ಇದು ಕಾರಲ್ಲವೋ ಅಣ್ಣ... ಐಷಾರಾಮಿ ಸೂಪರ್ ಬಸ್!!

ಇದು ಹೈಬ್ರಿಡ್ ಬಸ್. ಅತ್ಯಧಿಕ ವೇಗ, ಐಷಾರಾಮಿ, ಆರಾಮದಾಯಕತೆ ಮತ್ತು ಇಂಧನ ದಕ್ಷತೆಯ ಫೀಚರ್ ಗಳನ್ನು ಹೊಂದಿದೆ. ಹಗುರ ಕಾರ್ಬನ್ ಫೈಬರ್ ಮೂಲಕ ಇದರ ಚಾಸೀ ಮತ್ತು ಬಾಡಿ ವಿನ್ಯಾಸ ಮಾಡಲಾಗಿದೆ. ಸಾಮಾನ್ಯ ಬಸ್ ಪ್ರತಿಗಂಟೆಗೆ ನೀಡೋ ವೇಗಕ್ಕಿಂತ ಮೂರು ಪಟ್ಟು ವೇಗದ ಬಸ್ಸಾಗಿದೆ. ಈ ಉದ್ದದ ಬಸ್ಸಿನ ಹಿಂದಿನ ಚಕ್ರ ಝೀರೋ ಟರ್ನ್ ಕಾನ್ಸೆಪ್ಟ್ ನಂತೆ ತಿರುಗುತ್ತದೆ.
ಈ ಸೂಪರ್ ಬಸ್ ನ ಒಳವಿನ್ಯಾಸ ಆಖರ್ಷಕವಾಗಿದ್ದು, ಲಕ್ಷುರಿ ಪ್ರಯಾಣಕ್ಕೆ ಸೂಕ್ತವಾಗಿದೆ. ಪ್ರಯಾಣಿಕರಿಗೆ ಕ್ರೀಡಾ ಕಾರುಗಳಲ್ಲಿ ಸಂಚರಿಸಿದ ಅನುಭವ ದೊರಕುತ್ತದೆ. ಮೇಲ್ಮುಖವಾಗಿ ತೆರೆಯುವ 16 ಡೋರ್ ಗಳು ತೆರೆದಾಗ ಹಾರಲು ಸಿದ್ಧವಾಗಿರುವ ಸಾಲು ಹಕ್ಕಿಗಳಂತೆ ಕಾಣುತ್ತದೆ.
ಈ ಸೂಪರ್ ಬಸ್ ಸವಾರಿಗೆ ವಿಶೇಷ ರಸ್ತೆಯೇನೂ ಬೇಕಾಗಿಲ್ಲ. ಸಾಮಾನ್ಯ ರಸ್ತೆಯಲ್ಲಿ ಎಲ್ಲ ಬಸ್ ನಂತೆ ಸಂಚರಿಸುತ್ತದೆ. ಆದರೆ ವೇಗ ಒಂದಿಷ್ಟು ಜಾಸ್ತಿಯಿರುವುದರಿಂದ ಇದಕ್ಕೆ ವಿಶೇಷ ಪಥ ಇದ್ದರೆ ಒಳ್ಳೆಯದೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಈ ಬಸ್ ವಿಶೇಷ ಬ್ಯಾಟರಿ ಹೊಂದಿದ್ದು, ಒಮ್ಮೆ ಪೂರ್ತಿ ಚಾರ್ಜ್ ಮಾಡಿದ್ದರೆ ಸುಮಾರು 200 ಕಿ.ಮೀ. ಪ್ರಯಾಣ ಮಾಡಬಹುದು. ಬ್ಯಾಟರಿ ಮುಗಿದಾಗ ಬೇರೆ ಬ್ಯಾಟರಿಯನ್ನು ಜೋಡಿಸುವ ವ್ಯವಸ್ಥೆ ಇದರಲ್ಲಿದೆ.
ಡಚ್ ನ ಸಾರಿಗೆ ಸಚಿವಾಲಯ ಈ ಸೂಪರ್ ಬಸ್ ಕಾರ್ಯಕ್ಷಮತೆಯನ್ನು ಅತ್ಯಧಿಕ ವೇಗದ ರೈಲಿಗೆ ಹೋಲಿಸಿದೆ. ಇದರ ನಿರ್ಮಾಣ ಕಾರ್ಯ ಕಳೆದ 2004ರಲ್ಲಿಯೇ ಆರಂಭವಾಗಿತ್ತು. ಇದರ ನಿರ್ಮಾಣಕ್ಕೆ ಸುಮಾರು 115 ಪೌಂಡು ವೆಚ್ಚವಾಗಿದೆಯಂತೆ.


Click it and Unblock the Notifications








