ವಾಹನ ಕಂಪನಿಗಳ ವಾರ್ಷಿಕ ಫಲಿತಾಂಶ ಬಂದಿದೆ...

India Auto Sales March 2011
ಕಳೆದ ತಿಂಗಳಿನಲ್ಲಿ ದೇಶದ ಹೆಚ್ಚಿನ ವಾಹನ ಕಂಪನಿಗಳ ವಾಹನ ಮಾರಾಟ ಭರ್ಜರಿಯಾಗಿಯೇ ಇದೆ. 2010-11ರ ಒಟ್ಟಾರೆ ಆರ್ಥಿಕ ವರ್ಷದ ಮಾರಾಟವೂ ಚೆನ್ನಾಗಿಯೇ ಇದೆ. ಬಡ್ಡಿದರ, ಕಚ್ಚಾ ಸಾಮಾಗ್ರಿಗಳ ದರ ಏರಿಕೆಗಳ ನಡುವೆ ಹೆಚ್ಚಿನ ಕಂಪನಿಗಳು ಮಾರಾಟದಲ್ಲಿ "ಪಾಸ್" ಆಗಿವೆ. ಬೈಕ್ ಮಾರಾಟದಲ್ಲಿ ಹೀರೋ ಹೋಂಡಾ ರಾಂಕ್ ಪಡೆದಿದೆ. ಕಾರ್ ಮಾರಾಟದಲ್ಲಿ ಮಾರುತಿ ಕೂಡ ಹಿಂದೆ ಬಿದ್ದಿಲ್ಲ.

ಮಾರ್ಚ್ ತಿಂಗಳಲ್ಲಿ ಮಾರುತಿ ಸುಜುಕಿ ಸುಮಾರು 1,21,000 ಕಾರು ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 28ರಷ್ಟು ಏರಿಕೆ ಕಂಡಿದೆ. ಕಂಪನಿಯ ದೇಶಿಯ ಮಾರಾಟ 1,10,000 ಯುನಿಟ್ ಗೆ ತಲುಪಿದ್ದು, ಶೇ. 39ರಷ್ಟು ಏರಿಕೆ ದಾಖಲಿಸಿದೆ. ಆಲ್ಟೊ, ವ್ಯಾಗನಾರ್, ಎಸ್ಟಿಲೊ, ಸ್ವಿಫ್ಟ್, ಎಸ್ಟಾರ್ ಮತ್ತು ರಿಟ್ಜ್ ಸೇರಿದಂತೆ ಎ2 ಸೆಗ್ಮೆಂಟ್ ಮಾರಾಟ 78,460 ಯೂನಿಟ್ ಗೆ ತಲುಪಿದ್ದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 43ರಷ್ಟು ಏರಿಕೆ ದಾಖಲಿಸಿದೆ. 2010-11ರ ಏಪ್ರಿಲ್-ಮಾರ್ಚ್ ಅವಧಿಯಲ್ಲಿ ಕಂಪನಿಯ ಒಟ್ಟಾರೆ ಮಾರಾಟ 11.32 ಲಕ್ಷ ಯೂನಿಟ್ ಗೆ ತಲುಪಿದ್ದು, ಇದಕ್ಕೂ ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ. 30ರಷ್ಟು ಪ್ರಗತಿ ದಾಖಲಿಸಿದೆ.

ಕಳೆದ ತಿಂಗಳಿನಲ್ಲಿ ಟೊಯೊಟಾ ಕಿರ್ಲೊಸ್ಕರ್ ಮೋಟರ್ ಸುಮಾರು 9,726 ಯೂನಿಟ್ ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ. 41ರಷ್ಟು ಏರಿಕೆ ದಾಖಲಿಸಿದೆ. ಇದೇ ತಿಂಗಳಲ್ಲಿ ಕಂಪನಿಯು 3,257 ಸೆಡಾನ್ ಕಾರ್ ಟೊಯೊಟಾ ಎಟಿಯೋಸ್ ಮಾರಾಟ ಮಾಡಿದೆ.

ಇದೇ ಅವಧಿಯಲ್ಲಿ ಮಹೀಂದ್ರ ಆಂಡ್ ಮಹೀಂದ್ರ ಸುಮಾರು 17,320 ವಾಹನ ಮಾರಾಟ ಮಾಡಿದ್ದು, ಕಳೆದ ವರ್ಷದ ಮಾರ್ಚ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇಕಡಾ 19ರಷ್ಟು ಏರಿಕೆ ದಾಖಲಿಸಿದೆ. ನಿಸ್ಸಾನ್ ಮೋಟಾರ್ ಸುಮಾರು 2,101 ಕಾರು ಮಾರಾಟ ಮಾಡಿದೆ. ಇದರಲ್ಲಿ ನೂತನ ಹ್ಯಾಚ್ ಬ್ಯಾಕ್ "ನಿಸ್ಸಾನ್ ಮೈಕ್ರಾ" ಮಾರಾಟವೇ 2,101 ಯೂನಿಟ್ ನಷ್ಟಿದೆ. ಸ್ಕೋಡಾ ಕಾರು ಮಾರಾಟ 3,009 ಯೂನಿಟ್ ಗೆ ತಲುಪಿದ್ದು ಶೇ. 65ರಷ್ಟು ಪ್ರಗತಿ ದಾಖಲಿಸಿದೆ.

ಮಾರಾಟದಲ್ಲಿ ಹ್ಯುಂಡೈ ಮೋಟರ್ ಮಾತ್ರ ಜಸ್ಟ್ ಪಾಸ್ ಆಗಿದೆ. ಮಾರ್ಚ್ ತಿಂಗಳಲ್ಲಿ ಕಂಪನಿಯ ಒಟ್ಟಾರೆ ಕಾರ್ ಮಾರಾಟ 55,552 ಯೂನಿಟ್ ಗೆ ತಲುಪಿದ್ದು ಶೇ. 1ರಷ್ಟು ಏರಿಕೆ ಕಂಡಿದೆ. ಕಂಪನಿಯ ದೇಶಿಯ ಮಾರಾಟ 31,822 ಯೂನಿಟ್ ಗೆ ತಲುಪಿದೆ. ಆದರೆ ಹ್ಯುಂಡೈ ಸುಮಾರು 23,526 ಕಾರುಗಳನ್ನು ರಫ್ತು ಮಾಡಿದ್ದು, ಶೇಕಡಾ 0.9ರಷ್ಟು ಏರಿಕೆ ದಾಖಲಿಸಿದೆ.

ದ್ವಿಚಕ್ರ ವಾಹನ ಮಾರುಕಟ್ಟೆಯ ನಾಯಕ ಹೀರೋ ಹೋಂಡಾ ಮಾರ್ಚ್ ನಲ್ಲಿ ಸುಮಾರು 5,15,852 ಯುನಿಟ್ ಮಾರಾಟ ಮಾಡಿದ್ದು, ಕಳೆದ 17 ವರ್ಷಗಳ ಮಾರ್ಚ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಇದು ದಾಖಲೆಯ ಮಾರಾಟವಾಗಿದೆ. ಕಳೆದ ತಿಂಗಳಿನಲ್ಲಿ ಚೆನ್ನೈ ಮೂಲದ ಟಿವಿಎಸ್ ಮೋಟರ್ ಸುಮಾರು 1,91,000 ಯೂನಿಟ್ ಮಾರಾಟ ಮಾಡಿದ್ದು, ಕಳೆದ ವರ್ಷದ ಮಾರ್ಚ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇಕಡಾ 28ರಷ್ಟು ಏರಿಕೆ ದಾಖಲಿಸಿದೆ.

More from DriveSpark

Article Published On: Tuesday, April 5, 2011, 12:51 [IST]
English summary
The recently concluded financial year proved to be a reaping phase for the local players like Maruti, M&M and Hero Honda and the overseas companies like Toyota, Nissan. The sale volume for these companies hit a record mark in the FY 2010-11. Automobile Companies recorded ever best sale volume of monthly basis amidst the rise in input costs and rise in crude oil prices.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+