ದೇಶದ ರಸ್ತೆಗೆ 1.9 ಕೋಟಿ ರೂಪಾಯಿಯ ಬೆಂಟ್ಲಿ ಕಾರು

2007ರಲ್ಲಿ ಜಾಗತಿಕವಾಗಿ ಸುಮಾರು 10,014 ಬೆಂಟ್ಲಿ ಕಾರುಗಳು ಮಾರಾಟಗೊಂಡಿರುವುದಾಗಿ ಬೂಸ್ಟನ್ ಹೇಳುತ್ತಾರೆ. ಆದರೆ ನಂತರದ ವರ್ಷಗಳಲ್ಲಿ ಕಂಪನಿಯ ಕಾರು ಮಾರಾಟ ಇಳಿಕೆಯತ್ತ ಮುಖ ಮಾಡಿತ್ತು. 2008ರಲ್ಲಿ ಸುಮಾರು 7,400 ಕಾರುಗಳು, 2009ರಲ್ಲಿ 5,500 ಕಾರುಗಳು, 2010ರಲ್ಲಿ ಕೇವಲ 5 ಸಾವಿರ ಬೆಂಟ್ಲಿ ಕಾರುಗಳು ಮಾರಾಟಗೊಂಡಿದ್ದವು. "ಯುರೋಪ್ ಮತ್ತು ಅಮೆರಿಕ ಮಾರುಕಟ್ಟೆಯಲ್ಲಿ ಈಗ ಐಷಾರಾಮಿ ಕಾರುಗಳಿಗೆ ಮಾರುಕಟ್ಟೆ ಸದೃಢಗೊಳ್ಳುತ್ತಿದೆ. ಚೀನಾದಲ್ಲೂ ಬೇಡಿಕೆ ಹೆಚ್ಚುತ್ತಿದೆ. 2011ರ ಅಂತ್ಯಕ್ಕೆ ಒಟ್ಟಾರೆ 7 ಸಾವಿರ ಕಾರುಗಳ ಮಾರಾಟದ ನಿರೀಕ್ಷೆಯಿದೆ" ಎಂದು ಅವರು ಹೇಳಿದ್ದಾರೆ.


Click it and Unblock the Notifications