ಸ್ಕೋಡಾ ಬೇಸಿಗೆ ಶಿಬಿರ: ಉಚಿತ ಕಾರ್ ಕೇರ್

Skoda yeti
ಇದನ್ನು ಸ್ಕೋಡಾ ಗ್ರಾಹಕರು ಯುಗಾದಿ ಕೊಡುಗೆ ಎಂದು ಭಾವಿಸಿಕೊಳ್ಳಬಹುದು. ತಮ್ಮ ಕಾರುಗಳನ್ನು ಈ ತಿಂಗಳಲ್ಲಿ ಚೆಕಪ್ ಮಾಡಲು ದೇಶದ ಗ್ರಾಹಕರಿಗೆ ಸ್ಕೋಡಾ ಮೋಟರ್ಸ್ ಬೇಸಿಗೆ ಶಿಬಿರವೊಂದನ್ನು ಆಯೋಜಿಸಿದೆ. ಇದು ಸಂಪೂರ್ಣ ಉಚಿತವಾಗಿದ್ದು, ಗ್ರಾಹಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕಂಪನಿ ತಿಳಿಸಿದೆ. ಇದು ಈ ಏಪ್ರಿಲ್ 30ರವರೆಗೆ ಮಾತ್ರ.

ದೇಶದಲ್ಲಿ ಐಷಾರಾಮಿ ಕಾರು ತಯಾರಿಕಾ ಕಂಪನಿ ಸ್ಕೋಡಾದ ಕಾರುಗಳನ್ನು ಹೊಂದಿರುವವರು ಉಚಿತವಾಗಿ ಚೆಕಪ್ ಮಾಡಿಸಿಕೊಳ್ಳಬಹುದು. ಏರ್ ಕಂಡಿಷನರ್, ಎಂಜಿನ್, ಸ್ಟೇರಿಂಗ್ ,ಎಲೆಕಟ್ರಿಕಲ್ ಸಿಸ್ಟಮ್, ಟೈರ್ ಸೇರಿದಂತೆ ಸ್ಕೋಡಾ ಕಾರುಗಳ 16 ಪಾಯಿಂಟ್ ಗಳನ್ನು ಕಂಪನಿಯು ಉಚಿತವಾಗಿ ಪರೀಕ್ಷಿಸಲಿದೆ. ಈ ಬೇಸಿಗೆ ಶಿಬಿರದಲ್ಲಿ ಸುಮಾರು 20 ಸಾವಿರ ಸ್ಕೋಡಾ ಕಾರುಗಳನ್ನು ಚೆಕಪ್ಪು ಮಾಡೋ ಗುರಿಯನ್ನು ಕಂಪನಿ ಹೊಂದಿದೆ.

ಇದಕ್ಕೂ ಹಿಂದೆ ಕಂಪನಿಯು ಮಾನ್ಸೂನ್ ಕಾರ್ ಕೇರ್, ಪೊಲ್ಯುಷನ್ ಚೆಕಪ್ಪ್ ಕ್ಯಾಂಪ್ ಮತ್ತು ಫೆಸ್ಟಿವಲ್ ಕ್ಯಾಂಪ್ ಗಳನ್ನು ಆಯೋಜಿಸಿತ್ತು. ಕಾರಿನಲ್ಲಿ ಕಾಲಕಾಲಕ್ಕೆ ತಲೆದೂರುವ ಸಮಸ್ಯೆಗಳಿಂದ ಗ್ರಾಹಕರಿಗೆ ಮುಕ್ತಿ ನೀಡಲು ಕಂಪನಿಯು ಇಂತಹ ಶಿಬಿರಗಳನ್ನು ಆಯೋಜಿಸುತ್ತಿದೆ. "ಬೇಸಿಗೆ ಶಿಬಿರದಲ್ಲಿ ಕಂಪನಿಯು ಉಚಿತವಾಗಿ ಕಾರಿನ 16 ಪಾಯಿಂಟ್ ಗಳನ್ನು ಪರೀಕ್ಷೆ ಮಾಡಲಿದೆ. ಇದರಿಂದ ಕಾರಿನ ಕಾರ್ಯಕ್ಷಮತೆ ಮತ್ತಷ್ಟು ಹೆಚ್ಚಾಗಲಿದೆ" ಎಂದು ಸ್ಕೋಡಾ ಆಟೋ ಇಂಡಿಯಾದ ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ನಿರ್ದೇಶಕ ಥೋಮಸ್ ಕೆಲ್ ಹೇಳಿದ್ದಾರೆ.

ಫೋರ್ಡ್ ಮಾರಾಟ ಶೇ. 97ರಷ್ಟು ಹೆಚ್ಚಳ: 2010-11 ಆರ್ಥಿಕ ವರ್ಷದಲ್ಲಿ ಫೋರ್ಡ್ ಇಂಡಿಯಾ ಸುಮಾರು 1 ಲಕ್ಷ ವಾಹನ ಮಾರಾಟ ಮಾಡಿದ್ದು, ಇದಕ್ಕೂ ಹಿಂದಿನ ವರ್ಷದ ಮಾರಾಟಕ್ಕೆ ಹೋಲಿಸಿದರೆ ಶೇ. 97ರಷ್ಟು ಪ್ರಗತಿ ದಾಖಲಿಸಿದೆ. ಇದರಲ್ಲಿ 2011ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯು ದಾಖಲೆ ಪ್ರಮಾಣದಲ್ಲಿ ಕಾರುಗಳನ್ನು ಮಾರಾಟ ಮಾಡಿದೆ. ಪ್ರಸಕ್ತ ಜನವರಿ ಮಾರ್ಚ್ ಅವಧಿಯಲ್ಲಿ ಕಂಪನಿಯು 29,804 ಯೂನಿಟ್ ಮಾರಾಟ ಮಾಡಿದ್ದು, ಇದಕ್ಕೂ ಹಿಂದಿನ ವರ್ಷದ ಇದೇ ತ್ರೈಮಾಸಿಕದ 15,154 ಯೂನಿಟ್ ಮಾರಾಟಕ್ಕೆ ಹೋಲಿಸಿದರೆ ಶೇ. 97ರಷ್ಟು ಏರಿಕೆ ಕಂಡಿದೆ.

More from DriveSpark

Article Published On: Saturday, April 2, 2011, 14:11 [IST]
English summary
Skoda Auto made an announcement about its new plan of launching a special summer car checkup camp for its Indian customers. The camp will run for the entire month of April till 30th 2011. Ford posts 97 pc growth for quarter ending March, 2011.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+