ಯುವಿ ಲಕ್ಷುರಿ ಕಾರುಗಳು; ಗೆಲುವಿಗೆ ಒಲವಿನ ಉಡುಗೊರೆ

ಯುವರಾಜನೆಂದರೆ ಭಾರತದ ಬೆಸ್ಟ್ ಬ್ಯಾಟ್ಸ್ ಮ್ಯಾನ್. ಆತ 2000ರಲ್ಲಿ ಆಸ್ಟ್ರೇಲಿಯಾದ ವಿರುದ್ಧ ಆಡಿ ಗಳಿಸಿದ ಮೊದಲ ಆಕರ್ಷಕ ಇನ್ನಿಂಗ್ಸ್, ಆ 84 ರನ್ ಎಂದಿಗೂ ಮರೆಯುವಂತದ್ದಲ್ಲ. ಅಂತರ್ ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅದು ಹೊಸ ಆರಂಭ ಎನ್ನಬಹುದು. ಬೆಳ್ಳಿಯ ಚಮಚವನ್ನು ಬಾಯಲಿಟ್ಟುಕೊಂಡು ಬೆಳೆದ ಯುವಿಗೆ ಆತನ ತಂದೆ ಯೋಗರಾಜ್ ಸಿಂಗ್ 2001ರ ಮಾಡೆಲ್ ನ ಹೋಂಡಾ ಸಿಟಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಇದು ಯುವರಾಜನ ಮೊದಲ ಕಾರು. ಅವರ ತಂದೆ ಯೋಗರಾಜ್ ಸಿಂಗ್ ಮೊದಲು ಕ್ರಿಕೆಟರ್ ಆಗಿದ್ದರು. ಆಮೇಲೆ ನಟನಾಗಿ ಬದಲಾಗಿದ್ದರು.
ಐಸಿಸಿ ವಲ್ಡ್ ಟಿ20 ಸೂಪರ್ 8 ಮ್ಯಾಚ್ ನಲ್ಲಿ ಒಂದೇ ಓವರ್ ಗೆ 6 ಸಿಕ್ಸ್ ಹೊಡೆದ ಧೀರನೀತ. ಇದರಿಂದ ಖುಷಿಗೊಂಡ ಬಿಸಿಸಿಐ ಅಧ್ಯಕ್ಷರು ಆತನಿಗೆ ಪೋರ್ಷ್ 911 ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಬಿಸಿಸಿಐ 10 ಲಕ್ಷ ರೂ. ಕೂಡ ಬಹುಮಾನ ನೀಡಿತ್ತು. ಯುವರಾಜ್ ಸಿಂಗ್ ನಲ್ಲಿ ಪೋರ್ಷ್ ಮಾತ್ರವಲ್ಲದೇ ಮರ್ಸಿಡಿಸ್ ಬೆಂಝ್, ಬಿಎಂಡಬ್ಲ್ಯು ಎಂ5 ಮತ್ತು ಬಿಎಂಡಬ್ಲ್ಯು ಎಂ3 ಕಾರುಗಳಿವೆ. ಎಂ5 ಮತ್ತು ಎಂ3 ದರ ಕ್ರಮವಾಗಿ 1 ಕೋಟಿ ರೂಪಾಯಿ ಮತ್ತು 80 ಲಕ್ಷ ರೂ. ಆಗಿದೆ. ಇಲ್ಲಿಗೆ ಯುವಿ ಬಳಿಯಿರುವ ಐಷಾರಾಮಿ ಕಾರುಗಳ ಪಟ್ಟಿ ಕೊನೆಗೊಳ್ಳುವುದಿಲ್ಲ. 2011 ವಿಶ್ವಕಪ್ ಕ್ರಿಕೆಟ್ ನಲ್ಲಿ ಆತನ ಮೋಡಿಯ ಆಟಕ್ಕೆ ಆತನಿಗೆ ಆಡಿ ಕಾರೊಂದು ಉಡುಗೊರೆಯಾಗಿ ದೊರಕಿದೆ.


Click it and Unblock the Notifications








