ಫಿಯೆಸ್ಟಾ ದುಬಾರಿಯಲ್ಲ, ರಸ್ತೆಗಿಳಿದಿದೆ ಹೊಸ ಕ್ಲಾಸಿಕ್ ಫಿಯೆಸ್ಟಾ

New Fiesta Classic
ಫಿಯೆಸ್ಟಾ ಕಾರುಗಳು ಒಂದಿಷ್ಟು ದುಬಾರಿ ಅಂದುಕೊಂಡಿದ್ದವರಿಗೆ ಸಿಹಿಸುದ್ದಿ. ಫೋರ್ಡ್ ಇಂಡಿಯಾ ನೂತನ ಕ್ಲಾಸಿಕ್ ಫಿಯೆಸ್ಟಾ ಆವೃತ್ತಿಯನ್ನು ಪರಿಚಯಿಸಿದ್ದು, ಇದು ಹಳೆಯ ಕಾರುಗಳಿಗಿಂತ ಅಗ್ಗದ ಕಾರಾಗಿದೆ. ಇದರ ದರ ಸುಮಾರು ಐದುವರೆ ಲಕ್ಷ ರೂಪಾಯಿಂದ ಆರಂಭವಾಗುತ್ತದೆ.ನೂತನ ಕ್ಲಾಸಿಕ್ ಆವೃತ್ತಿ ಪೆಟ್ರೊಲ್ ಮತ್ತು ಡೀಸಲ್ ಎಂಜಿನ್ ಗಳಲ್ಲಿ ದೊರಕುತ್ತಿದೆ. ಈ ವರ್ಷ ಹೊರತಂದ ಗ್ಲೋಬಲ್ ಫಿಯೆಸ್ಟಾ ಕಾರಿನೊಂದಿಗೆ ಕ್ಲಾಸಿಕ್ ಕಾರು ಯಾವುದೇ ಪೈಪೋಟಿ ನಡೆಸುವುದಿಲ್ಲವೆಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

ಸಿಎಲ್ಎಕ್ಸ್1, ಎಸ್ಎಕ್ಸ್1 ಮತ್ತು ಎಲ್ಎಕ್ಸ್1 ಕ್ಲಾಸಿಕ್ ಪಿಯೆಸ್ಟಾ ಕಾರುಗಳ ಪೆಟ್ರೊಲ್ ಮತ್ತು ಡೀಸಲ್ ಆವೃತ್ತಿಗಳ ದರ ಕ್ರಮವಾಗಿ 5.58 ಲಕ್ಷ ರೂ. ಮತ್ತು 6.05 ಲಕ್ಷ ರೂಪಾಯಿ ಆಗಿದೆ. ನೂತನ ಕ್ಲಾಸಿಕ್ ಫಿಯೆಸ್ಟಾ ಕಾರಿನಲ್ಲಿ ಹಳೆಯ ಫಿಯೆಸ್ಟಾ ಕಾರುಗಳ ಹೆಚ್ಚಿನ ಫೀಚರ್ ಗಳು ಇರಲಿವೆ. ಕಂಪನಿಯು ಕಳೆದ ವರ್ಷ ಮಾರಾಟದಲ್ಲಿ ಶೇಕಡಾ 15ರಷ್ಟು ಪ್ರಗತಿ ಕಂಡಿರುವುದಾಗಿ ಅವರು ಹೇಳಿದ್ದಾರೆ.

ಕಂಪನಿಯು ಈ ವರ್ಷ ಸುಮಾರು 70 ದೇಶಗಳಿಗೆ ಕಾರುಗಳನ್ನು ರಫ್ತು ಮಾಡಿದೆ ಎಂದರು. ಮೆಕ್ಸಿಕೊ, ಕೆರಿಬಿಯನ್ ಮತ್ತು ಉತ್ತರ ಆಫ್ರಿಕಾ ಮಾರುಕಟ್ಟೆಗಳಿಗೆ ಈ ವರ್ಷ ಪ್ರವೇಶಿಸಲಿದ್ದು, ದಕ್ಷಿಣ ಆಫ್ರಿಕಾ ಮಾರುಕಟ್ಟೆಗಳಿಗೆ ಈಗಾಗಲೇ ಕಾರುಗಳನ್ನು ಪರಿಚಯಿಸಲಾಗಿದೆ.ಭಾರತದ ವಾಹನ ಮಾರುಕಟ್ಟೆಯಲ್ಲಿ ನೂತನ ಫಿಯೆಸ್ಟಾ ಕ್ಲಾಸಿಕ್ ಕಾರುಗಳ ಮಾರುಕಟ್ಟೆಗೆ ಹೆಚ್ಚಿಸಲು ಕಂಪನಿ ಪ್ರಯತ್ನಿಸಲಿದೆ ಮತ್ತು ಈ ವರ್ಷ ಒಟ್ಟಾರೆ ಮಾರಾಟದಲ್ಲಿ ಶೇ. 31ರಷ್ಟು ಏರಿಕೆ ಕಾಣುವ ನಿರೀಕ್ಷೆಯನ್ನು ಫೋರ್ಡ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರು ವ್ಯಕ್ತಪಡಿಸಿದ್ದಾರೆ.

More from DriveSpark

Article Published On: Friday, April 8, 2011, 12:16 [IST]
English summary
The success run of its Fiesta mid-size sedan has made Ford India to launch a cheaper version of the vehicle Fiesta Classic for Rs5.58 lakhs in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+