ಅಂದು ರವಿಶಾಸ್ತ್ರಿಗೆ, ಇಂದು ಚೆನ್ನಾಗಿ ಆಡಿದ ಯುವಿಗೆ ಆಡಿ ಕಾರು

ವಿಶ್ವಕಪ್ 2011ರಲ್ಲಿ ಅದ್ಭುತ ಆಲ್ ರೌಂಡರ್ ಆಟದ ಮೂಲಕ ಭಾರತದ ಗೆಲುವಿನ ಅಭಿಯಾನಕ್ಕೆ ಯುವರಾಜ್ ಬೆನ್ನೆಲುಬಾಗಿದ್ದರು. ಮ್ಯಾನ್ ಆಫ್ ಟೂರ್ನಮೆಂಟ್ ಪಡೆದ ಇವರಿಗೆ ಆಡಿ ಇಂಡಿಯಾ ಕಾರೊಂದನ್ನು ಉಡುಗೊರೆಯಾಗಿ ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ. 1985ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತದ ರವಿ ಶಾಸ್ತ್ರಿಗೆ ಆಡಿ 100 ಕಾರನ್ನು ಕಂಪನಿ ನೀಡಿತ್ತು. "ವಿಕ್ಟರಿ ಹೊಡೆಯುವ ಆಟಗಾರರಿಗೆ ಪ್ರೋತ್ಸಾಹ ನೀಡಲು ಆಡಿ ಇಂಡಿಯಾ "ಕಾರ್ ಕೊಡುಗೆ" ನೀಡುವ ಸಂಪ್ರದಾಯವನ್ನು ಮುಂದುವರೆಸಲಿದೆ" ಎಂದು ಕಂಪನಿ ತಿಳಿಸಿದೆ.
ವಿಶ್ವಕಪ್ ನಲ್ಲಿ ಶ್ರೀಲಂಕಾವನ್ನು ಭಾರತ ಸೋಲಿಸಿದಕ್ಕೆ ಪ್ರತಿಯಾಗಿ ಟೀಂ ಇಂಡಿಯಾಕ್ಕೆ ವೆರ್ನಾ ಕಾರನ್ನು ಕೊಡುವುದಾಗಿ ಹ್ಯುಂಡೈ ಮೋಟರ್ಸ್ ಇಂಡಿಯಾ ಕೂಡ ಕೆಲವು ದಿನದ ಹಿಂದೆ ಪ್ರಕಟಿಸಿತ್ತು. "ಮ್ಯಾನ್ ಆಫ್ ಸೀರಿಸ್", "ಮ್ಯಾನ್ ಆಫ್ ಮ್ಯಾಚ್", "ಬೆಸ್ಟ್ ಬ್ಯಾಟ್ಸ್ ಮ್ಯಾನ್" ಇತ್ಯಾದಿ ಬಿರುದುಗಳೊಂದಿಗೆ ಕ್ರಿಕೆಟ್ ಆಟಗಾರರಿಗೆ ಸಾಕಷ್ಟು ವಾಹನಗಳು ದೊರಕುತ್ತವೆ. ಹೀಗಾಗಿ ಅವರ ಗ್ಯಾರೇಜ್ ನಲ್ಲಿ ಸಾಕಷ್ಟು ವಾಹನಗಳು ಸಾಲಾಗಿವೆ.


Click it and Unblock the Notifications








