ಸಾವಿರಕ್ಕಿಂತ ಹೆಚ್ಚು ಅಶ್ವಶಕ್ತಿಯ ಹತ್ತು ಸೂಪರ್ ಕಾರುಗಳಿವು!

1985ರಲ್ಲಿ ರಸ್ತೆಗಿಳಿದ ಮೊದಲ ಸೂಪರ್ ಕಾರು ಫೆರಾರಿ ಕಂಪನಿಯದ್ದು. ಇದು ಸಾವಿರಕ್ಕಿಂತ ಹೆಚ್ಚು ಅಶ್ವಶಕ್ತಿ ಹೊಂದಿತ್ತು. ಸದ್ಯ ವೇಗದ ಕಾರು ಖ್ಯಾತಿ ಬುಗಾಟಿ ವೆರೂನ್ ನದ್ದು. ಆದರೆ ಅದಕ್ಕಿಂತಲೂ ಹೆಚ್ಚು ಅಂದರೆ ಎರಡುವರೆ ಹಾರ್ಸ್ ಪವರ್ ಹೊಂದಿರೋ ಕಾರು ಕೂಡ ಇದೆ ಎಂಬುದನ್ನು ಗಮನಿಸಲೇ ಬೇಕು. ಪಟ್ಟಿ ಮಾಡಿದರೆ 20ಕ್ಕೂ ಹೆಚ್ಚು ಕಾರುಗಳು ಸಾವಿರಕ್ಕಿಂತ ಹೆಚ್ಚು ಹಾರ್ಸ್ ಪವರ್ ಹೊಂದಿವೆ. ಅದರಲ್ಲಿ ಪ್ರಮುಖ ಹತ್ತು ಕಾರುಗಳ ಪಟ್ಟಿ ಇಲ್ಲಿದೆ.
ರೆಡ್ ವಿಕ್ಟರ್ ಒನ್: ಇದು 2,200 ಹಾರ್ಸ್ ಪವರ್ ನೀಡುತ್ತದೆ. 9.3 ಲೀಟರ್ ನ ವಿ8 ಎಂಜಿನ್ ಹೊಂದಿದೆ.
ಬ್ರಿಸ್ಟೊಲ್ ಫೈಟರ್ ಟಿ: ಇದು ಸುಮಾರು 1,012 ಹಾರ್ಸ್ ಪವರ್ ಹೊಂದಿದೆ. ವಿ10 ಎಂಜಿನ್ ಹೊಂದಿದ್ದು ಪ್ರತಿಗಂಟೆಗೆ 270 ಕಿ.ಮೀ. ವೇಗವನ್ನು ನೀಡುತ್ತದೆ.
ಎಂಕೆಬಿ ಎಸ್ಎಲ್65 ಎಎಂಜಿ ಬ್ಲ್ಯಾಕ್ ಸೀರಿಸ್ ಪಿ1000: ಇದು ಜರ್ಮನಿಯ ಕಾರು. ಕರೆಕ್ಟಾಗಿ ಒಂದು ಸಾವಿರ ಹಾರ್ಸ್ ಪವರ್ ನೀಡುತ್ತದೆ. ಇದು 6.0 ಲೀಟರ್ ವಿ12 ಎಂಜಿನ್ ಇದರಲ್ಲಿದೆ.
ಕೊಯ್ನಿಸೆಗ್ ಸಿಸಿಎಕ್ಸ್ ಆರ್: ಸುಮಾರು 1,018 ಹಾರ್ಸ್ ಪವರ್ ನೀಡುತ್ತಂತೆ. ಇದು ಜೋಡಿ ಸೂಪರ್ ಚಾರ್ಜ್ ಡ್ ಎಂಜಿನ್ ಹೊಂದಿದ್ದು ಜೈವಿಕ ಇಂಧನದಲ್ಲಿಯಾದರೆ 1,018 ಹಾರ್ಸ್ ಪವರ್ ನೀಡುತ್ತದೆ.
ಎಎಂಎಸ್ ಆಲ್ಫಾ 10 ಆರ್35 ಜಿಟಿ-ಆರ್: ಇದು ಸ್ಟಾಂಡರ್ಡ್ ನಿಸ್ಸಾನ್ ವಿಆರ್38 ವಿ6 ಕಾರಿಗಿಂತ ಎರಡು ಪಟ್ಟು ಹಾರ್ಸ್ ಪವರ್ ಹೊಂದಿದೆ. ಅಂದರೆ ಇದರ ಗರಿಷ್ಠ ಹಾರ್ಸ್ ಪವರ್ 1,100.
ಜೆನ್ವೊ ಎಸ್ಟಿ1: ಇದು ಸುಮಾರು 1,104 ಹಾರ್ಸ್ ಪವರ್ ನೀಡುವ ಸೂಪರ್ ಕಾರು. 7 ಲೀಟರ್ ನ ವಿ8 ಎಂಜಿನ್ ಹೊಂದಿದೆ.
ಜಿಎಫ್ಎಫ್ ಜಿಟಿ9-ಆರ್: ಇದು ಸುಮಾರು 1,120 ಹಾರ್ಸ್ ಪವರ್ ನೀಡುತ್ತಿದ್ದು 4.0 ಲೀಟರ್ ನ ಫ್ಲಾಟ್6 ಎಂಜಿನ್ ಹೊಂದಿದೆ.
ಮೆಲ್ಲಿಂಗ್ ಹೆಲ್ ಕ್ಯಾಟ್: ಸುಮಾರು 1,175 ಹಾರ್ಸ್ ಪವರ್ ನೀಡುವ ಕಾರಿದು. ಇದು 6.0 ಲೀಟರ್ ನ ವಿ10 ಎಂಜಿನ್ ಹೊಂದಿದೆ.
ಲೋಟೆಕ್ ಸೀರಿಯಸ್: ಇದು ಕೂಡ 1,200 ಹಾರ್ಸ್ ಪವರ್ ನೀಡುವ ಸೂಪರ್ ಕಾರಾಗಿದ್ದು 5.6 ಲೀಟರ್ ನ ಮರ್ಸಿಡಿಸ್ ಟ್ವಿನ್ ಟರ್ಬೊ ವಿ8 ಎಂಜಿನ್ ಹೊಂದಿದೆ.
ಬುಗಾಟಿ ವೆರೊನ್ ಸೂಪರ್ ಸ್ಪೋರ್ಟ್: ಇದು 16 ಸಿಲಿಂಡರ್ ನ ಕ್ವಾಡ್ ಟರ್ಬೊ 8.0 ಲೀಟರ್ ಎಂಜಿನ್ ಹೊಂದಿದೆ. ಇದು ಸುಮಾರು 1,200 ಹಾರ್ಸ್ ಪವರ್ ನೀಡುವ ಕಾರಾಗಿದ್ದು ಪ್ರತಿಗಂಟೆಗೆ 258 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ.


Click it and Unblock the Notifications








