ವೈಟ್ ಹೌಸಿಗೂ ವೈಟ್ ಕಾರಿಗೂ ಏನು ಸಂಬಂಧ?!

By Super

ಬಿಳಿಬಣ್ಣದ ಫೋಕ್ಸ್ ವ್ಯಾಗನ್ ಕಾರು
ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು ಎಂದು ನಾವು ಚಿಕ್ಕದಿರುವಾಗಲೇ ಓದಿದ್ದೇವೆ. ನಮ್ಮ ರಾಜಕಾರಣಿಗಳನ್ನೂ ಸೇರಿಸಿ ಬಿಳಿ ಬಣ್ಣವೆಂದರೆ ಎಲ್ಲರಿಗೂ ಇಷ್ಟದ ಬಣ್ಣ. ಆದರೆ ಅಮೆರಿಕದ ವೈಟ್ ಹೌಸಿಗೂ ವೈಟ್ ಕಾರಿಗೂ ಏನಾದರೂ ಸಂಬಂಧವಿರಬಹುದೇ ಎಂಬುದು ಗೊತ್ತಿಲ್ಲ. ಆದರೆ ಅಲ್ಲಿನ ಹೆಚ್ಚಿನ ಕಾರು ಖರೀದಿದಾರರಿಗೆ ಬಿಳಿ ಬಣ್ಣವೆಂದರೆ ಮೋಸ್ಟ್ ಫೇವರಿಟ್ ಅಂತೆ.

2007ರವರೆಗೆ ಅಮೆರಿಕದ ಹೆಚ್ಚಿನವರಿಗೆ ಸಿಲ್ವರ್ ಬಣ್ಣ ಹೆಚ್ಚು ಇಷ್ಟವಾಗಿತ್ತಂತೆ. ತರುವಾಯ "ಬಿಳಿ ಬಣ್ಣ, ನನ್ನ ಕಾರಿನ ಬಣ್ಣ" ಅಂತ ಎದೆ ತುಂಬಿ ಹಾಡುತ್ತಿದ್ದಾರೆ. ಯಾಕೆ ಹೀಗೆ ಅಂತ ಅಲ್ಲಿನ ಹೀಗೂ ಉಂಟೆ? ತಂಡ(ಅರ್ಥಾತ್ ವಿಶ್ಲೇಷಕರು) ತಲೆಕೆಡಿಸಿಕೊಂಡುಬಿಟ್ಟರು. ಅದಕ್ಕಾಗಿ ಬಹಳಷ್ಟು ಸಮೀಕ್ಷೆ, ಅಧ್ಯಯನವನ್ನು ನಡೆಸಿದ್ದರು. ಎಲ್ಲಾ ಬಣ್ಣದ ಕಾರುಗಳನ್ನು ಲೆಕ್ಕ ಹಾಕಿ ನಡೆಸಿದ ಸಮೀಕ್ಷೆಯಲ್ಲಿ ಬಿಳಿ ಬಣ್ಣವೇ ಮೋಸ್ಟ್ ಫೇವರಿಟ್ ಎಂದು ಕೆಲವು ತಿಂಗಳ ಹಿಂದೆ ಡ್ಯುಪೊಂಟ್ ಕಲರ್ ಪಾಪ್ಯುಲಾರಿಟಿ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.

ಬಿಳಿಯನ್ನರಿಗೆ ಬಿಳಿ ಬಣ್ಣದ ಮೇಲೆ ಯಾಕಪ್ಪ ಇಂತಹ ಮೋಹ? ಕೆಲವು ವರ್ಷಗಳ ನಂತರ ಯಾಕೆ ಸಿಲ್ವರ್ ನಿಂದ ವೈಟ್ ನತ್ತ ಬಣ್ಣ ಬದಲಾಯಿಸಿದರು? ಹೀಗೆ ಹಲವು ಕುತೂಹಲಿಗಳ ಪ್ರಶ್ನೆಗೆ ವಿಶ್ಲೇಷಕರು ಹಲವು ಉತ್ತರಗಳನ್ನು ನೀಡಿದರು. ಅದರಲ್ಲಿ ಕೆಲವು ಪ್ರಮುಖ ಕಾರಣಗಳನ್ನು ನಾವು ಹೀಗೆ ಓದಿ ಕೊಳ್ಳಬಹುದು.

ಹಿಂಜರಿತಕ್ಕೆ ಅಂಜಿ: ಅಲ್ಲಿನವರಿಗೆ ಸರಿಯಾದ ಪಾಠ ಕಲಿಸಿದ್ದು ಕಳೆದ ಆರ್ಥಿಕ ಹಿಂಜರಿತ. ನಂತರ ಅವರು ಹೆಚ್ಚು ಪ್ರಾಕ್ಟಿಕಲ್ ಆಗಿ ಯೋಚಿಸಲು ಸುರು ಮಾಡಿದರಂತೆ. ಇದಕ್ಕೂ ಮುನ್ನ ಬರೀ ಫ್ಯಾಷನ್, ದುಡ್ಡಿನ ಅಹಂಕಾರ(?)ದಿಂದ ಕಾರು ಖರೀದಿಸುತ್ತಿದ್ದರು. ಆಮೇಲೆ ಅವರಿಗೆ ಗೊತ್ತಾಯ್ತು. ಇಂತಹ ವಿಚಿತ್ರ ಬಣ್ಣದ ಕಾರುಗಳು ಮರು ಮಾರಾಟವಾಗೋದು ಕಷ್ಟ ಅಂತ. ಬಿಳಿ ಬಣ್ಣದ ಕಾರುಗಳ ಮರು ಮಾರಾಟನೂ ಸುಲಭ ಮತ್ತು ದೀರ್ಘಕಾಲ ಜೊತೆಯಲ್ಲಿ ಇಟ್ಟುಕೊಳ್ಳಬಹುದು ಎಂಬ ಯೋಚನೆ ಮಾಡತೊಡಗಿದರು.

ಕೂಲ್ ಕೂಲ್ ಬಣ್ಣ:
ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ಕೂಲ್ ಸಿನಿಮಾಕ್ಕಾಗಿ ಕೂಲ್ ಕೂಲ್ ಅನ್ತಾ ಇದ್ದಾರೆ. ಅಮೆರಿಕದ ಕಾರು ಗ್ರಾಹಕರಿಗೆ ಬಿಳಿ ಬಣ್ಣದ ಕಾರುಗಳು ಹೆಚ್ಚು ತಂಪಾಗಿರುತ್ತವೆ ಎಂದು ತಿಳಿದುಕೊಂಡಿದ್ದಾರೆ. ಬೇಸಿಗೆಯ ಬಿಸಿಲಲ್ಲೂ ಬಿಳಿ ಬಣ್ಣದ ಕಾರುಗಳು ಹೆಚ್ಚು ಬಿಸಿಯಾಗುವುದಿಲ್ಲ. ಬಿಳಿ ಬಣ್ಣಕ್ಕೂ ಬೆಳಕಿಗೂ ಯಾವ ನಂಟಿದೆ ಎಂದು ಎಂದೋ ಓದಿದ ವಿಜ್ಞಾನ ಪಾಠ ನೆನಪಿಸಿಕೊಳ್ಳಿರಿ.

ಸುರಕ್ಷತೆಯ ಬಣ್ಣ: ಬಿಳಿಯೆಂದರೆ ಶಾಂತಿಯ ಸಂಕೇತ. ಇದು ಸುರಕ್ಷತೆಯ ಬಣ್ಣವೂ ಹೌದು. ಮೆಲ್ಬೋರ್ನ್ ವಿಶ್ವ ವಿದ್ಯಾನಿಲಯದ ವಿಜ್ಞಾನಿಗಳು ಸುಮಾರು ಎಂಟುವರೆ ಲಕ್ಷ ಕಾರು ಅಪಘಾತಗಳ ಕುರಿತು ನಡೆಸಿದ ಸಮೀಕ್ಷೆಯಲ್ಲಿ ಬಿಳಿ ಬಣ್ಣದ ಕಾರುಗಳ ಅಪಘಾತ ಕಡಿಮೆ ಸಂಖ್ಯೆಯಲ್ಲಿ ಆಗಿರುವುದನ್ನು ಕಂಡುಕೊಂಡಿದ್ದರು. ಮಳೆಯಿರಲಿ, ಕತ್ತಲಿರಲಿ ಉಳಿದ ಬಣ್ಣಗಳಿಗಿಂತ ಬಿಳಿ ಬಣ್ಣ ಎದ್ದು ಕಾಣುವುದು ಬೇಗ. ಹೀಗಾಗಿ ಅಪಘಾತ ಸಾಧ್ಯತೆ ತುಸು ಕಡಿಮೆ.

ಸರಳತೆಯ ಪ್ರತೀಕ: ಬಿಳಿ ಬಣ್ಣವೆಂದರೆ ಸರಳತೆಯ ಬಣ್ಣ. ನಮ್ಮ ರಾಜಕಾರಣಿಗಳು ಕೋಟಿ ಕೋಟಿ ರೂಪಾಯಿ ನುಂಗುತ್ತಿದ್ದರೂ ಬಿಳಿ ಬಣ್ಣದ ಧೋತಿಯೊಂದಿಗೆ ಪ್ರತ್ಯಕ್ಷರಾಗುವುದು ಇದೇ ಕಾರಣಕ್ಕೆ ಇರಬಹುದು. ಅಮೆರಿಕದಲ್ಲಿ ಹೆಚ್ಚಿನವರಿಗೆ ಸರಳತೆಯ, ಶಾಂತಿಯ ಬಣ್ಣವಾಗಿ ಬಿಳಿಬಣ್ಣದ ಕಾರು ಇಷ್ಟವಾಗಿದೆ. ಇದರೊಂದಿಗೆ ತಮ್ಮ ಅಭದ್ರತೆ, ಆರ್ಥಿಕ ಅನಿಶ್ಚಿತತೆ, ದೌರ್ಬಲ್ಯತೆಗಳನ್ನು ಬಿಟ್ಟುಕೊಡಲು ಇಚ್ಚಿಸದವರೂ ಕೂಡ ಬಿಳಿ ಬಣ್ಣದ ಕಾರಿನೊಳಗೆ ಸೇರಿಕೊಂಡಿದ್ದಾರೆ.

ಇದನ್ನೂ ಓದಿ: ಕಾರಿನ ಬಣ್ಣಕ್ಕೂ ಅಪಘಾತಕ್ಕೂ ಸಂಬಂಧವಿದೆಯಾ...?!

ಧರ್ಮ ಕಾರಣ: ಕ್ರಿಶ್ಚಿಯನ್ ಧರ್ಮಿಯರಿಗೆ ಬಿಳಿ ಬಣ್ಣ ಅಂದರೆ ಶ್ರದ್ಧೆಯ ಸಂಕೇತ. ಅದು ಉಲ್ಲಾಸ ಮತ್ತು ಉತ್ಸವದ ಬಣ್ಣವೂ ಹೌದು. ಪೋಪ್ ಧರಿಸಿರುವ ವಸ್ತ್ರ ಕೂಡ ಬಿಳಿ ಬಣ್ಣದ್ದು. ಹೀಗಾಗಿ ಬಿಳಿ ಬಣ್ಣದ ಕಾರು ಇಷ್ಟವಾಗಲು ಅವರ ಧರ್ಮ ಶ್ರದ್ಧೆಯೂ ಕಾರಣವಾಗಿದೆ. ಹೀಗೆ ಆರ್ಥಿಕ ಬಿಕ್ಕಟ್ಟು, ಸೇಫ್ಟಿ, ಸರಳತೆ, ಶಾಂತಿ, ಧರ್ಮ ಎಲ್ಲ ಕಾರಣಗಳಿಂದ ಅಮೆರಿಕದ ಹೆಚ್ಚನವರಿಗೆ ಬಿಳಿ ಬಣ್ಣ ಇಷ್ಟವಾಗಿದೆಯಂತೆ!

More from DriveSpark

Article Published On: Tuesday, April 19, 2011, 11:10 [IST]
English summary
In America car buyers most popular shade is Plain old white color. Some experts do have a few theories to explain the Why many people buy white car. White cars cooler than dark cars. Economic downturn also a reason for preferring white. There is many things buying white color car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+