ಸಂಚಾರಿ ವಿಶ್ವಕಪ್: ಇದು ಕ್ರಿಕೆಟ್ ಪ್ರೇಮಿಗಳ "ಕಾರು"ಬಾರು

World Cup car
ಭಾರತ ಶ್ರೀಲಂಕಾ ಮುಖಾಮುಖಿಯಾಗಲು ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಪಾಕಿಸ್ತಾನವನ್ನು ಭಾರತ ಸೋಲಿಸಿದೆ. ಭಾರತ ಫೈನಲ್ ಬಾಗಿಲಲ್ಲಿ ಬಂದು ನಿಂತಿದೆ. ಇದನ್ನೆಲ್ಲ ನೋಡುತ್ತಿದ್ದಾಗ ಕ್ರಿಕೆಟ್ ಪ್ರೇಮಿಗಳು ಸುಮ್ಮಗೆ ಕುಳಿತುಕೊಳ್ಳಲು ಹೇಗೆ ಸಾಧ್ಯ? ತಮ್ಮ ಉತ್ಕಟ ಕ್ರಿಕೆಟ್ ಪ್ರೇಮವನ್ನು ಹೊರಹಾಕಲು ಹಲವು ವಿಶೇಷವಾದ ಮತ್ತು ವಿಚಿತ್ರವಾದ ಹಾದಿಗಳನ್ನು ಹಲವರು ಅನುಸರಿಸುವುದುಂಟು. ಹೈದ್ರಾಬಾದ್ ನ ಒಂದಿಷ್ಟು ಉತ್ಸಾಹಿ ಯುವಕರು ಮಾಡಿದ್ದೇ ಬೇರೆ. ಅವರು ಐಸಿಸಿ ವಲ್ಡ್ ಕಪ್ ಮಾದರಿಯ ಮೂರು ಚಕ್ರದ ಗಾಡಿಯೊಂದನ್ನು ರಚಿಸಿದ್ದಾರೆ.

"ವಿಶ್ವಕಪ್ ಕಾರ್ ನಿರ್ಮಾಣಕ್ಕಾಗಿ ಸುಮಾರು 16 ಜನರು ಕೆಲಸ ಮಾಡಿದ್ದಾರೆ. ಈ ಮೂರು ಚಕ್ರದ ಕಾರ್ ಪ್ರತಿಗಂಟೆಗೆ ಸುಮಾರು 60ರಿಂದ 70 ಕಿ.ಮೀ. ವೇಗದಲ್ಲಿ ಸಾಗಬಲ್ಲದು. ಈ ಕಾರ್ ಮೂಲಕ ಒಂದಿಷ್ಟು ಮಂದಿ ಭಾರತ ಪ್ರವಾಸ ಹೊರಟಿದ್ದಾರೆ" ಎಂದು ಈ ಕಾರ್ ತಯಾರಿಕರಾದ ಕೆ ಸುಧಾಕರ್ ಹೇಳಿದ್ದಾರೆ.

ಇದನ್ನು ಅವರು ಕಾರೆಂದು ಕರೆದರೂ ನೋಡಲು ಸಂಚಾರಿ ವಿಶ್ವಕಪ್ ನಂತಿದೆ. ವಿಶ್ವಕಪ್ ರಥ ಅಂತಲೂ ಇದನ್ನು ಕರೆಯಬಹುದು. ಇದಕ್ಕೆ ಆಟೋ ರಿಕ್ಷಾದ ಎಂಜಿನ್ ಬಳಸಲಾಗಿದೆ. ಇಂಥಹ ಕಾರ್ ತಯಾರಿಸೋ ಹುಚ್ಚು ಅವರಿಗೆ ಇದೇ ಮೊದಲಲ್ಲ. 2003ರಲ್ಲಿ ನಡೆದ ವಿಶ್ವಕಪ್ ಸಮಯದಲ್ಲಿ ಕ್ರಿಕೆಟ್ ಬಾಲ್ ತರಹದ ಕಾರ್ ತಯಾರಿಸಿದ್ದರಂತೆ. ಏನಾಗಲಿ ಮುಂದೆ ಸಾಗು ನೀ ಅಂತ ಸಂಚಾರಿ ವಿಶ್ವಕಪ್ ಸಾಗುತ್ತಿದೆ.

More from DriveSpark

Article Published On: Friday, April 1, 2011, 9:47 [IST]
English summary
Noted car designer K. Sudhakar has built a car resembling the ICC Cricket World Cup 2011 trophy. The World Cup car is a single-seater moving on three wheels. It is powered by a 150 CC engine and the car’s top speed is 70 Kmph.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+