ಯುವ ಪ್ರತಿಭಾನ್ವಿತರಿಗೊಂದು ಅವಕಾಶ, ನೀವು ಭಾಗವಹಿಸಿ

ದೇಶದ ಬೃಹತ್ ಕಾರ್ ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ದೇಶದ ಯುವ ಪ್ರತಿಭಾನ್ವಿತ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಭವಿಷ್ಯ ಕಂಡುಕೊಳ್ಳುವಲ್ಲಿ ನೆರವಾಗಲಿದೆ. ಮಾರುತಿ ಸುಜುಕಿ ಮತ್ತು ಆಟೋಮೊಟಿವ್ ಎಂಜಿನಿಯರ್ಸ್ ಸೊಸೈಟಿ(ಎಸ್ಎಇಇಂಡಿಯಾ) ಜಂಟಿಯಾಗಿ ಸುಪ್ರ ಎಸ್ಎಇಇಂಡಿಯಾ 2011 ಕಾಂಪಿಟಿಷನ್ ನಡೆಸಲಿವೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಫಾರ್ಮುಲಾ ಒನ್ ವಿನ್ಯಾಸದ ಕ್ರೀಡಾ ಕಾರ್ ಗಳ ವಿನ್ಯಾಸ ಮಾಡಬೇಕು.
ದೇಶದಲ್ಲಿರುವ ಪ್ರತಿಭಾನ್ವಿತ ಪದವಿ ಮತ್ತು ಸ್ನಾತಕೋತ್ತರ ಎಂಜಿನಿಯರಿಂಗ್ ಪದವಿದರರು ಇದರಲ್ಲಿ ಭಾಗವಹಿಸಬಹುದು. ಇದು ಯುವ ಎಂಜಿನಿಯರ್ ಗಳಿಗೆ ತಮ್ಮ ಆಟೋಮೊಬೈಲ್ ಫ್ಯಾಷನ್, ಪ್ರತಿಭೆ ಅನಾವರಣಗೊಳಿಸಲಿರುವ ಅವಕಾಶವಾಗಿದೆ. ಇದರಲ್ಲಿ ಸುಮಾರು 44 ತಂಡಗಳು ತಮ್ಮ ಕನಸಿನ ಫಾರ್ಮುಲಾ ಒನ್ ಕಾರ್ ವಿನ್ಯಾಸ ಮಾಡಬಹುದಾಗಿದೆ. ಮದ್ರಾಸ್ ಮೋಟರ್ ಸ್ಪೋರ್ಟ್ ಕ್ಲಬ್ ನಲ್ಲಿ ಈ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಗೆಲುವು ಪಡೆದ ಕಾರ್ ಆಕ್ಟೋಬರ್ 11ರಂದು ಚೆನ್ನೈನಲ್ಲಿ ನಡೆಯಲಿರುವ ಏಷ್ಯಾ ಪೆಸಿಫಿಕ್ ಆಟೋಮೊಟಿವ್ ಕಾನ್ಫರೆನ್ಸ್ ಮತ್ತು 2012ರ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಸುಪ್ರ ಎಸ್ಎಇ ಇಂಡಿಯಾ(suprasaeindia) ವೆಬ್ ಸೈಟ್ ಗೆ ಭೇಟಿ ನೀಡಬಹುದು.


Click it and Unblock the Notifications







