ಉದ್ಯೋಗಿಗಳಿಂದ ಸಲಹೆ ಪಡೆದರೆ ಕಂಪನಿಗಳಿಗೆ ಲಾಭ

ಸಿಬ್ಬಂದಿ ಸಲಹೆ
ಕಂಪನಿಗಳು ಸಿಬ್ಬಂದಿಗಳಿಂದ ಸಲಹೆ ಸೂಚನೆಗಳನ್ನು ಪಡೆಯುವ ಮೂಲಕ ಸಾಕಷ್ಟು ಹಣ ಉಳಿತಾಯ ಮಾಡಬಹುದು. ಸಿಬ್ಬಂದಿಗಳು ನೀಡುವ ಸಣ್ಣ ಸಣ್ಣ ಸಲಹೆಗಳೂ ಕೂಡ ಕಂಪನಿಗಳ ಲಾಭ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದಂತೆ. ಕಾರ್ಮಿಕರಿಂದ ಸಲಹೆ ಸೂಚನೆಗಳನ್ನು ಪಡೆಯುವ ಪ್ರಕ್ರಿಯೆಯನ್ನು ದೇಶದ ಹೆಚ್ಚಿನ ವಾಹನ ಕಂಪನಿಗಳು ಪಾಲಿಸುತ್ತಿವೆ. ಹೀಗೆ ಸಲಹೆಗಳನ್ನು ಪಡೆಯುವ ಮೂಲಕ ದೇಶದ ಬೃಹತ್ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಕೋಟಿ ಕೋಟಿ ರೂಪಾಯಿ ಉಳಿತಾಯ ಮಾಡಿದೆಯಂತೆ!

"ಉದ್ಯೋಗಿಗಳಿಂದ ನಾವು ಸದಾ ಸಲಹೆ ಸೂಚನೆಗಳನ್ನು ಪಡೆಯುತ್ತಿರುತ್ತೇವೆ. ಇದು ಕೆಲಸಗಾರರ ದಕ್ಷತೆ ಹೆಚ್ಚಿಸಲು ಮತ್ತು ಹಣ ಉಳಿತಾಯ ಮಾಡಲು ನೆರವಾಗುತ್ತಿದೆ" ಎಂದು ಮಾರುತಿ ಸುಜುಕಿ ಇಂಡಿಯಾದ ವ್ಯವಸ್ಥಾಪಕ ಕಾರ್ಯನಿರ್ವಾಹಣಾಧಿಕಾರಿ ಎಸ್ ವೈ ಸಿದ್ದಿಕ್ಕಿ ಹೇಳಿದ್ದಾರೆ. ಕಳೆದ ಆರ್ಥಿಕ ವರ್ಷದಲ್ಲಿ ಎಷ್ಟು ರೂಪಾಯಿ ಉಳಿತಾಯ ಮಾಡಲಾಗಿದೆ ಎಂದು ಅವರು ಸ್ಪಷ್ಟವಾಗಿ ತಿಳಿಸಿಲ್ಲ. ಆದರೆ 2010-11ರಲ್ಲಿ ಕಂಪನಿಯು ಸಿಬ್ಬಂದಿ ಸಲಹೆ ಸೂಚನೆಗಳಿಂದ ಸುಮಾರು 160 ಕೋಟಿ ರೂಪಾಯಿ ಉಳಿತಾಯ ಮಾಡಿದ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಇದಕ್ಕೂ ಹಿಂದಿನ ಆರ್ಥಿಕ ವರ್ಷದಲ್ಲಿ ಕಂಪನಿಯು 200 ಕೋಟಿ ರೂ. ಉಳಿತಾಯ ಮಾಡಿದೆ.

ಮಾರುತಿ ಸುಜುಕಿ ಕಳೆದ ಆರ್ಥಿಕ ವರ್ಷದಲ್ಲಿ ಸಿಬ್ಬಂದಿಗಳಿಂದ ಸುಮಾರು 2.29 ಲಕ್ಷ ಸಲಹೆಗಳನ್ನು ಸ್ವೀಕರಿಸಿತ್ತು. ಇದಕ್ಕೂ ಹಿಂದಿನ ಆರ್ಥಿಕ ವರ್ಷದಲ್ಲಿ 1.29 ಲಕ್ಷ ಸಲಹೆಗಳನ್ನು ಪಡೆಯಲಾಗಿತ್ತು ಎಂದು ಸಿದ್ದಿಕ್ಕಿ ಹೇಳಿದ್ದಾರೆ. "ಸಣ್ಣ ಸಣ್ಣ ಬದಲಾವಣೆ ತರಲು ಸಿಬ್ಬಂದಿ ನೀಡಿದ ಸೂಚನೆಗಳು ಕಂಪನಿಯ ಉಳಿತಾಯದ ಮೇಲೆ ಅತ್ಯುತ್ತಮ ಪರಿಣಾಮ ಬೀರಿವೆ. ಇದರಲ್ಲಿ ಹೆಚ್ಚು ಸಕ್ರಿಯವಾಗಿ ಭಾಗವಹಿಸಿದ ಸಿಬ್ಬಂದಿಗಳಿಗೆ ಬಹುಮಾನ ಕೂಡ ನೀಡಲಾಗಿದೆ" ಎಂದು ಅವರು ಹೇಳಿದ್ದಾರೆ.

More from DriveSpark

Article Published On: Friday, April 8, 2011, 10:29 [IST]
English summary
India's largest car maker Maruti Suzuki was able to save about Rs 160 crore in 2010—11 by implementing suggestions given by its workers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+