ಫೆಮಿನಾ ಮಿಸ್ ಇಂಡಿಯಾ ಸುಂದರಿಯರಿಗೆ ಫಾಬಿಯಾ

ಫೆಮಿನಾ ಮಿಸ್ ಇಂಡಿಯಾ 2011 ಕೊನೆಗೊಂಡಿದೆ. ಇದರಲ್ಲಿ ಮೂರು ವಿಭಾಗಗಳಲ್ಲಿ ಮೂವರು ಸುಂದರಿಯರು ಆಯ್ಕೆಯಾಗಿದ್ದಾರೆ. ಕ್ಲೈಮ್ಯಾಕ್ಸ್ ಮುಗಿದ ನಂತರ ಇವರು ಮೂವರು ಆಶ್ಚರ್ಯಗೊಂಡಿದ್ದರು. ಯಾಕೆಂದರೆ ಈ ಮೂವರ ಕೈಗೆ ನೂತನ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು "ಫಾಬಿಯಾ"ದ ಕೀಲಿಕೈಯನ್ನು ಸ್ಕೋಡಾ ನೀಡಿದೆ. ದುಬಾರಿ ಕಾರು ದೊರಕಿದ ಸಂತಸದಲ್ಲಿ ಮೂವರು ಸುಂದರಿಯರ ಮುಖ ಮತ್ತಷ್ಟು ಸುಂದರವಾಗಿ ಕಾಣಿಸಿದೆ.

ಒಟ್ಟು ಮೂರು ವಿಭಾಗದಲ್ಲಿ ಸೌಂದರ್ಯ ಸ್ಪರ್ಧೆ ನಡೆದಿತ್ತು. ಇದರಲ್ಲಿ ಮಿಸ್ ಇಂಡಿಯಾ ವಲ್ಡ್ 2011 ಆಗಿ ಆಯ್ಕೆಯಾದದ್ದು ಕನಿಶ್ತಾ ಧನ್ ಕರ್ ಎಂಬಾಕೆ., ಮಿಸ್ ಇಂಡಿಯಾ ಇಂಟರ್ ನ್ಯಾಶನಲ್ ಕಿರೀಟ ದೊರಕಿದ್ದು ಅಂಕಿತಾ ಶೌರಿ ಎಂಬ ಚೆಲುವಿಗೆ. ಮಿಸ್ ಇಂಡಿಯಾ ಅರ್ಥ್ 2011 ಕಿರೀಟವನ್ನು ಹಸ್ಲಿನ್ ಕೌರ್ ಪಡೆದರು. ಮುಂಬೈನ ಮೆಹಬೂತ್ ಸ್ಟುಡಿಯೋದಲ್ಲಿ ನಡೆದ ಕಾರ್ಯಕ್ರಮದ ಕೊನೆಗೆ ಮೂವರಿಗೂ ಸ್ಕೋಡಾದ ದುಬಾರಿ ಕಾರು ಬಹುಮಾನವಾಗಿ ದೊರಕಿದೆ.

ನ್ಯೂ ಸ್ಕೋಡಾ ಫಾಬಿಯಾ ಎಂಬುದು ಪ್ರೀಮಿಯಂ ಹ್ಯಾಚ್ ಬ್ಯಾಕ್ ಸೆಗ್ಮೆಂಟ್ ನಲ್ಲಿ ಮೊದಲ ಕಾರಾಗಿದೆ. ಇದು ಪೆಟ್ರೊಲ್ ಮತ್ತು ಡೀಸಲ್ ಎಂಜಿನ್ ಗಳಲ್ಲಿ ದೊರಕುತ್ತಿದೆ. ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಇಂಡಿಯಾ ವಲ್ಡ್ ಕಿರೀಟ ಪಡೆದ ಕನಿಶ್ತಾ ಧನಕರ ಮುಂದಿನ ವರ್ಷ ನಡೆಯಲಿರುವ ಜಾಗತಿಕ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸುಂದರಿಯರನ್ನು ಗ್ಯಾಲರಿಯಲ್ಲಿ ನೋಡಿರಿ

More from DriveSpark

Article Published On: Tuesday, April 19, 2011, 15:10 [IST]
English summary
Pantaloons Femina Miss India (PFMI) 2011 winners awarded all new Skoda Fabia Car. Miss India World 2011- Ms. Kanishtha Dhankhar, Miss India International 2011- Ms. Ankita Shorey, Miss India Earth 2011- Ms. Hasleen Kaur.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+