ಬಾಳೆಹಣ್ಣು, ಪೈನಾಪಲ್ ಕಾರು: ವಿಜ್ಞಾನಿಗಳಿಂದ ಮ್ಯಾಜಿಕ್!

Banana Pineapple Car
ಫೈನಾಪಲ್ ನಮ್ಮ ಕೈಗೆ ಸಿಕ್ಕರೆ ಒಂದಿಷ್ಟು ಸಕ್ಕರೆ ಹಾಕಿ ಜ್ಯೂಸ್ ಮಾಡಬಹುದು. ಬಾಳೆಹಣ್ಣನ್ನು ನಾವು ತಿನ್ನಬಹುದು ಅಥವಾ ರಸಾಯನ ಮಾಡಬಹುದು. ಆಮೇಲೆ ಇವೆರಡು ಹಣ್ಣುಗಳ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯಬಹುದು. ಆದರೆ ಬ್ರೆಜಿಲ್ ನ ಸಂಶೋಧಕರ ತಂಡ ಆ ಹಣ್ಣುಗಳ ಸಿಪ್ಪೆಯನ್ನು ಹೆಕ್ಕಿ ವಿನೂತನ ಸಂಶೋಧನೆಯನ್ನು ಮಾಡಿದ್ದಾರೆ. ಇವರ ಸಂಶೋಧನೆಯಿಂದಾಗಿ ಮುಂದಿನ ದಿನಗಳಲ್ಲಿ ವಾಹನ ಉತ್ಪಾದನೆಯಲ್ಲಿ ಇವೆರಡು ಹಣ್ಣುಗಳು ಪ್ರಮುಖ ಪಾತ್ರ ನಿರ್ವಹಿಸುವ ನಿರೀಕ್ಷೆಗಳಿವೆ.

ಬ್ರೆಜಿಲ್ ನ ಸಾಯೊಪಾಲೊ ಯುನಿವರ್ಸಿಟಿಯ ಡಾ. ಆಲ್ಸಿಡೆಸ್ ಲಿಯೊ ಮತ್ತು ಅವರ ತಂಡ ಇವೆರಡು ಹಣ್ಣುಗಳಿಂದ "ನ್ಯಾನೊ-ಸೆಲ್ಯುಲಸ್ ಫೈಬರ್" ಎಂಬ ಹಗುರ ಮತ್ತು ಗಟ್ಟಿಮುಟ್ಟಾದ ಪ್ಲಾಸ್ಟಿಕ್ ತಯಾರಿಸಿದ್ದಾರೆ. ಸಾಮಾನ್ಯ ಪ್ಲಾಸ್ಟಿಕ್ ಗಳಿಗಿಂತ ಇದು ನಾಲ್ಕುಪಟ್ಟು ಹೆಚ್ಚು ಗಟ್ಟಿಮುಟ್ಟಾಗಿದೆಯೆಂದು ಅವರು ಹೇಳುತ್ತಾರೆ. ಇದನ್ನು ಕಾರಿನ ಡ್ಯಾಷ್ ಬೋರ್ಡ್, ಬಂಪರ್, ಸೈಡ್ ಪ್ಯಾನೆಲ್ ಗಳಿಗೆ ಬಳಸಬಹುದೆಂದು ಈಗಾಗಲೇ ಅವರು ಸಾಬೀತುಪಡಿಸಿದ್ದಾರೆ.

ಈ ವಿಜ್ಞಾನಿಗಳ ಸಂಶೋಧನೆಯಿಂದ ಸಾಕಷ್ಟು ಲಾಭವಿದೆ. ಮೊದಲನೆಯದಾಗಿ ಪ್ಲಾಸ್ಟಿಕ್ ಫೈಬರ್ ಗಳ ಬಳಕೆ ಕಡಿಮೆಯಾಗಲಿದೆ. ಇದು ಹಗುರವಾಗಿರುವುದರಿಂದ ಕಾರಿನ ಇಂಧನ ದಕ್ಷತೆಯೂ ಹೆಚ್ಚಾಗಲಿದೆ. ಅದೇ ರೀತಿ ಇದು ಪ್ಲಾಸ್ಟಿಕ್ ಗಿಂತ ನಾಲ್ಕುಪಟ್ಟು ಗಟ್ಟಿಮುಟ್ಟಾಗಿದೆ. ಇದು ಶಸ್ತ್ರಾಸ್ತ್ರದಿಂದ ರಕ್ಷಣೆ ನೀಡಬಲ್ಲ ಬುಲೆಟ್ ಪ್ರೂಫ್ ಗಳಷ್ಟೇ ಎಂದು ವಿಜ್ಞಾನಿಗಳು ಹೇಳುತ್ತಾರೆ. ಹೈಬ್ರಿಡ್ ಷೆವರ್ಲೆ ವೋಲ್ಟ್ ಮತ್ತು ನಿಸ್ಸಾನ್ ಲೀಫ್ ಇತ್ಯಾದಿ ಮುಂದಿನ ತಲೆಮಾರಿನ ವಾಹನಗಳ ಮೇಲೆ ನೂತನ ಸಂಶೋಧನೆ ಹೊಡೆತ ನೀಡುವ ಸಾಧ್ಯತೆಯೂ ಇದೆ. ಸಂಶೋಧನೆ ಸದ್ಯ ಸಂಬಂಧಿಸಿದ ವಿಭಾಗದಿಂದ ಅನುಮೋದನೆಗೆ ಕಾಯುತ್ತಿದೆ.

More from DriveSpark

Article Published On: Monday, April 11, 2011, 15:39 [IST]
English summary
Scientists in Brazil have developed a way of using fibers from bananas, pineapples and other plants to create plastic that is stronger and lighter than the petroleum-based stuff. So-called nanocellulose fibers rival Kevlar in strength but are renewable, and the researchers says this plastic sholud be used in car manufacturing within a couple of years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+