ಬುಗಾಟಿಗೆ ಸವಾಲ್: ಭಾರತಕ್ಕೆ 20 ಕೋಟಿ ರೂ. ಕಾರು

ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿದ್ದ ಕಾರುಗಳನ್ನು ತಯಾರಿಸಿದ ಕಂಪನಿ ಆಸ್ಟನ್ ಮಾರ್ಟಿನ್. ಕಂಪನಿಯು ದೇಶದ ಕೋಟ್ಯಾಧಿಶರನ್ನು ಗಮನದಲ್ಲಿಟ್ಟುಕೊಂಡು ವಿವಿಧ ಆವೃತ್ತಿಗಳನ್ನು ಪರಿಚಯಿಸಿದೆ. ಈ ವರ್ಷ ಇಲ್ಲಿ ಸುಮಾರು 50 ಕಾರು ಮಾರಾಟ ಮಾಡುವ ಗುರಿಯನ್ನು ಹೊಂದಿದೆ. ಈಗಾಗಲೇ 30 ಕಾರುಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗಿದೆ.
ಭಾರತದಲ್ಲಿ ಕಂಪನಿಯ ಕೆಲವು ಕಾರುಗಳ ದರ
ವಿ8 ವಂಟಾಜ್- 1.55 ಕೋಟಿ ರೂ.
ರಾಪಿಡೆ- 2.15 ಕೋಟಿ ರೂ.
ಡಿಬಿಎಸ್- 2.5 ಕೋಟಿ ರೂ.
ಡಿಬಿಎಸ್ ಕನ್ ವರ್ಟಿಬಲ್- 2.7 ಕೋಟಿ ರೂ.
ಒನ್ 77- 20 ಕೋಟಿ ರೂಪಾಯಿ.
ಒನ್ 77 ಪ್ರೊಫೈಲ್
ಎಂಜಿನ್: 7.3 ಲೀಟರ್ ವಿ12 ಎಂಜಿನ್
ಶಕ್ತಿ: 750 ಹಾರ್ಸ್ ಪವರ್
ಟ್ರಾನ್ಸ್ ಮಿಷನ್: 6 ಸ್ಪೀಡ್ ಆಟೋಮೆಟೆಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್/ಎಲೆಕ್ಟ್ರೊ-ಹೈಡ್ರಾಲಿಕ್ ಕಂಟ್ರೊಲ್ ಸಿಸ್ಟಮ್
ಬ್ರೇಕ್: ಕಾರ್ಬನ್ ಸೆರಾಮಿಕ್ ಮ್ಯಾಟ್ರಿಕ್ಸ್ ಬ್ರೇಕಿಂಗ್ ಸಿಸ್ಟಮ್
ಬಾಡಿ: ಎರಡು ಡೋರಿನ ಸ್ಪೋರ್ಟ್ಸ್ ಕೂಪ್. ಎರಡು ಸೀಟ್ ಹೊಂದಿದೆ.
ತೂಕ: ಸುಮಾರು 1,500 ಕೆ.ಜಿ.
ಈಗ ಐಷಾರಾಮಿ ಕಾರುಗಳಿಗೆ ಭಾರತದಲ್ಲಿ ಬೇಡಿಕೆ ಹೆಚ್ಚಾಗುತ್ತದೆ. ಆಸ್ಟನ್ ಮಾರ್ಟಿನ್ ನೂತನ ಕಾರುಗಳು ಬಿಎಂಡಬ್ಲ್ಯು, ಮರ್ಸಿಡಿಸ್ ಬೆಂಜ್, ಜಾಗ್ವಾರ್, ಆಡಿ, ಬೆಂಟ್ಲಿ ಮತ್ತು ರೋಲ್ಸ್ ರಾಯ್ಸ್ ಕಂಪನಿಗಳಿಗೆ ಪ್ರಬಲ ಪೈಪೋಟಿಯನ್ನೇ ನೀಡುವ ನಿರೀಕ್ಷೆಯಿದೆ. ಜೇಮ್ಸ್ ಬಾಂಡ್ ಸಿನಿಮಾದಲ್ಲಿ ಸ್ಟೈಲಿಶ್ ಕಾರಾಗಿ ಆಸ್ಟನ್ ಆವೃತ್ತಿಗಳು ಹೊರಹೊಮ್ಮಿದ್ದವು.
ದೇಶದ ರಸ್ತೆಯಲ್ಲಿರುವ ದುಬಾರಿ ಕಾರು ಮತ್ತು ದರ
* ಒನ್ 77: 20 ಕೋಟಿ ರೂ.
* ಬುಗಾಟಿ ವೆರೊನ್: ಸುಮಾರು 16 ಕೋಟಿ ರೂಪಾಯಿ.
* ಮರ್ಸಿಡಿಸ್ ಬೆಂಝ್- ಮೆಬಾಕ್: ಸುಮಾರು 5.1 ಕೋಟಿ ರೂಪಾಯಿ.
* ಬೆಂಟ್ಲಿ ಅಝಾರ್: ಸುಮಾರು 3.5 ಕೋಟಿ ರೂ.
* ರೋಲ್ಸ್ ರಾಯ್ಸಿ ಫಾಂಟಾಮ್: 3.5 ಕೋಟಿ ರೂ.
* ಲಂಬೊರ್ಗಿನಿ ಮುರ್ಸಿಲಾಗೊ: 3 ಕೋಟಿ ರೂ.
* ಬೆಂಟ್ಲಿ ಆರ್ನೆಂಜ್: 2.75 ಕೋಟಿ ರೂ.ನಿಂದ 2.25 ಕೋಟಿ ರೂ.
* ಬೆಂಟ್ಲಿ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪಾರ್: 2 ಕೋಟಿ ರೂ.
* ಫೋರ್ಸೆ ಕರೇರಾ ಜಿಟಿ: 1.75 ಕೋಟಿ ರೂ.


Click it and Unblock the Notifications








