ಬಜಾಜ್ ಸಣ್ಣ ಕಾರು: ಮುಂದಿನ ವರ್ಷ ರಸ್ತೆಗಿಳಿಯುವ ನಿರೀಕ್ಷೆ

Small Car
ದೇಶದ ರಸ್ತೆಗೆ ಮುಂದಿನ ವರ್ಷ ಸಣ್ಣ ಕಾರೊಂದನ್ನು ಪರಿಚಯಿಸಲು ಬಜಾಜ್ ಆಟೋ ಲಿಮಿಟೆಡ್ ನಿರ್ಧರಿಸಿದೆ. "ಕಂಪನಿಯು ಈಗಾಗಲೇ ಪ್ರೊಟೊಟೈಪ್ ಕಾರು ನಿರ್ಮಿಸಿದ್ದು, ಮುಂದಿನ ವರ್ಷ ರಸ್ತೆಗಿಳಿಯುವ ನಿರೀಕ್ಷೆಯಿದೆ" ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ಹೇಳಿದ್ದಾರೆ. ಕಂಪನಿಯು ಕೆಲವು ದಿನದ ಹಿಂದೆ ಬಜಾಜ್ ಡಿಸ್ಕವರ್ 125 ಸಿಸಿ ಬೈಕ್ ಹೊರತಂದಿತ್ತು.

ದೇಶದಲ್ಲಿ ಸಣ್ಣ ಕಾರೊಂದನ್ನು ಹೊರತರಲು ಕಂಪನಿಯು ಕೆಲವು ವರ್ಷದ ಹಿಂದೆ ರೆನಾಲ್ಟ್ ಎಸ್ಎ ಮತ್ತು ನಿಸ್ಸಾನ್ ನೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿತ್ತು. ಫ್ರೆಂಚ್ ಮತ್ತು ಜಪಾನ್ ಕಂಪನಿಗಳೆರಡು ಬಜಾಜ್ ಸಣ್ಣ ಕಾರಿನ ಬ್ರಾಂಡ್, ಮಾರುಕಟ್ಟೆ, ಮಾರಾಟ ಮತ್ತು ವಿತರಣೆ ಮಾಡಲಿವೆ. ಆದರೆ ಬೈಕ್ ಅಭಿವೃದ್ಧಿಪಡಿಸುವುದು ಮತ್ತು ಉತ್ಪಾದಿಸುವ ಕೆಲಸ ಬಜಾಜ್ ಕಂಪನಿಯದ್ದು ಎಂದು ಅವರು ಹೇಳಿದ್ದಾರೆ.

ನೂತನ ಕಾರನ್ನು ಬಜಾಜ್ ತನ್ನ ಔರಂಗಾಬಾದ್ ಫ್ಯಾಕ್ಟರಿಯಲ್ಲಿ ಉತ್ಪಾದಿಸಲಿದೆ. ಇದೇ ಘಟಕದಲ್ಲಿ ಕಂಪನಿಯು ತನ್ನ ಮೂರು ಚಕ್ರದ ವಾಹನಗಳನ್ನು ಉತ್ಪಾದಿಸುತ್ತಿದೆ. ಭಾರತದ ವಾಹನ ಮಾರುಕಟ್ಟೆಯಲ್ಲಿ ಸಣ್ಣ ಕಾಂಪ್ಯಾಕ್ಟ್ ಕಾರುಗಳ ಪ್ರಾಬಲ್ಯ ಹೆಚ್ಚಾಗುತ್ತಿರುವುದರಿಂದ ಬಜಾಜ್ ಕೂಡ ಈ ಸೆಗ್ಮೆಂಟ್ ಗೆ ಪ್ರವೇಶಿಸಲು ನಿರ್ಧರಿಸಿದೆ. ದೇಶದ ಒಟ್ಟಾರೆ ಕಾರು ಮಾರಾಟದಲ್ಲಿ ಸಣ್ಣ ಕಾರಿನ ಪಾಲು ಶೇಕಡಾ 70ರಷ್ಟಿದೆ.

More from DriveSpark

Article Published On: Tuesday, April 5, 2011, 9:50 [IST]
English summary
Bajaj Auto Ltd. announced launch of its small car for Indian Auto Market in the coming year 2012. Recently Bajaj launched its Discover 125 motorcycle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+