ಸುನಾಮಿ ಪರಿಣಾಮ: ಭಾರತದ ಉತ್ಪಾದನೆಗೆ ಹೋಂಡಾ ಕೋಕ್!

Honda Motors
ಮುಂದಿನ ತಿಂಗಳಿನಿಂದ ಭಾರತದಲ್ಲಿ ತಾತ್ಕಾಲಿಕವಾಗಿ ವಾಹನ ಉತ್ಪಾದನೆ ಸ್ಥಗಿತಗೊಳಿಸುವುದಾಗಿ ಹೋಂಡಾ ಮೋಟರ್ಸ್ ಪ್ರಕಟಿಸಿದೆ. ಜಪಾನಿನಲ್ಲಿ ಸಂಭವಿಸಿದ ಭೂಕಂಪ ಮತ್ತು ಸುನಾಮಿಯಿಂದ ಬಿಡಿಭಾಗಗಳ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿರುವುದೇ ಇದಕ್ಕೆ ಕಾರಣ.

ಹೋಂಡಾ ಮೋಟರ್ಸ್ ಭಾರತದ ಸಿಯೆಲ್ ಗ್ರೂಪ್ ನೊಂದಿಗೆ ಇಲ್ಲಿ ಜಂಟಿ ಉದ್ಯಮ ಹೊಂದಿದೆ. ಗ್ರೇಟರ್ ನೋಯ್ಡಾದಲ್ಲಿರುವ ತನ್ನ ಘಟಕದಲ್ಲಿ ಕಂಪನಿಯು ವರ್ಷಕ್ಕೆ ಸುಮಾರು ಒಂದು ಲಕ್ಷ ವಾಹನಗಳನ್ನು ಉತ್ಪಾದಿಸುತ್ತಿದೆ. "ಏಪ್ರಿಲ್ ಅಂತ್ಯದವರೆಗೆ ನಾವು ಉತ್ಪಾದನೆ ಮುಂದುವರೆಸಲಿದ್ದೇವೆ. ನಂತರ ಸ್ವಲ್ಪ ದಿನ ವಾಹನ ಉತ್ಪಾದನೆಯನ್ನು ನಿಲ್ಲಿಸಲಿದ್ದೇವೆ. ಬಿಡಿಭಾಗಗಳ ಪೂರೈಕೆ ಸಂಬಂಧಿತ ಸಮಸ್ಯೆಗಳಿಂದ ಪಾರಾಗಲು ಕಂಪನಿಯು ಈ ನಿರ್ಧಾರಕ್ಕೆ ಬಂದಿದೆ" ಎಂದು ಹೋಂಡಾ ಸಿಯೆಲ್ ಕಾರ್ಸ್ ಇಂಡಿಯಾ ಉಪಾಧ್ಯಕ್ಷರು ಹೇಳಿದ್ದಾರೆ.

ಈಗ ಕಂಪನಿಯ ಉತ್ಪಾದನೆಯು ಕಡಿಮೆಯಾಗಿದ್ದು ಪ್ರತಿತಿಂಗಳು ಸುಮಾರು 5 ಸಾವಿರದಷ್ಟು ವಾಹನಗಳನ್ನು ನೋಯ್ಡಾ ಘಟಕದಲ್ಲಿ ಉತ್ಪಾದಿಸುತ್ತಿದೆ. ಕಂಪನಿಯು ಎಂಜಿನ್ ಸೇರಿದಂತೆ ಹೆಚ್ಚಿನ ಬಿಡಿಭಾಗಗಳನ್ನು ಜಪಾನಿನಿಂದ ಆಮದು ಮಾಡಿಕೊಳ್ಳುತ್ತಿರುವುದರಿಂದ ಈಗ ಪೂರೈಕೆಯ ಕೊರತೆಯನ್ನು ಎದುರಿಸುತ್ತಿದೆ.

More from DriveSpark

Article Published On: Friday, April 1, 2011, 17:28 [IST]
English summary
Due to massive twin disaster in Japan, Honda Motors announced to temporarily cut the production output of vehicles in India as from the month of May the supply of car components is limited.
Read more on ಕಾರು car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+