡಿದೆ. 2011-12ರಲ್ಲಿ ವಾರ್ಷಿಕ ಉತ್ಪಾದನೆಯನ್ನು 14 ಲಕ್ಷ ಯೂನಿಟ್ ಗೆ ಮುಟ್ಟಿಸೋ ಯೋಜನೆ ಕಂಪನಿಗಿದೆ.

More from DriveSpark

Article Published On: Monday, March 14, 2011, 11:26 [IST]
English summary
Maruti Suzuki India likely to cross the milestone of producing the first one crore vehicles nearly 27 years since it first rolled out M800 from Gurgaon. Since it rolled out the first M800 on December 14, 1983. Prime Minister Indira Gandhi handing over the first car is perhaps the most memorable moment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+