ಮಹೇಂದ್ರ ಸಿಂಗ್ ಧೋನಿಗೆ ಫೆರಾರಿ 599 ಜಿಟಿಒ...??

Mahendra Singh Dhoni
ವಿಶ್ವಕಪ್ ಗೆದ್ದು ಕೊಟ್ಟ ಟೀಂ ಇಂಡಿಯಾಕ್ಕೀಗ ಉಡುಗೊರೆಗಳ ಮಹಾಪೂರವೇ ಹರಿದುಬರುತ್ತಿವೆ. ವಿಶ್ವಕಪ್ ನಲ್ಲಿ ಅನನ್ಯ ಸಾಧನೆ ಮಾಡಿದ ಆಟಗಾರರಿಗೆ ಏನಾದರೂ ಗಿಫ್ಟ್ ಕೊಡೋಣ ಎಂಬ ಹಂಬಲ ಎಲ್ಲದದ್ದು. ಕರ್ನಾಟಕದ ಮುಖ್ಯಮಂತ್ರಿ ಯುಡಿಯೂರಪ್ಪ ಬಿಡಿಎ ಸೈಟನ್ನೇ ಕೊಡುವುದಾಗಿ ಘೋಷಿಸಿದ್ದಾರೆ. ಗೆದ್ದವರಿಗೆಲ್ಲ ಹ್ಯುಂಡೈ ವರ್ನಾ ಕಾರುಗಳನ್ನು ನೀಡಲು ಹ್ಯುಂಡೈ ನಿರ್ಧರಿಸಿದೆ. ಯುವರಾಜ್ ಸಿಂಗ್ ಗೆ ಆಡಿ ಕಾರು ದೊರಕಲಿದೆ.

ಇವರಲ್ಲಿ ತಂಡದ ನಾಯಕ ಮಹೀಂದ್ರ ಸಿಂಗ್ ಧೋನಿಗೆ ಬಂಪರ್ ಹೊಡೆಯುವ ಸೂಚನೆಗಳಿವೆ. ದೂರದ ಇಟಲಿಯ ಫೆರಾರಿ ಬ್ರಾಂಡ್ ಕಾರೊಂದು ಧೋನಿಗೆ ದೊರಕಲಿದೆಯೆಂಬ ರೂಮರ್ ಸುದ್ದಿಗಳು ನೆಟ್ ಲೋಕದಲ್ಲಿ ಹರಿದಾಡುತ್ತಿದೆ. ಅದರ ಬಾನೆಟ್ ನಲ್ಲಿ ತ್ರಿವರ್ಣ ಧ್ವಜದ ಚಿತ್ರವಿರಲಿದೆಯಂತೆ. ಧೋನಿಗೆ ಕಾರು ನೀಡುವ ಕುರಿತು ಕಂಪನಿ ಇನ್ನೂ ಸ್ಪಷ್ಟಪಡಿಸಿಲ್ಲ.

ಆಸಕ್ತಿದಾಯಕ ವಿಷಯವೆಂದರೆ ಫೆರಾರಿ ತನ್ನ ನೂತನ ಕಾರನ್ನು ಭಾರತದ ಮಾರುಕಟ್ಟೆಗಾಗಿ ವಿಶೇಷವಾಗಿ ರೂಪಿಸಿದೆ. ಅದರಲ್ಲೂ ಈ ಕಾರನ್ನು ಧೋನಿಗಾಗಿ ವಿಶೇಷವಾಗಿ ರೂಪಿಸುತ್ತಿದೆ ಎನ್ನಲಾಗಿದೆ. ಆದರೆ ನೂತನ ಮಾಡೆಲ್ ಇನ್ನೂ ಭಾರತದ ರಸ್ತೆ ಪ್ರವೇಶಿಸಿಲ್ಲ. ಕಂಪನಿ ಈ ಹೊಸ ಕಾರನ್ನೇ ಧೋನಿಗೆ ಉಡುಗೊರೆಯಾಗಿ ನೀಡುವ ನಿರೀಕ್ಷೆಗಳಿವೆ. ಅಂದಹಾಗೇ ಆ ಕಾರಿನ ಹೆಸರು ಫೆರಾರಿ 599 ಜಿಟಿಒ.

ಫೆರಾರಿ 599 ಜಿಟಿಒ ಸ್ಪೋರ್ಟ್ಸ್ ವೆಹಿಕಲ್ ವಿ18 ಎಂಜಿನ್ ಹೊಂದಿದೆ. ಇದು ಅತ್ಯಂತ ವೇಗದ ಕಾರಾಗಿದೆ. ಈ ಸೂಪರ್ ಕಾರು ಪ್ರತಿಗಂಟೆಗೆ ಗರಿಷ್ಠ 335 ಕಿ.ಮೀ. ವೇಗದಲ್ಲಿ ಸಾಗುತ್ತದೆ. ಈ ಕಾರನ್ನು ಭಾರತದ ರಸ್ತೆಗೆ ತಕ್ಕಂತೆ ವಿಶೇಷವಾಗಿ ರೂಪಿಸಲಾಗಿದೆ. ಫೆರಾರಿ 599 ಕಾರುಗಳಿಗೆ ಹೋಲಿಸಿದರೆ ನೂತನ ಫೆರಾರಿ 599 ಜಿಟಿಒ ಕಾರು 100 ಕೆ.ಜಿ. ಕಡಿಮೆ ಭಾರವಿದೆ. ಇದರೊಂದಿಗೆ ಈಗಾಗಲೇ ಆಡಿ ಇಂಡಿಯಾ ಯುವರಾಜ್ ಸಿಂಗ್ ಗೆ ಕಾರೊಂದನ್ನು ನೀಡುವುದಾಗಿ ಪ್ರಕಟಿಸಿದೆ. 2003ರಲ್ಲಿ ಸಚಿನ್ ತೆಂಡೂಲ್ಕರ್ ಕೂಡ ಫಿಯೆಟ್ ನಿಂದ ಫೆರಾರಿ ಕಾರೊಂದನ್ನು ಉಡುಗೊರೆಯಾಗಿ ಪಡೆದಿದ್ದರು.

More from DriveSpark

Article Published On: Wednesday, April 6, 2011, 17:16 [IST]
English summary
There is rumour about Team India captain Mahendra Singh Dhoni will receives A brand new Ferrari 599 GTO India edition. Ferrari 599 GTO sports a V12 engine Car. The supercar has a top speed of 335 kmph. In year 2003, Sachin Tendulkar also got Ferrari as a gift by FIAT.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+