ಭಾರತಕ್ಕೆ ಬಂತು ಹನ್ನೆರಡುವರೆ ಕೋಟಿ ರೂ.ನ ಸೂಪರ್ ಕಾರ್

ಈ ದುಬಾರಿ ಲಕ್ಷುರಿ ಕಾರ್ ಸೂಪರ್ ಡ್ರೈವ್ ಗೆ ಸೂಕ್ತವಾದ 5 ಲೀಟರ್ ನ ಬಿ-ಟರ್ಬೊ ವಿ8 ಎಂಜಿನ್ ಹೊಂದಿದೆ. ಕೊಯ್ನಿಂಗ್ ಸೆಗ್ ಸಿಸಿಆರ್ ಮಾಡೆಲ್ ಕೂಡ ಉತ್ಪಾದಿಸುತ್ತದೆ. ಇದೇ ಮಾದರಿಯಲ್ಲಿ ಕಂಪನಿಯು ಅಗೆರಾ ಆವೃತ್ತಿಗಳನ್ನು ಹೊರತಂದಿದ್ದು ವರ್ಷಕ್ಕೆ ಸುಮಾರು 16-18 ಕಾರ್ ಗಳನ್ನು ಉತ್ಪಾದಿಸಲು ನಿರ್ಧರಿಸಿದೆ. ಈ ಕಾರ್ ಗಳನ್ನು ಕೊಯ್ನಿಂಗ್ ಸೆಗ್ ತನ್ನ ಸ್ವೀಡನ್ ನಲ್ಲಿರುವ ಒಂದೇ ಘಟಕದಲ್ಲಿ ನಿರ್ಮಿಸಲಿದೆ. ಕೊಯ್ನಿಂಗ್ ಸೆಗ್ ವಿಶೇಷತೆಯೆಂದರೆ ಇದು ಪ್ರತಿದೇಶಗಳಿಗೆ ತಕ್ಕಂತಹ ಕಾರ್ ಗಳನ್ನು ತಯಾರಿಸುತ್ತದೆ. ಅಲ್ಲಿನ ಸ್ಥಿತಿಗತಿಗಳಿಗೆ ತಕ್ಕಂತೆ ವಾಹನ ನಿರ್ಮಿಸುವುದು ಇದರ ಹೆಗ್ಗಳಿಕೆ. ಉದಾಹರಣೆಗೆ ಬ್ರೆಝಿಲ್ ಗ್ರಾಹಕರಿಗಾಗಿ ಕಂಪನಿಯು ಜೈವಿಕ ಇಂಧನದ ಅಗೆರಾ ಆರ್ ಕಾರನ್ನು ಹೊರತಂದಿತ್ತು.
ಭಾರತದಲ್ಲಿ ಅಗೆರಾ ಆವೃತ್ತಿಗಳ ಮಾರಾಟಕ್ಕಾಗಿ ಸ್ವೀಡನ್ ಕಂಪನಿಯು ರಾಹುಲ್ ಭಾಟಿಯಾ ನೇತೃತ್ವದ ಇಂಟರ್ ಗ್ಲೋಬ್ ಎಂಟರ್ ಪ್ರೈಸಸ್ ನೊಂದಿಗೆ ಸಹಭಾಗಿತ್ವ ಮಾಡಿಕೊಂಡಿದೆ. ಇಂಟರ್ ಗ್ಲೋಬ್ ಇಂಡಿಗೊ ವಿಮಾನ ವನ್ನೂ ನಡೆಸುತ್ತಿದೆ. ಈ ಕಾರ್ ಗಳನ್ನು ಯಾವುದೇ ಡೀಲರ್ ಷಿಪ್ ನೆರವಿಲ್ಲದೇ ಮಾರಾಟ ಮಾಡುವುದಾಗಿ ಇಂಟರ್ ಗ್ಲೋಬ್ ಮುಖ್ಯಕಾರ್ಯನಿರ್ವಹಣಾಧಿಕಾರಿ ನಿಗೆಲ್ ಎ ಹಾರ್ ವುಡ್ ಹೇಳಿದ್ದಾರೆ.
ಕೊಯ್ನಿಂಗ್ ಸೆಗ್ ಅಲ್ಲದೇ ಇನ್ನಷ್ಟು ಹೈಎಂಡ್ ಲಕ್ಷುರಿ ಕಾರ್ ಮಾರಾಟ ಮಾಡಲು ಇಂಟರ್ ಗ್ಲೋಬ್ ಯೋಜಿಸಿದೆ. ಇತರ ಮಾದರಿಗಳಾದ ಗುಂಪಾರ್ಟ್ ಅಪೊಲೊ, ಜಾಗ್ವಾರ್ ತದ್ರುಪಿಯಾದ ನೊಸ್ಟಾಲಜಿಯಾ ಮತ್ತು ದೆರೊಂಡಾ ರೇಸ್ ಕಾರ್ ಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲು ಇಂಟರ್ ಗ್ಲೋಬ್ ನಿರ್ಧರಿಸಿದೆ. ಇದರೊಂದಿಗೆ ಜಗತ್ತಿನ ಅತ್ಯಂತ ವೇಗದ ಬೈಕ್ ಗಳಾದ ವೈರಸ್ ಮತ್ತು ಹೊಲಿಸ್ಟಾರ್ ಮಾಡೆಲ್ ಗಳನ್ನು ಕೂಡ ಭಾರತಕ್ಕೆ ತರಲಿದೆ.


Click it and Unblock the Notifications








