ಭಾರತದ ಕ್ರಿಕೆಟಿಗರಲ್ಲಿ ಎಷ್ಟೆಷ್ಟು ಕಾರುಗಳಿವೆ ಗೊತ್ತಾ?

Sachin Tendulkar
ವಿಶ್ವಕಪ್ ನಲ್ಲಿ ಶ್ರೀಲಂಕಾವನ್ನು ಭಾರತ ಸೋಲಿಸಿದರೆ ಪ್ರತಿ ಆಟಗಾರರಿಗೂ ಹ್ಯುಂಡೈ ವರ್ನಾ ಕೊಡುವುದಾಗಿ ಹ್ಯುಂಡೈ ಮೋಟರ್ಸ್ ಇಂಡಿಯಾ ಲಿಮಿಟೆಡ್ ಹೇಳಿದ್ದು ಲೇಟೆಸ್ಟ್ ಸುದ್ದಿ. ಕ್ರಿಕೆಟಿಗರಿಗೂ ಕಾರಿಗೂ ನಂಟು ಇಂದು ನಿನ್ನೆಯದ್ದಲ್ಲ. ಇವರೆಲ್ಲ "ಮ್ಯಾನ್ ಆಫ್ ಸೀರಿಸ್", "ಮ್ಯಾನ್ ಆಫ್ ಮ್ಯಾಚ್", "ಬೆಸ್ಟ್ ಬ್ಯಾಟ್ಸ್ ಮ್ಯಾನ್" ಇತ್ಯಾದಿ ಬಿರುದುಗಳೊಂದಿಗೆ ಕಾರ್ ಬೈಕ್ ಗಳನ್ನು ಗಿಫ್ಟಾಗಿ ಪಡೆಯುತ್ತಾರೆ. ಕೊಡುಗೆಯಾಗಿ ಸಿಕ್ಕ ಕಾರುಗಳು ಮತ್ತು ತಾವೇ ಆಸಕ್ತಿ ವಹಿಸಿ ಖರೀದಿಸಿದ ಕಾರುಗಳು ಸೇರಿದಂತೆ ನಮ್ಮ ದೇಶದ ಹೆಮ್ಮೆಯ ಕ್ರಿಕೆಟ್ ಆಟಗಾರರ ಗ್ಯಾರೇಜ್ ನಲ್ಲಿ ಸಾಕಷ್ಟು ಕಾರುಗಳಿವೆ.

ವಿಶ್ವಕಪ್ ಕ್ರಿಕೆಟ್ ನಲ್ಲಿ ಇಂದು ಭಾರತ ಮತ್ತು ಶ್ರೀಲಂಕಾ ಫೈನಲ್ ಪಂದ್ಯ ನಡೆಯಲಿದೆ. ಇಲ್ಲಿ ಸಚಿನ್ ನೂರನೇ ಶತಕ ಬಾರಿಸಬಹುದೆಂಬ ನಿರೀಕ್ಷೆಯಲ್ಲಿ ಕ್ರಿಕೆಟ್ ಪ್ರೇಮಿಗಳಿದ್ದಾರೆ. ಇಂತಹ ಮಾಸ್ಟರ್ ಬಾಸ್ಟರ್ ತೆಂಡೂಲ್ಕರ್ ಗೆ ಕಾರುಗಳೆಂದರೆ ತುಂಬಾ ಇಷ್ಟವಂತೆ. ಇವರ ಮೊದಲ ಕಾರ್ ಮಾರುತಿ 800 ಆಗಿತ್ತು. ಈಗ ಸಚಿನ್ ಬಳಿ ಫೆರಾರಿ ಮತ್ತು ಬಿಎಂಡಬ್ಲ್ಯು ಕಾರ್ ಗಳಿವೆ. 29ನೇ ಟೆಸ್ಟ್ ಶತಕ ಪಡೆದಾಗ ಫಿಯೆಟ್ ಕಂಪನಿ ಇವರಿಗೆ ಫೆರಾರಿ 360 ಕಾರನ್ನು ಉಡುಗರೆಯಾಗಿ ನೀಡಿತ್ತು. ಮರ್ಸಿಡಿಸ್ ಬೆಂಝ್ ಮತ್ತು ಒಪೆಲಾ ಕಾರ್ ಗಳು ಇವರಲ್ಲಿದೆ.

ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಬಳಿ ಕೆಲವು ಕಾರುಗಳಿವೆ. ಧೋನಿ ಬಳಿಯಲ್ಲಿರುವುದು ಹಮ್ಮರ್ ಮತ್ತು ಮಿತ್ಸುಬಿಸಿ ಪಜೆರೊ ಕಾರ್. ಕೇವಲ ಕಾರ್ ಮಾತ್ರವಲ್ಲದೇ ಬೈಕ್ ಕೂಡ ಇವರಿಗೆ ಇಷ್ಟ. ಹರ್ಲಿ ಡೇವಿಡ್ ಸನ್, ಯಮಾಹ 650 ಸ್ಪೋರ್ಟ್ಸ್ ಬೈಕ್, ಕವಾಸಕಿ ನಿಂಝಾ ಮುಂತಾದ ಬೈಕ್ ಧೋನಿ ಬಳಿಯಿವೆ.

ಹರ್ಬಜನ್ ಸಿಂಗ್ ಕಾರ್ ಸ್ಟೋರಿ ನೀವು ಮರೆತಿರಲಿಕ್ಕಿಲ್ಲ. ಅವರಿಗೆ ಹಮ್ಮರ್ ಅಂದ್ರೆ ಇಷ್ಟ. ಇಂಗ್ಲೆಂಡಿನಿಂದ ಸುಮಾರು 70 ಲಕ್ಷ ರೂಪಾಯಿ ದರದ ಹಮ್ಮರ್ ಕಾರ್ ನ್ನು ಆಮದು ಮಾಡಿಕೊಂಡಿದ್ದರು. ಆಮದು ಸುಂಕ ಇತ್ಯಾದಿಗಳೆಲ್ಲ ಸೇರಿ ಅದರ ದರ ಒಂದು ಕೋಟಿ ರೂ.ಗಿಂತಲೂ ಹೆಚ್ಚಾಗಿತ್ತು. ಆಮೇಲೆ ನಂಬರ್ ಇಲ್ಲದೇ ಚಲಾಯಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಹರ್ಭಜನ್ ಸಿಂಗ್, 3 ಸಾವಿರ ರುಪಾಯಿ ದಂಡ ತೆತ್ತಿದ್ದರು. ಹರ್ಬಜನ್ ಬಳಿಯಲ್ಲಿ ಫೋರ್ಡ್ ಎಂಡೊವರ್ ಕಾರ್ ಕೂಡ ಇದೆ.

ಯುವರಾಜ್ ಸಿಂಗ್ ಬಿಎಂಡಬ್ಲ್ಯು ಎಂ-5, ಬಿಎಂಡಬ್ಲ್ಯು ಎಂ 3 ಕಾರ್ ಓನರ್. ಮೆರ್ಕ್, ಪೋರ್ಷ್ 911 ಕಾರ್ ಕೂಡ ಸಿಂಗ್ ಬಳಿಯಲ್ಲಿದೆ. ಅನಿಲ್ ಕುಂಬ್ಲೆ ಫೋರ್ಡ್ ಎಂಡೊವರ್ ಕಾರ್ ಹೊಂದಿದ್ದಾರೆ. ರಾಹುಲ್ ಡ್ರಾವಿಡ್ ಹ್ಯುಂಡೈ ಟಾಕ್ಸ್ ನ್ ಕಾರ್ ಮೂಲಕ ಹ್ಯಾಪಿ ಡ್ರೈವಿಂಗ್ ಮಾಡಿದರೆ, ವಿರೇಂದ್ರ ಸೆಹ್ವಾಗ್ ಬಿಎಂಡಬ್ಲ್ಯು 5 ಸೀರಿಸ್ ಕಾರ್ ಮೂಲಕ ಸವಾರಿ ಮಾಡುತ್ತಾರೆ.

ಶ್ರಿಶಾಂತ್ ಹೋಂಡಾ ಸಿವಿಕ್ ಕಾರ್ ಹೊಂದಿದ್ದಾರೆ. ಆದರೆ ಇರ್ಫಾನ್ ಪಠಾನ್ ಗೆ ಐಷಾರಾಮಿ ಕಾರ್ ಮೇಲೆ ಅಂತಹ ಮೋಹ ಏನಿಲ್ಲ. ಸದ್ಯ ಸ್ಕಾರ್ಪಿಯೊ ಕಾರ್ ಮೂಲಕ ಹ್ಯಾಪಿಯಾಗಿದ್ದಾರೆ. ಬೌಲರ್ ಪ್ರವೀಣ್ ಕುಮಾರ್ ಫೋರ್ಡ್ ಎಂಡೊವರ್ ಹೊಂದಿದ್ದಾರೆ. ಗಂಗೂಲಿ ಬಳಿ ಮರ್ಸಿಡಿಸ್, ಇಶಾಂತ್ ಶರ್ಮಾ ಬಳಿ ಹೋಂಡಾ ಸಿಟಿ ಕಾರಿದೆ.

ಹೆಚ್ಚಿನ ಕ್ರಿಕೆಟ್ ತಾರೆಗಳಿಗೆ ಬಿಎಂಡಬ್ಲ್ಯು ಸೀರಿಸ್ ಕಾರುಗಳಿಷ್ಟ. ಗೌತಮ್ ಗಂಭೀರ್ ಬಿಎಂಡಬ್ಲ್ಯು ಅಂದ್ರೆ ಫೇವರಿಟ್ ಕಾರಂತೆ. ಗಂಭೀರ್ ಸದ್ಯ ಹೊಂದಿರುವುದು ಸ್ಯಾಂಟ್ರೊ, ಟೊಯೊಟೊ ಕರೊಲಾ ಮತ್ತು ಮಾರುತಿ ಎಸ್ ಎಕ್ಸ್ 4 ಕಾರ್ ಗಳನ್ನು. ರೋಹಿತ್ ಶರ್ಮಾ ಅವರಿಗೆ ಸ್ಕೋಡಾ ಲೌರ ಮತ್ತು ಬಿಎಂಡಬ್ಲ್ಯು ಕಾರ್ ಅಂದ್ರೆ ಇಷ್ಟವಂತೆ.

More from DriveSpark

Article Published On: Saturday, April 2, 2011, 10:53 [IST]
English summary
Now Hyundai offered Team India players new Verna car that if they win World Cup 2011. Indian Cricketers are known for their craze for cars. The collection of master blaster Sachin Tendulkar is not only the largest in numbers but also the best in genre. Here is list of Cars Indian Cricketers Owned.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+