ನಂಬರ್ ಪ್ಲೇಟ್ ನಲ್ಲಿ ಝಡ್ ಅಕ್ಷರವಿದ್ದರೆ ಕಾರು ಅಪಘಾತವಾಗುತ್ತಂತೆ!

"ಝಡ್ ಅಕ್ಷರವಿರುವ ನಂಬರ್ ಪ್ಲೇಟ್ ನ ಕಾರುಗಳು ಅಪಘಾತ ವಿಮೆ ಕ್ಲೈಮ್ ಮಾಡೋದು ಹೆಚ್ಚು" ಎಂದು ಬ್ರಿಟನ್ ನ "ಎಲೆಫೆಂಟ್ ಡಾಟ್ ಕಂ ಯುಕೆ" ವಿಮಾ ಕಂಪನಿಯ ಸಮೀಕ್ಷೆ ಕಂಡುಕೊಂಡಿದೆ. ಝಡ್ ಅಕ್ಷರವಿರುವ ಐದು ಕಾರುಗಳಲ್ಲಿ ಕನಿಷ್ಠ 2 ಕಾರುಗಳು ಅಪಘಾತಕ್ಕೆ ತುತ್ತಾಗುತ್ತಿವೆ ಎಂದು ವಿಮಾ ಕಂಪನಿಯ ಸಮೀಕ್ಷೆಯನ್ನು ಉಲ್ಲೇಖಿಸಿ ಡೈಲಿ ಮಿರರ್ ವರದಿ ಮಾಡಿದೆ. ಸುಮಾರು 6,43,939 ಅಪಘಾತ ಪ್ರಕರಣಗಳನ್ನು ಅವಲೋಕಿಸಿ ಈ ತೀರ್ಮಾನಕ್ಕೆ ಬರಲಾಗಿದೆಯಂತೆ!
ಎನ್ ಸಿಝಡ್ ನಂಬರ್ ಪ್ಲೇಟ್ ಇರುವ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತವಾಗಿದೆಯಂತೆ. ಇದರ ನಂತರದ ಸ್ಥಾನವನ್ನು ಡಿಕೆವೈ, ಎಡಬ್ಲ್ಯುಝಡ್, ಎಲ್ ಜಿವೈ ಮ್ತು ಎಎಝಡ್ ನಂಬರ್ ಪ್ಲೇಟ್ ಇರುವ ಕಾರುಗಳು ಪಡೆದಿವೆ ಎಂದು ವಿಮಾ ಕಂಪನಿ ಹೇಳಿದೆ. ಅಂದರೆ ಎನ್ ಸಿಝಡ್ ಅಪಘಾತ 88 ಆದರೆ ಆರ್ ಎಂಝಡ್ ಕಾರು ಅಪಘಾತ 44 ಆಗಿವೆಯಂತೆ. "ಇದು ಆಕಸ್ಮಿಕವೆಂಬುದು ನನಗೆ ಗೊತ್ತು. ಇಂತಹ ರಿಜಿಸ್ಟ್ರೇಷನ್ ಹೊಂದಿದ ಕಾರುಗಳಿಗೆ ಹೆಚ್ಚು ಶುಲ್ಕ ವಿಧಿಸುವ ಯಾವುದೇ ಯೋಜನೆಯೂ ಕಂಪನಿಗಿಲ್ಲ" ಎಂದು ವಿಮಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಬ್ರೈನ್ ಮಾರ್ಟಿನ್ ಹೇಳುತ್ತಾರೆ.


Click it and Unblock the Notifications








