ಸವಾರಿಯಲ್ಲಿ ಟ್ವಿಟ್ಟರ್, ಫೇಸ್ ಬುಕ್ ತಾಜಾ ಮಾಹಿತಿ ಪಡೆಯಿರಿ

Twitter and Facebook in your cars‎
ಕಾರು ಮಾಲಿಕರಿಗಿದು ಸಿಹಿ ಸುದ್ದಿ. ಶೀಘ್ರದಲ್ಲಿ ಕಾರು ಸವಾರಿ ಮಾಡುತ್ತ, ಸ್ಟೇರಿಂಗ್ ಪಕ್ಕದಲ್ಲಿರುವ ಪುಟ್ಟ ಪರದೆಯಲ್ಲಿ ಸೋಷಿಯಲ್ ನೆಟ್ ವರ್ಕ್ ಗಳಾದ ಫೇಸ್ ಬುಕ್, ಟ್ವಿಟ್ಟರ್ ತಾಜಾ ಮಾಹಿತಿಗಳನ್ನು ಪಡೆಯಬಹುದು. ಇದರಲ್ಲಿ ಇಂತಹ ಹಲವಾರು ಅಪ್ಲಿಕೇಷನ್ ಸೇವೆಗಳನ್ನು ಪಡೆಯಬಹುದಂತೆ. ಆರಾಮವಾಗಿ ಡ್ರೈವಿಂಗ್ ಮಾಡುತ್ತ ಸಾಮಾಜಿಕ ಜಾಲ ತಾಣಗಳಲ್ಲಿ ವಿಹಾರಿಸಬಹುದು.

ಆಸ್ಟ್ರೇಲಿಯಾದ ಫೋರ್ಡ್ ಎಲೆಕ್ಟ್ರಾನಿಕ್ಸ್ ವಿಭಾಗ ಇಂತಹ ವಿಶಿಷ್ಠ ಸಾಧನವನ್ನು ಅನ್ವೇಷಣೆ ಮಾಡಿದೆ. ಇದನ್ನು ಕಾರಿನೊಳಗಿನ ವಿದ್ಯುನ್ಮಾನ ಕ್ರಾಂತಿ ಎಂದು ಕೆಲವರು ವಿಶ್ಲೇಷಿಸಿದ್ದಾರೆ. ಈ ಸಾಧನ ಕೆಲವೇ ವರ್ಷಗಳಲ್ಲಿ ಹೆಚ್ಚಿನ ಕಾರಿನೊಳಗೆ ಪ್ರವೇಶಿಸುವ ನಿರೀಕ್ಷೆಯಿದೆ. ಈ ಸಾಫ್ಟ್ ವೇರ್ ಸಿಸ್ಟಮ್ ನ್ನು ಕಾರಿನೊಳಗೆ ಅಳವಡಿಸಿದರೆ ಸಾಕು. ಇದರಿಂದ ಸ್ಮಾರ್ಟ್ ಫೋನ್ ಸಂವಹನ, ವಾಹನಕ್ಕಾಗಿ ವಿಶೇಷ ಅಪ್ಲಿಕೇಷನ್ ಗಳು, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಐಪ್ಯಾಡ್, ಟ್ಯಾಬ್ಲೆಟ್ ಇತ್ಯಾದಿಗಳನ್ನು ಕಾರಿನೊಳಗಿರುವ ಕಲರ್ ಸ್ಕ್ರೀನ್ ಮೂಲಕ ವೀಕ್ಷಿಸಬಹುದಾಗಿದೆ.

ಫಾಲ್ಕನ್ ದೊಡ್ಡಕಾರುಗಳಿಗೆ ಈ ಸಾಧನವನ್ನು ಈ ವರ್ಷದ ಅಂತ್ಯದಲ್ಲಿ ಅಳವಡಿಸಲಾಗುವುದು ಎಂದು ಫೋರ್ಡ್ ಆಸ್ಟ್ರೇಲಿಯಾದ ಎಲೆಕ್ಟ್ರಾನಿಕ್ಸ್ ವಿಭಾಗದ ಅಧ್ಯಕ್ಷರು ಹೇಳಿದ್ದಾರೆ. ಈ ಸಾಧನಕ್ಕೆ ಸ್ಟಾಂಡರ್ಡ್ ಯುಎಸ್ ಬಿ ಇನ್ ಪುಟ್ ಅಳವಿಡಿಸುವ ಮೂಲಕ ಗ್ರಾಹಕರು ಫೇಸ್ ಬುಕ್, ಟ್ವಿಟ್ಟರ್ ತಾಜಾ ಮಾಹಿತಿಗಳನ್ನು ಕಾರಿನಲ್ಲಿ ಪಡೆಯಬಹುದಾಗಿದೆ. ಡ್ಯಾಷ್ ಬೋರ್ಡ್ ನಲ್ಲಿ ಇಂತಹ ಪುಟ್ಟ ಪರದೆಯ ಮೂಲಕ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಂತಹ ತಾಣಗಳಿಂದ ತಾಜಾ ಸುದ್ದಿಗಳನ್ನು ಪಡೆಯುವುದು ಗ್ರಾಹಕರಿಗೆ ವಿಶೇಷ ಅನುಭವ ನೀಡಲಿದೆ ಎಂದು ಅವರು ಹೇಳುತ್ತಾರೆ.

More from DriveSpark

Article Published On: Friday, April 15, 2011, 10:09 [IST]
English summary
Car owners could soon upgrade the software systems on their car. This software systems help car owners to upload apps and even interact with social media sites such as Twitter and Face book. The basis for the cutting-edge technology has just arrived in the updated, Australian-made Ford Territory, reports the Sydney Morning Herald.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+