ಸುನಾಮಿ ಪರಿಣಾಮ: ಹೋಂಡಾ ಬ್ರಿಯೊ ಬಿಡುಗಡೆ ಮುಂದಕ್ಕೆ

ಮಾರ್ಚ್ 17ರಂದು ಕಂಪನಿ ದೇಶದಲ್ಲಿ ಬ್ರಿಯೊ ಪರಿಚಯಿಸಲು ನಿರ್ಧರಿಸಿತ್ತು. ಆದರೆ ಸುನಾಮಿ, ಭೂಕಂಪ ಹಿನ್ನಲೆಯಲ್ಲಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಕಂಪನಿ ತಿಳಿಸಿದೆ. ಹೋಂಡಾ ಕಂಪನಿಯು ದೇಶದಲ್ಲಿ ಸಿಯೆಲ್ ಗ್ರೂಪ್ ನೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಇದಕ್ಕೂ ಮುನ್ನ ಕಂಪನಿಯು 2010ರಲ್ಲಿ ಬ್ರಿಯೊ ಕಾರನ್ನು ಬಾಂಕಾಂಕ್ ನಲ್ಲಿ ಅನಾವರಣಗೊಳಿಸಿತ್ತು. ಆ ಸಮಯದಲ್ಲಿ ಬ್ರಿಯೊ ಕಾರನ್ನು ಭಾರತದಲ್ಲಿ ಸುಮಾರು 5 ಲಕ್ಷ ರೂ.ಗೆ ನೀಡುವುದಾಗಿ ಹೇಳಿತ್ತು.
ಆದರೆ, ದುರಾದೃಷ್ಟವಶಾತ್ ಕಳೆದ ವಾರ ಸಂಭವಿಸಿದ ಭೂಕಂಪ ಮತ್ತು ಸುನಾಮಿಯಿಂದ ಜಪಾನಿನಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದರು. ಅದೇ ರೀತಿ ಅಲ್ಲಿನ ವ್ಯಾಪಾರ ವಹಿವಾಟಿಗೂ ಸಾಕಷ್ಟು ಹೊಡೆತ ನೀಡಿತ್ತು. ಈಗ ಜಪಾನ್ ಫುಕುಶಿಮಾ ಅಣುಸ್ಥಾವರದಲ್ಲಿ ಇಂಧನ ಸೋರಿಕೆ ಕುರಿತ ಭೀತಿಯಲ್ಲಿದೆ. ಭೂಕಂಪ ಮತ್ತು ಸುನಾಮಿಗೆ ಸಿಲುಕಿ ಹೋಂಡಾ ಕಂಪನಿಯ 7 ಜನರು ಸಾವನ್ನಪ್ಪಿದ್ದರು ಮತ್ತು ಮೂವರು ಗಾಯಗೊಂಡಿದ್ದರು.


Click it and Unblock the Notifications








