ನೂತನ ಹ್ಯುಂಡೈ ವೆರ್ನಾ ಆರ್ ಬಿ ಶೀಘ್ರದಲ್ಲಿ ಅನಾವರಣ

ಹ್ಯುಂಡೈ ಐ10 ಮತ್ತು ಐ20 ಮಾದರಿಗಳಲ್ಲಿರುವಂತೆ ಆಕರ್ಷಕ ವಿನ್ಯಾಸವನ್ನು ಪ್ರೀಮಿಯಂ ವೆರ್ನಾ ಹೊಂದಿರಲಿದೆ. ಎಲ್ಇಡಿ ಲ್ಯಾಂಪ್, ಫಾಗ್ ಲ್ಯಾಂಪ್, ಹೆಡ್ ಲ್ಯಾಂಪ್ ಇತ್ಯಾದಿಗಳ ವಿನ್ಯಾಸ ನ್ಯೂ ಐ10ನಂತೆ ಇದೆ. ನೂತನ ಕಾರಿನ ಇಂಟಿರಿಯರ್ ವಿನ್ಯಾಸ ಇನ್ನಷ್ಟು ಆಕರ್ಷಕವಾಗಿರಲಿದೆ. ಪುಷ್ ಸ್ಟಾರ್ಟ್/ಸ್ಟಾಪ್ ಬಟನ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೊಲ್, ಸ್ಟೀರಿಂಗ್ ವೀಲ್ ನಲ್ಲಿ ಆಡಿಯೋ ಕಂಟ್ರೊಲ್, ಏರ್ ಬ್ಯಾಗ್ ಮತ್ತು ಎಬಿಎಸ್ ಸಿಸ್ಟಮ್ ಗಳು ಇರಲಿದೆ. ನೂತನ ವೆರ್ನಾ ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಎರಡೂ ಆಯ್ಕೆಗಳಲ್ಲಿ ದೊರಕಲಿದೆ.
ಹ್ಯುಂಡೈ ವೆರ್ನಾ ಪ್ರೀಮಿಯಂ ಆಕರ್ಷಕ ಫೀಚರ್ ಗಳೊಂದಿಗೆ ಬರಲಿದೆ. ಫೋಕ್ಸ್ ವ್ಯಾಗನ್ ವೆಂಟೊ, ಮಾರುತಿ ಎಸ್ಎಕ್ಸ್4, ಫಿಯೆಟ್ ಲಿನಿಯಾ ಮತ್ತು ಹೋಂಡಾ ಸಿಟಿಗಳಿಗೆ ಇದು ಪೈಪೋಟಿ ನೀಡುವ ನಿರೀಕ್ಷೆಯಿದೆ.


Click it and Unblock the Notifications








