ಫೆರಾರಿ ತದ್ರೂಪಿ ಕಾರು: ಟೊಯೊಟಾ ಕಾರಿಗೆ ಹೊಸ ವೇಷ!

ಫೆರಾರಿ ತದ್ರೂಪಿ ಕಾರು
ಫೆರಾರಿ ಕಾರೆಂದರೆ ಸಾಕು ಕಾರು ಪ್ರೇಮಿಗಳ ಮನ ನವಿರಾಗುತ್ತದೆ. ಅಂತಹ ಒಂದು ಕಾರು ನನ್ನಲ್ಲಿರುತ್ತಿದ್ದರೆ ಎಂದು ಜಗತ್ತಿನ ಹೆಚ್ಚಿನವರೂ ಯೋಚಿಸುತ್ತಾರೆ. ತನ್ನ ಆಕರ್ಷಕ ಚಾಸೀ ವಿನ್ಯಾಸ ಮತ್ತು ಕ್ರೀಡಾ ಕಾರೊಂದರ ಅತ್ಯದ್ಭುತ ವಿನ್ಯಾಸ ಇದನ್ನು ಜನಪ್ರಿಯಗೊಳಿಸಿದೆ. ಅದೇ ರೀತಿ ದುಬಾರಿಯಾಗಿದ್ದು ಸಾಮಾನ್ಯ ಶ್ರೀಮಂತರಿಗೂ ಕೈಗೆಟುಕದಷ್ಟು ದೂರದಲ್ಲಿದೆ.

ಫೆರಾರಿಯ ಇತ್ತೀಚಿನ ಆವೃತ್ತಿಗೆ ಈಗ ಕಡಿಮೆಯೆಂದರೆ ಸುಮಾರು 2 ಕೋಟಿ ರೂಪಾಯಿಯಿಂದ 5 ಕೋಟಿ ರೂಪಾಯಿ ದರವಿದೆ. ನಮ್ಮ ದೇಶದಲ್ಲಿ ಕೆಲವು ಫೆರಾರಿ ಮಾಲೀಕರಿದ್ದಾರೆ. ಅದಕ್ಕಿಂತ ಎಷ್ಟೋ ಪಟ್ಟು ಅದರ ಅಭಿಮಾನಿಗಳಿದ್ದಾರೆ. ದುಬಾರಿ ಕಾರು ಫೆರಾರಿ ಅಂದಕ್ಕೆ ಮನಸೋಲದವರಿಲ್ಲ. ಅಷ್ಟು ದುಬಾರಿ ಕಾರನ್ನು ಖರೀದಿಸಲಾಗದವರು ಏನು ಮಾಡಬಹುದು? ಅದರದ್ದೇ ಒಂದು ತದ್ರೂಪಿ ಕಾರನ್ನು ರಚಿಸಿ ಅಸಲಿ ಫೆರಾರಿ ಕಾರಲ್ಲಿ ಸವಾರಿ ಮಾಡಿದಂತೆ ಖುಷಿಪಡಬಹುದು.

ನೋಡಲು ಥೇಟ್ ಫೆರಾರಿಯಂತಹ ಕಾರೊಂದನ್ನು ಎಕ್ಸ್ ಕ್ಯೂಟಿವ್ ಮೊಡ್ ಕಾರ್ ಟ್ರೆಂಡ್ಜ್ ಎಂಬ ಕಂಪನಿ ತಯಾರಿಸಿದೆ. ಇದು ಅಸಲಿಯೋ ನಕಲಿಯೋ ಎಂಬುದು ಗೊತ್ತಾಗದಷ್ಟು ಆಕರ್ಷಕವಾಗಿದೆ. ನಿಜ ಹೇಳಬೇಕೆಂದರೆ ಟೊಯೊಟಾ ಕೊರೊಲಾ ಕಾರನ್ನೇ ಒಂಚೂರು ಮಾರ್ಪಡು ಮಾಡಿ ಈ ಕಾರನ್ನು ತಯಾರಿಸಲಾಗಿದೆ. ಚೂರು ಸಂಶಯ ಬರದಂತೆ ಇದನ್ನು ನೋಡಿದವರು ಫೆರಾರಿ ಕಾರೆಂದು ತಿಳಿಯುತ್ತಾರೆ.

ಫೆರಾರಿ ಎಫ್430 ಕಾರಿನ ತದ್ರೂಪಿಯಾಗಿ ಟೊಯೊಟಾ ಕೊರೊಲಾ ಕಾರನ್ನು ರೂಪಿಸಲಾಗಿದೆ. ಈ ತದ್ರೂಪಿ ಕಾರು ಕೊರೊಲಾ ಕಾರಿನ 1.8 ಲೀಟರ್ ಎಂಜಿನ್ ಹೊಂದಿದೆ. ಈ ಫೆರಾರಿ ತದ್ರೂಪಿ ಕಾರಿನ ಸೃಷ್ಟಿಗೆ ವೆಚ್ಚವಾದದ್ದು ಸುಮಾರು 10 ಲಕ್ಷ ರೂಪಾಯಿ. ನಗರದಲ್ಲಿ ಇದರಲ್ಲಿ ಒಮ್ಮೆ ಸುಮ್ಮನೆ ಸವಾರಿ ಮಾಡಿದರೆ ಫೆರಾರಿಯ ಕೋಟಿ ದರದ ಕಾರೆಂದು ಜನರು ಮೂಗಿನ ಮೇಲೆ ಬೆರಳಿಟ್ಟು ನೋಡಬಹುದು.

More from DriveSpark

Article Published On: Thursday, April 14, 2011, 15:22 [IST]
English summary
An Indian car modifier Executive Modcar Trendz has modified a Toyota Corolla and the result is an exact replica of the greatly coveted Ferrari F430.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+