ಟೊಯೊಟಾ ಕಾರಿನ್ನೂ 20 ಸಾವಿರ ರೂ. ದುಬಾರಿ!

Toyota Kirloskar
ಟೊಯೊಟಾ ಕಾರುಗಳಿನ್ನು ದುಬಾರಿಯಾಗಲಿವೆ. ಟೊಯೊಟಾ ಕಿರ್ಲೊಸ್ಕರ್ ಮೋಟರ್ ನ ಪ್ರಮುಖ ಮಾಡೆಲ್ ಗಳ ದರ ಏರಿಕೆ ಕಾಣಲಿದೆ. ಕಂಪನಿಯ ಜನಪ್ರಿಯ ಬ್ರಾಂಡ್ ಇನ್ನೋವಾಕ್ಕೆ ಇನ್ನು ಮುಂದೆ ಸುಮಾರು 20 ಸಾವಿರ ರೂಪಾಯಿ ಜಾಸ್ತಿ ನೀಡಬೇಕಿದೆ. ಈ ತಿಂಗಳ ಆರಂಭದಿಂದಲೇ ದರ ಏರಿಕೆ ಅನ್ವಯವಾಗಲಿದೆ.

ಇನ್ನು ಮುಂದೆ ಗ್ರಾಹಕರು ಇನ್ನೋವಾ, ಕೊರೊಲಾ ಆಲ್ಟಿಸ್ ಮತ್ತು ಫಾರ್ಚ್ಯುನರ್ ಕಾರಗಳನ್ನು ಖರೀದಿಸಬೇಕಾದರೆ ಈ ಹಿಂದಿನ ದರಕ್ಕಿಂತ ಶೇ. ಒಂದರಿಂದ ಶೇಕಡಾ ಒಂದುವರೆಯಷ್ಟು ಹೆಚ್ಚು ಪಾವತಿಸಬೇಕಿದೆ. ಈ ಹಿಂದೆ ಇನ್ನೋವಾ ಕಾರು ಆವೃತ್ತಿಗಳೆರಡು ಸುಮಾರು 8.27 ಲಕ್ಷ ರೂ. ಮತ್ತು 12.18 ಲಕ್ಷ ರೂ.ಗೆ ದೊರಕುತ್ತಿತ್ತು. ಇವೆರಡು ದರಗಳು ಈಗ 12,557 ರೂ. ಮತ್ತು 18,424 ರೂ. ಏರಿಕೆ ಕಂಡಿದೆ.

ಪೆಟ್ರೊಲ್ ಮತ್ತು ಡೀಸಲ್ ಆವೃತ್ತಿಗಳೆರಡೂ ದುಬಾರಿಯಾಗಿವೆ. ಈಗ ಕೊರೊಲಾ ಆಲ್ಟಿಸ್ ಸುಮಾರು 14,100 ರೂ.ನಿಂದ 17,700 ರೂ. ದುಬಾರಿಯಾಗಿದೆ. ಇವು ಈ ಹಿಂದೆ 11.18 ಲಕ್ಷ ರೂ.ನಿಂದ 14.03 ಲಕ್ಷ ರೂ.ನಲ್ಲಿ ದೊರಕುತ್ತಿತ್ತು. ಸೆಡಾನ್ ಕಾರು ದರಗಳೂ ದುಬಾರಿಯಾಗಿವೆ. ಆಲ್ಟಿಸ್ ಪೆಟ್ರೊಲ್ ಆವೃತ್ತಿ ಖರೀದಿಸಬೇಕಾದರೆ ಗ್ರಾಹಕ ಕೆಲವು ಸಾವಿರ ಹೆಚ್ಚು ಪಾವತಿಸಬೇಕಿದೆ. ಈ ಹಿಂದೆ ಆಲ್ಟಿಸ್ ಕಾರುಗಳು ಸುಮಾರು 10.28 ಲಕ್ಷ ರೂ.ನಿಂದ 14.38 ಲಕ್ಷ ರೂ.ಗೆ ದೊರಕುತ್ತಿತ್ತು. ಇನ್ನು ಇವುಗಳಿಗೆ ಸುಮಾರು 10,400 ರೂ. ನಿಂದ 14,500 ರೂ. ಹೆಚ್ಚು ಪಾವತಿಸಬೇಕಿದೆ.

ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಫಾರ್ಚ್ಯುನರ್ ಸುಮಾರು 20 ಸಾವಿರ ರೂ.ವಿನಷ್ಟು ದುಬಾರಿಯಾಗಿದೆ. ಈ ಹಿಂದೆ ಫಾರ್ಚ್ಯುನರ್ ಕಾರುಗಳು ಸುಮಾರು 19.94 ಲಕ್ಷ ರೂಪಾಯಿಗೆ ದೊರಕುತ್ತಿತ್ತು.

More from DriveSpark

Article Published On: Tuesday, April 5, 2011, 11:16 [IST]
English summary
Toyota Kirloskar Motor announced a hike in the prices of all its major models. The price of Fortuner, the sports utility vehicle, will see a rise by about Rs 20,000. Innova, the MPV will be available at increase prices which will cost about Rs 12,557 and Rs 18,424 more than its earlier prices. Corolla Altis, Fortuner Price also increased.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+