ದೇಶಿ ಕಂಪನಿಗಳ ಪಾಲಿಗೆ ಕನ್ನ ಹಾಕಿದ ವಿದೇಶಿ ಕಂಪನಿಗಳು

ಕೆಲವು ಸಣ್ಣ ಜಾಗತಿಕ ಕಂಪನಿಗಳ ಕಾರುಗಳು ದೇಶದಲ್ಲಿ ಅತ್ಯುತ್ತಮ ಬೇಡಿಕೆ ಪಡೆದುಕೊಳ್ಳುತ್ತಿವೆ. ಇದರಿಂದಾಗಿ ದೇಶದ ಪ್ರಮುಖ ವಾಹನ ಕಂಪನಿಗಳಾದ ಮಾರುತಿ ಸುಜುಕಿ, ಹ್ಯುಂಡೂ ಮತ್ತು ಟಾಟಾ ಮೋಟರ್ಸ್ ಮಾರುಕಟ್ಟೆಯಲ್ಲಿ ತಮ್ಮ ಪಾಲನ್ನು ಕಳೆದುಕೊಳ್ಳುತ್ತಿವೆ ಎಂದು ದೇಶದ ವಾಹನ ಒಕ್ಕೂಟ(ಎಸ್ಐಎಎಂ) ಮಾಹಿತಿ ನೀಡಿದೆ.
ಫೋರ್ಡ್, ಫೋಕ್ಸ್ ವ್ಯಾಗನ್, ಜನರಲ್ ಮೋಟರ್ಸ್ ಮುಂತಾದ ಕಂಪನಿಗಳು ಕಾರು ಮಾರಾಟವನ್ನು ಹೆಚ್ಚಿಸಿಕೊಳ್ಳುತ್ತಿವೆ. ಇದರ ಪರಿಣಾಮವಾಗಿ ಮಾರುತಿ ಸುಜುಕಿ ಮಾರುಕಟ್ಟೆ ಪಾಲು ಕಳೆದ ಆರ್ಥಿಕ ವರ್ಷದಲ್ಲಿ ಶೇಕಡ 50.09ರಿಂದ ಶೇಕಡಾ 48.74ಕ್ಕೆ ಕುಸಿದಿದೆ. ಆದರೂ ಕಂಪನಿಯು ತನ್ನ ದೇಶಿಯ ಮಾರಾಟವನ್ನು ಹೆಚ್ಚಿಸಿಕೊಂಡಿದೆ. 2010-11ರ ತ್ರೈಮಾಸಿಕದಲ್ಲಿ ದೇಶದಲ್ಲಿ ಕಂಪನಿಯಯ ಸುಮಾರು 9,66,447 ಯುನಿಟ್ ಕಾರು ಮಾರಾಟ ಮಾಡಿದ್ದು, ಇದಕ್ಕೂ ಹಿಂದಿನ ಆರ್ಥಿಕ ವರ್ಷದ 7,65,533 ಯೂನಿಟ್ ಗಿಂತ ಏರಿಕೆ ಕಂಡಿದೆ.
ಇದೇ ರೀತಿ ಹ್ಯುಂಡೈ ಮಾರುಕಟ್ಟೆ ಪಾಲು ಕೂಡ ಕಳೆದ ಆರ್ಥಿಕ ವರ್ಷದಲ್ಲಿ ಶೇಕಡಾ 20.61ರಿಂದ ಶೇ. 18.10ಕ್ಕೆ ಇಳಿಕೆ ಕಂಡಿದೆ. ಕಂಪನಿಯು 2010-11ರ ಆರ್ಥಿಕ ವರ್ಷದಲ್ಲಿ 3,58,904 ಯುನಿಟ್ ಕಾರು ಮಾರಾಟ ಮಾಡಿದೆ. ಇದಕ್ಕೂ ಹಿಂದಿನ ಆರ್ಥಿಕ ವರ್ಷದಲ್ಲಿ 3,14,967 ಯುನಿಟ್ ಮಾರಾಟ ಮಾಡಿತ್ತು. ಟಾಟಾ ಮೋಟರ್ಸ್ ಮಾರುಕಟ್ಟೆ ಪಾಲು ಕೂಡ ಕಳೆದ ಆರ್ಥಿಕ ವರ್ಷದಲ್ಲಿ ಶೇ. 13.18ರಿಂದ 12.92ಕ್ಕೆ ಇಳಿಕೆ ಕಂಡಿದೆ. ಕಂಪನಿಯು 2010-11ರ ಆರ್ಥಿಕ ವರ್ಷದಲ್ಲಿ ಸುಮಾರು 2,56,202 ಯುನಿಟ್ ವಾಹನ ಮಾರಾಟ ಮಾಡಿತ್ತು. ಇದಕ್ಕೂ ಹಿಂದಿನ ಆರ್ಥಿಕ ವರ್ಷದಲ್ಲಿ ಸುಮಾರು 2,013,99 ಕಾರು ಮಾರಾಟ ಮಾಡಿತ್ತು.
ಹೋಂಡಾ ಸಿಯೆಲ್ ಕಾರ್ಸ್ ಇಂಡಿಯಾದ ಷೇರು ಅನುಪಾತ ಕೂಡ 4.01ರಿಂದ ಶೇ. 2.97ಕ್ಕೆ ಇಳಿಕೆ ಕಂಡಿದೆ. ಮಾರುಕಟ್ಟೆಯಲ್ಲಿ ಲಾಭ ಪಡೆದ ವಿದೇಶಿ ಕಂಪನಿಗಳೆಂದರೆ ಫೋರ್ಡ್ ಮತ್ತು ಫೋಕ್ಸ್ ವ್ಯಾಗನ್. ಇವೆರಡು ಕಂಪನಿಗಳು ಫಿಗೊ ಮತ್ತು ಪೊಲೊ ಕಾರುಗಳ ನೆರವಿನಿಂದ ಪಾಲನ್ನು ಹೆಚ್ಚಿಸಿಕೊಂಡಿವೆ. ಫೋಕ್ಸ್ ವ್ಯಾಗನ್ ಮಾರುಕಟ್ಟೆ ಪಾಲು ಶೇ. 0.27ನಿಂದ ಶೇ. 2.60ಕ್ಕೆ ನೆಗೆದಿದೆ ಎಂದು ದೇಶದ ವಾಹನ ಒಕ್ಕೂಟ ಮಾಹಿತಿ ನೀಡಿದೆ.


Click it and Unblock the Notifications








