ಅಜಯ್ ದೇವ್ ಗನ್ ಎಂಬ ಸ್ಪೋರ್ಟಿ ಬ್ಯೂಟಿ ಪ್ರೇಮಿ

ಆಸಕ್ತಿದಾಯಕ ವಿಷಯವೆಂದರೆ ಇವರು ಸ್ಪೋರ್ಟಿ ಬ್ಯೂಟಿ ಪ್ರೇಮಿ. ಅಂದ್ರೆ ಇವರಿಗೆ ಸ್ಪೋರ್ಟ್ಸ್ ಕಾರುಗಳೆಂದರೆ ಬಹಳ ಇಷ್ಟವಂತೆ. ಸಾಕಷ್ಟು ಐಷಾರಾಮಿ ಕಾರಿಗಿವರು ಒಡೆಯ. ಇವರಲ್ಲಿ ಮಸೆರೆಟಿ, ಫೆರಾರಿ ಮತ್ತು ಮರ್ಸಿಡಿಸ್ ಸೇರಿದಂತೆ ಲಕ್ಷುರಿ ಕಾರುಗಳು ಸಾಕಷ್ಟಿವೆ. "ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ" ಚಲನಚಿತ್ರ ಬಿಡುಗಡೆಯಂದು ಬಿಎಂಡಬ್ಲ್ಯು ಝಡ್4 ಕಾರನ್ನು ಖರೀದಿಸಿದ್ದರು. ಫಿಲ್ಮ್ ಫೇರ್ ನಿಂದ ಅತ್ಯುತ್ತಮ ನಟನೆಂಬ ಪ್ರಶಸ್ತಿ ಪಡೆದ ಚಿತ್ರ "ನಾಜಯಾಝ್"(1995) ಬಿಡುಗಡೆ ಸಂದರ್ಭದಲ್ಲಿ ಹೋಂಡಾ ಸಿವಿಕ್ ಕಾರೊಂದನ್ನು ಖರೀದಿಸಿದ್ದರು. "ಕಚ್ಚೇ ದಾಗೆ" ಸಿನಿಮಾ ಬಿಡುಗಡೆಯಂದು ಲ್ಯಾಂಡ್ ಕ್ರೂಷರ್ ಕಾರು ಖರೀದಿಸಿದ್ದರು.
ತನ್ನ 40ನೇ ಹುಟ್ಟುಹಬ್ಬದ ಸಂಭ್ರಮಕ್ಕೆ ದೇವ್ ಗನ್ ಅವರು ನಿರ್ದೇಶಕ ಮತ್ತು ಸ್ನೇಹಿತ ರೋಹಿತ್ ಶೆಟ್ಟಿ ಅವರಿಂದ "ಟೊಯೊಟಾ ಸೆಲಿಕಾ"ದ ಪರಿಷ್ಕ್ರತ ಆವೃತ್ತಿಯೊಂದನ್ನು ಉಡುಗೊರೆಯಾಗಿ ಪಡೆದಿದ್ದರು. ನೂತನ ಫಾರ್ಮುಲಾ ಒನ್ ಅವತಾರದಲ್ಲಿ ಈ ಕಾರನ್ನು ಪ್ರಖ್ಯಾತ ಕಾರು ವಿನ್ಯಾಸಗಾರ ರಾನ್ ವಿಜಯ್ ಸುಮಾರು ಮರುವಿನ್ಯಾಸ ಮಾಡಿದ್ದರು. ಅಜಯ್ ದೇವ್ ಗನ್ ಟೇಸ್ಟ್ ಗೆ ತಕ್ಕಂತೆ ಇದನ್ನು ರೂಪಿಸಲು ರಾನ್ ವಿಜಯ್ ಸುಮಾರು ಎರಡು ತಿಂಗಳ ಕಾಲ ಶ್ರಮಪಟ್ಟಿದ್ದರು. ಹೀಗೆ ದೇವ್ ಗನ್ ಗೆ ಕ್ರೀಡಾ ವಾಹನಗಳೆಂದರೆ ಅಚ್ಚುಮೆಚ್ಚು.


Click it and Unblock the Notifications








