ಆರನೇ ಸ್ಥಾನದತ್ತ ದೇಶದ ಕಾರ್ ಮಾರುಕಟ್ಟೆ

World 6th Largest Car Market
ಭಾರತ ನಿರೀಕ್ಷೆಗಿಂತ ಬೇಗನೇ ವಿಶ್ವದ ಆರನೇ ಕಾರ್ ಮಾರುಕಟ್ಟೆಯಾಗುವತ್ತ ದಾಪುಗಾಲಿಡುತ್ತಿದೆ. ಬಹುಶಃ ಪ್ರಸಕ್ತ ಆರ್ಥಿಕ ವರ್ಷದಲ್ಲಿಯೇ ಆರನೇ ಸ್ಥಾನದ ಗರಿ ನಮಗೆ ದೊರಕುವ ನಿರೀಕ್ಷೆಗಳಿವೆ. ವಿಶ್ವದ ಏಳನೇ ಬೃಹತ್ ವಾಹನ ಮಾರುಕಟ್ಟೆಯಾಗಿರುವ ಭಾರತ ಈ ಆರ್ಥಿಕ ವರ್ಷದ ಅಂತ್ಯಕ್ಕೆ ಆರನೇ ಕಾರ್ ಮಾರುಕಟ್ಟೆಯಾಗುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಒಟ್ಟು ಕಾರ್ ಉತ್ಪಾದನೆ 30 ಲಕ್ಷ ಯೂನಿಟ್ ಗೆ ತಲುಪುವ ನಿರೀಕ್ಷೆಗಳಿವೆ.

ಪ್ರಸಕ್ತ ಆರ್ಥಿಕ ವರ್ಷದ ಮೊದಲ 7 ತಿಂಗಳಲ್ಲಿ (ಏಪ್ರಿಲ್ 2010ರಿಂದ ಫೆಬ್ರವರಿ 2011ರವರೆಗೆ) ಭಾರತದ ವಾಹನ ಕಂಪನಿಗಳು ಒಟ್ಟು 26.78 ಲಕ್ಷ ಕಾರ್ ಉತ್ಪಾದಿಸಿವೆ. 2015ಕ್ಕೆ ಭಾರತ ವಿಶ್ವದ 6ನೇ ಬೃಹತ್ ಕಾರ್ ತಯಾರಿಕಾ ಕಂಪನಿಯಾಗಲಿದೆ ಎಂದು ಭಾರತದ ವಾಹನ ಉತ್ಪಾದಕರ ಒಕ್ಕೂಟ(ಎಸ್ಐಎಎಂ) ಈ ಹಿಂದೆ ಅಂದಾಜಿಸಿತ್ತು. ಆದರೆ ಈ ಆರ್ಥಿಕ ವರ್ಷದ ಗರಿಷ್ಟ ವಾಹನ ಉತ್ಪಾದನೆಯ ನೆರವಿನಿಂದ ಮತ್ತು ಐಷಾರಾಮಿ ಕಾರ್ ಗಳಿಗೂ ಬೇಡಿಕೆ ಏರಿಕೆ ಕಂಡಿರುವುದರಿಂದ ನಿರೀಕ್ಷೆಗಿಂತ ಮೊದಲೇ ಭಾರತ 6ನೇ ಸ್ಥಾನ ಪಡೆಯುವ ಸಾಧ್ಯತೆಯಿದೆ.

"ಈ ಹಿಂದೆ ನಾವು ಅಂದಾಜಿಸಿದ್ದಕ್ಕಿಂತ ವಾಹನ ಉತ್ಪಾದನೆ ಹೆಚ್ಚಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಈ ವರ್ಷಕ್ಕಿಂತ ಸುಮಾರು ಶೇ 14-16ರಷ್ಟು ವಾಹನ ಮಾರಾಟ ಹೆಚ್ಚಾಗುವ ನಿರೀಕ್ಷೆಯಿದೆ" ಎಂದು ಎಸ್ಐಎಎಂನ ಹಿರಿಯ ನಿರ್ದೇಶಕರಾದ ಸುಜಾತೊ ಸೇನ್ ಹೇಳಿದ್ದಾರೆ.

More from DriveSpark

Article Published On: Tuesday, March 22, 2011, 17:03 [IST]
English summary
India set to become world 6th largest car market by the end of FY 2010-11. In the first eleven months of this current financial year, the India registered a production of over 26.78 lakh cars. According to automobile experts total production of the car will touch the 3 million unit mark by the end of this FY.
Read more on ಕಾರು car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+