ಅದ್ನಾನ್ ಸಮಿಗೆ ಕೊಟ್ಟ ಚೆಕ್ ಕಸಿದುಕೊಂಡ ಆಸ್ಟನ್ ಮಾರ್ಟಿನ್

ಆಸ್ಟನ್ ಮಾರ್ಟಿನ್ ಕಂಪನಿಯ ಅಧಿಕೃತ ಡೀಲರ್ ಇನ್ಪಿನಿಟಿ ಕಾರ್ಸ್ ಪ್ರೈವೇಟ್ ಲಿಮಿಟೆಡ್ ನೂತನ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡುವಂತೆ ಅದ್ನಾನ್ ಸಮಿಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಕೊನೆಯ ಕ್ಷಣದಲ್ಲಿ ಈ ಒಪ್ಪಂದವನ್ನು ರದ್ದುಗೊಳಿಸಿದ ಇನ್ಫಿನಿಟಿ ಅದ್ನಾನ್ ಸಮಿಗೆ ಯಾವುದೇ ಮಾಹಿತಿ ನೀಡದೇ 13.5 ಲಕ್ಷ ರೂಪಾಯಿ ಚೆಕ್ಕನ್ನು ರದ್ದುಗೊಳಿಸಿತ್ತು.
ಬ್ಯಾಂಕ್ ಮೂಲಕ ಚೆಕ್ ರದ್ದುಗೊಂಡಿರುವ ವಿಷಯ ತಿಳಿದ ಅದ್ನಾನ್ ಸಮಿ ಸಹಜವಾಗಿ ಕೋಪಗೊಂಡಿದ್ದಾರೆ. ಕೊನೆಯ ಕ್ಷಣದಲ್ಲಿ ಜನಪ್ರಿಯ ಗಾಯಕ ಮತ್ತು ಶೀಘ್ರದಲ್ಲಿ ನಟನಾಗಲಿರುವ ಸಮಿಯೊಂದಿಗಿನ ಒಪ್ಪಂದವನ್ನು ಯಾಕೆ ಕಂಪನಿ ರದ್ದುಗೊಳಿಸಿದೆ ಎಂಬುದನ್ನು ಕಂಪನಿ ಇನ್ನೂ ಸ್ಪಷ್ಟಪಡಿಸಿಲ್ಲ.
"ವೃತ್ತಿಪರ ಗಾಯಕನೊಬ್ಬನಲ್ಲಿ ಒಪ್ಪಂದ ಮಾಡಿಕೊಂಡ ನಂತರ ಈ ರೀತಿ ಮಾಡಿರುವುದು ಕೆಟ್ಟ ಬೆಳವಣಿಗೆ. ಇಲ್ಲಿವರೆಗೆ ಇನ್ಫಿನಿಟಿ ಅದ್ನಾನ್ ಸಮಿ ಅವರಿಗೆ ಯಾವುದೇ ಮಾಹಿತಿ ನೀಡಿಲ್ಲ. ನಾವೀಗ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದೇವೆ" ಎಂದು ಸಮಿ ಅವರ ವಕೀಲ ವೈಭವ್ ಕೃಷ್ಣನ್ ಹೇಳಿದ್ದಾರೆ.


Click it and Unblock the Notifications








