5.1 ಕೋಟಿ ರೂ. ಕಾರ್, ಮತ್ತೆ ಮೆಬಾಕ್ ದರ್ಬಾರ್

ಮೆಬಾಕ್ ಎನ್ನುವುದು ವಾಹನ ಲೋಕದ ಅಚ್ಚರಿ. ಸಾಮಾನ್ಯರ ಕೈಗೆ ನಿಟುಕುವಂತದ್ದಲ್ಲ. ಇದರ ದರ ಕೇಳಿಯೇ ಹೆಚ್ಚಿನವರು ಬೆಚ್ಚಿ ಬೀಳುತ್ತಾರೆ. ಮರ್ಸಿಡಿಸ್ ಬೆಂಝ್ ಮೆಬಾಕ್ ದರ ಸುಮಾರು 5.1 ಕೋಟಿ ರೂಪಾಯಿ. ಇದು ಪ್ರತಿಗಂಟೆಗೆ ಸುಮಾರು 275 ಕಿ.ಮೀ. ವೇಗವನ್ನು ಹೊಂದಿದೆ.
ಭಾರತದಲ್ಲಿ ಸೂಪರ್ ಕಾರ್ ದರ ಖಾಸಗಿ ಜೆಟ್ ವಿಮಾನಕ್ಕೆಹತ್ತಿರದಲ್ಲಿದೆ ಎಂದು ಮರ್ಸಿಡಿಸ್ ಬಂಝ್ ನ ಮುಖ್ಯಕಾರ್ಯನಿರ್ವಾಹಕರು ಮಾರ್ಮಿಕವಾಗಿ ಹೇಳಿದ್ದಾರೆ. ಆದರೆ ದೇಶದಲ್ಲಿ ಇಂತಹ ದುಬಾರಿ ಕಾರ್ ಗೆ ಬೇಡಿಕೆ ಏರಿಕೆ ಕಾಣುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ದೇಶದ 69 ಮಂದಿ ಇದ್ದರು. ಅದಕ್ಕೆ ಕಳೆದ ವರ್ಷ ಮತ್ತೆ ಹೊಸದಾಗಿ 17 ಜನರನ್ನು ಫೋರ್ಬಸ್ ಸಮೀಕ್ಷೆ ಸೇರಿಸಿದೆ.
ಮೆಬಾಕ್ 57 ಎಸ್ ಮತ್ತು 62 ಎಂಬ ಎರಡು ಮೆಬಾಕ್ ಆವೃತ್ತಿಗಳನ್ನು ಮರ್ಸಿಡಿಸ್ ಮಾರಾಟ ಮಾಡುತ್ತಿದೆ. ಜಾಗತಿಕವಾಗಿ ಈಗ ಸುಮಾರು 200 ಮೆಬಾಕ್ ಕಾರ್ ಮಾರಾಟಗೊಂಡಿದೆಯಷ್ಟೇ. ಇದರಲ್ಲಿ ಚೀನಾದಲ್ಲಿ 20 ಮಾರಾಟಗೊಂಡರೆ ಭಾರತದಲ್ಲಿ ಇನ್ನೂ ಒಂದಂಕಿ ದಾಟಿಲ್ಲ.
ಭಾರತದಲ್ಲಿ 2004ರಲ್ಲಿ ಮೆಬಾಕ್ ಬಿಡುಗಡೆಗೊಂಡಿತ್ತು. ಆದರೆ ಆಗ ಇಲ್ಲಿನ ಮಾರುಕಟ್ಟೆ ದುಬಾರಿ ಸೂಪರ್ ಕಾರ್ ಗಳಿಗೆ ಪೂರಕವಾಗಿರಲಿಲ್ಲ ಎಂದು ಕಂಪನಿಯ ಸಿಇಒ ಹೇಳಿದ್ದಾರೆ. ಮೆಬಾಕ್ ಗೆ ಭಾರತದಲ್ಲಿ ಸದ್ಯ ವೋಕ್ಸ್ ವ್ಯಾಗನ್ ನ ಬೆಂಟ್ಲಿ ಮತ್ತು ಬಿಎಂಡಬ್ಲ್ಯುನ ರೋಲ್ಸ್ ರಾಯ್ಸ್ ಪ್ರತಿಸ್ಪರ್ಧಿ ಕಾರ್ ಗಳಾಗಿವೆ.


Click it and Unblock the Notifications








