ಯುವರಾಜ್ ಸಿಂಗ್ ಗೆ ಆಡಿ ಕ್ಯೂ5 "ಕೀ" ಕೊಟ್ಟ ರವಿಶಾಸ್ತ್ರಿ

"ವಿಶ್ವಕಪ್ ಕ್ರಿಕೆಟ್ 2011ರಲ್ಲಿ ಮ್ಯಾನ್ ಆಫ್ ಮ್ಯಾಚ್ ಪಡೆದ ಯುವರಾಜ್ ಸಿಂಗ್ ನನ್ನು ನಾನು ಅಭಿನಂದಿಸುತ್ತೇನೆ. ಎಲ್ಲರೂ ಇಷ್ಟಪಡುವಂತಹ ಅಮೋಘ ಸಾಧನೆಯನ್ನು ಅವರು ಮಾಡಿದ್ದಾರೆ. ಪ್ರತಿ ವಿಶ್ವಕಪ್ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆದ ಆಟಗಾರರಿಗೆ ಆಡಿ ಬ್ರಾಂಡ್ ನ ಕಾರೊಂದನ್ನು ಕಂಪನಿ ಉಡುಗೊರೆಯಾಗಿ ನೀಡುತ್ತಿದೆ. ಈ ವರ್ಷದ ಅನನ್ಯ ಆಟಕ್ಕಾಗಿ ಕ್ಯೂ5 ಕಾರೊಂದನ್ನು ಯುವರಾಜ್ ಸಿಂಗ್ ಗೆ ಉಡುಗೊರೆಯಾಗಿ ನೀಡುತ್ತಿದ್ದೇವೆ" ಎಂದು ಆಡಿ ಇಂಡಿಯಾ ಮುಖ್ಯಸ್ಥರಾದ ಮೈಕಲ್ ಪೆರ್ಸಕೆ ಹೇಳಿದ್ದಾರೆ.
ಇದನ್ನೂ ಓದಿ: ಯುವರಾಜನಲ್ಲಿ ಈಗ ಎಷ್ಟು ಲಕ್ಷುರಿ ಕಾರುಗಳಿವೆ ಗೊತ್ತಾ?
"ಸುಮಾರು 28 ವರ್ಷಗಳ ನಂತರ ಭಾರತ ಮತ್ತೆ ವಿಶ್ವಕಪ್ ಗೆದ್ದುಕೊಂಡಿದೆ. ಇದೇ ಸಂದರ್ಭದಲ್ಲಿ ಕಾರು ಉಡುಗೊರೆ ನೀಡುವ ಸಂಪ್ರದಾಯವನ್ನು ಮುಂದುವರೆಸಿದ ಆಡಿಗೆ ಅಭಾರಿಯಾಗಿದ್ದೇನೆ" ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. 28 ವರ್ಷ ದ ಹಿಂದೆ ರವಿಶಾಸ್ತ್ರಿ ಕೂಡ ಆಡಿ 100 ಎಂಬ ಕಾರನ್ನು ಉಡುಗೊರೆಯಾಗಿ ಪಡೆದಿದ್ದರು. ಕ್ರಿಕೆಟ್ ಪಂದ್ಯದಲ್ಲಿ ಯುವರಾಜ್ ಹೊಸ ದಾಖಲೆ ನಿರ್ಮಿಸಿದ್ದಾರೆ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.


Click it and Unblock the Notifications








